ಬೆಳ್ತಂಗಡಿ: ಬಿಲ್ಲವ ಸಂಘದ ಹಿರಿಯ ಮುಖಂಡ ಮೂವರು ಮಾಜಿ ಶಾಸಕರ ಹಿರಿಯ ಸಹೋದರ ಶತಾಯುಷಿ ಕೆ.ಜಿ ಬಂಗೇರ ಅವರು ನಿಧನ ಹೊಂದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಪ್ರತಿಷ್ಠಿತ ಬಿಲ್ಲವ ಮನೆತನವಾದ ಮುಗ್ಗ ಗುತ್ತು ಕುಟುಂಬದ ಹಿರಿಯರಾದ ಕೇದೆ ಗುರುವಪ್ಪ ಬಂಗೇರ (101) ಇವರನ್ನು ಕುಟುಂಬದಲ್ಲಿ ‘ಮಲ್ಲಣ್ಣ’ ಎಂದೇ ಕರೆಯುತ್ತಿದ್ದರು . ಮಂಗಳೂರಿನ ಪಾಂಡೇಶ್ವರದ ತಮ್ಮ ಸ್ವಗೃಹದಲ್ಲಿ ಜ. 25 ರಂದು ನಿಧನ ಹೊಂದಿದ್ದಾರೆ.
ಬೆಳ್ತಂಗಡಿಯ ಮಾಜಿ ಶಾಸಕರಾದ ಚಿದಾನಂದ ಬಂಗೇರ, ವಸಂತ ಬಂಗೇರ ಹಾಗೂ ಪ್ರಭಾಕರ ಬಂಗೇರರ ಹಿರಿಯ ಸಹೋದರರೇ ಮೃತ ಕೆ.ಜಿ ಬಂಗೇರರು. ಮುಗ್ಗ ಗುತ್ತು ಟ್ರಸ್ಟ್ ನ ಅಧ್ಯಕ್ಷರಾಗಿದ್ದರು.
ನಿವೃತ್ತ ಕಂದಾಯ ಅಧಿಕಾರಿಯಾಗಿ ನಂತರ ಡೆಪ್ಯೂಟಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಬಿಲ್ಲವ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಬೆಳ್ತಂಗಡಿ ಶ್ರೀ ಗುರುದೇವಾ ವಿವಿದೋದ್ದೇಶ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಶ್ರೀ ಗುರುದೇವ ಕಾಲೇಜ್ ಬೆಳ್ತಂಗಡಿ ಇದರ ಟ್ರಸ್ಟಿಯಾಗಿ ಹಲವಾರು ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
2022 ರ ನವೆಂಬರ್ ತಿಂಗಳಲ್ಲಿ 100ನೇ ವರ್ಷದ ಜನ್ಮದಿನಾಚರಣೆಯನ್ನು ಬೆಳ್ತಂಗಡಿಯಲ್ಲಿ ಬಿಲ್ಲವ ಸಂಘದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಗಿತ್ತು.
ಮೃತರು ಪತ್ನಿ ಪುತ್ರ ಇಬ್ಬರು ಪುತ್ರಿಯರು ಮಾಜಿ ಶಾಸಕರುಗಳಾದ ಕೆ. ವಸಂತ ಬಂಗೇರ ಹಾಗೂ ಕೆ. ಪ್ರಭಾಕರ ಬಂಗೇರ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.