ಪುತ್ತೂರು: ನರಿಮೊಗರು ಶಾಲಾ ಬಳಿ ಮೂರು ಸ್ಕೂಟರ್‌ಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ಜ.24ರಂದು ಬೆಳ್ಳಂಬೆಳಗೆ ನಡೆದಿದೆ.
ಪುತ್ತೂರು ಕಡೆಗೆ ಬರುತ್ತಿದ್ದ ಸ್ಕೂಟರ್ ಚಾಲಕನ ವೇಗದಿಂದ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ಸ್ಕೂಟರ್‌ಗಳಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರರೊಬ್ಬರು ತೀವ್ರ ಗಾಯಗೊಂಡಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಉಳಿದಂತೆ ಇನ್ನೊಂದು ಸ್ಕೂಟರ್‌ನ ಸವಾರ ಶಾಂತಿಗೋಡು ದೇವಸ್ಥಾನದ ಗುಮಸ್ತ ವಿಜಿತ್ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ವೇಗವಾಗಿ ಬಂದು ಅಪಘಾತಕ್ಕೆ ಕಾರಣವಾದ ಸ್ಕೂಟರ್ ಸವಾರ ಉಮ್ಮರ್ ಎಂದು ಸ್ಥಳೀಯರು ತಿಳಿಸಿದ್ದಾರೆ.