Ad Widget

ಎಸ್‌ ಎಂ ಕೃಷ್ಣ, ಎಸ್ ಎಲ್ ಭೈರಪ್ಪ, ಹಾಗೂ ಸುಧಾ ಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ ಪ್ರಕಟ

Picsart_23-01-26_01-21-30-539
Ad Widget

Ad Widget

Ad Widget

ನವದೆಹಲಿ, ಜ 26: 2023 ನೇ ಹಾಗೂ 74 ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ ಗೌರವ ಲಭಿಸಿದೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮ, ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ’ ಪಟ್ಟಿ ಬಿಡುಗಡೆ ಮಾಡಲಾಗಿದೆ.

Ad Widget

Ad Widget

Ad Widget

Ad Widget

2023 ನೇ ಸಾಲಿನ ಹಾಗೂ 74 ನೇ ಗಣರಾಜ್ಯೋತ್ಸವದ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಬುಧವಾರ ಕೇಂದ್ರ ಸರ್ಕಾರ ಪ್ರಕಟಿಸಿದ್ದು, ರಾಜ್ಯದ ಪ್ರಮುಖರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರಿಗೆ ಪದ್ಮವಿಭೂಷಣ, ಖ್ಯಾತ ಸಾಹಿತಿ ಎಸ್‍.ಎಲ್ ಭೈರಪ್ಪ ಹಾಗೂ ಇನ್ಫೋಸಿಸ್ ಫೌಂಡೇಷನ್ ನ ಅಧ್ಯಕ್ಷೆ ಸುಧಾಮೂರ್ತಿರವರಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.

Ad Widget

Ad Widget

Ad Widget

Ad Widget

*ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್.ಎಂ. ಕೃಷ್ಣರಿಗೆ ಪದ್ಮವಿಭೂಷಣ,
*ಕಲೆ ಮತ್ತು ಸಾಹಿತ್ಯಕ್ಕೆ ಎಸ್‍.ಎಲ್. ಭೈರಪ್ಪ ರಿಗೆ ಪದ್ಮ ಭೂಷಣ‌
*ಸುಧಾಮೂರ್ತಿ ರವರ ಸಾಮಾಜಿಕ ಕಾರ್ಯಗಳಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.
*ಕೊಡಗಿನ ಜಾನಪದ ನರ್ತಕಿ ರಾಣಿ ಮಾಚಯ್ಯ ರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
*ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಖಾದರ್ ವಲ್ಲಿ ದೂದೇಕುಲ
*ಕಲೆ ವಿಭಾಗದಲ್ಲಿ ತಮಟೆಯ ತಂದೆ ಎಂದು ಪ್ರಖ್ಯಾತರಾದ ನಾಡೋಜ ಪಿಂಡಿಪಾಪನಹಳ್ಳಿ ಮುನಿ ವೆಂಕಟಪ್ಪ ಮತ್ತು ಐ ಶಾ ರಶೀದ್ ಅಹಮದ್ ಕ್ವಾದ್ರಿ
*ಪುರಾತತ್ವ ಶಾಸ್ತ್ರ ವಿಭಾಗದಲ್ಲಿ ಸುಬ್ಬರಾಮನ್ ರಿಗೆ ಪದ್ಮ ಪ್ರಶಸ್ತಿ ಪ್ರಕಟವಾಗಿದೆ.

Ad Widget

Ad Widget

ದೇಶದಲ್ಲಿ ಒಟ್ಟು ಪದ್ಮ ವಿಭೂಷಣ ವನ್ನು 6 , ಪದ್ಮಭೂಷಣ ವನ್ನು 9 ಮತ್ತು ಪದ್ಮಶ್ರೀ ಯನ್ನು 91 ಸಾಧಕರಿಗೆ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

Ad Widget

Leave a Reply

Recent Posts

error: Content is protected !!
%d bloggers like this: