Ad Widget

ಕೊಯಿಲ ಗೋಶಾಲೆಯಲ್ಲಿ ಆಹಾರವಿಲ್ಲದೇ ಗೋವುಗಳ ಸಾವು – ನಾವು ಆರಾಧನೆ ಮಾಡುವ ಗೋವನ್ನು ಬದುಕಿಸುವ ಕೆಲಸವಾಗಬೇಕಿದೆ : ರಾಘವೇಶ್ವರ ಶ್ರೀ ಸಮ್ಮುಖ, ನಳಿನ್ ಕುಮಾರ್ ಕಟೀಲು ಎದುರು ಸರಕಾರಕ್ಕೆ ತಿವಿದ ಅಶೋಕ್ ಕುಮಾರ್ ರೈ

24 A
Ad Widget

Ad Widget

Ad Widget

ಪುತ್ತೂರು: ಜ 24 : ಕೊಯಿಲ ಮಲೆನಾಡು ಗಿಡ್ಡ ಸಂರಕ್ಷಣಾ ಕೇಂದ್ರದಲ್ಲಿ ಗೋವುಗಳು ಮೃತಪಡುತ್ತಿರುವ  ಸಮಸ್ಯೆಯ ಬಗ್ಗೆ ಉದ್ಯಮಿ ಅಶೋಕ್ ಕುಮಾರ್ ರೈ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದಕ್ಕೂ ಮೋದಲು ಅವರು  ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ನೂತನ ಶಿಲಾಮಯ ಗರ್ಭಾಗಾರದಲ್ಲಿ ಸಪರಿವಾರ ಶ್ರೀರಾಮದೇವರ ಪುನಃ ಪ್ರತಿಷ್ಠಾಕಾರ್ಯಕ್ರಮದ  ಧರ್ಮ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಮುಂಭಾಗದಲ್ಲೇ ಕೊಯಿಲದಲ್ಲಿ  ಸರ್ಕಾರದಿಂದ ಆಗುತ್ತಿರುವ  ದುರಾಡಳಿತವನ್ನು ಜನರ ಮುಂದೆ ತರುವ ಕಾರ್ಯ ಮಾಡಿದರು.

Ad Widget

Ad Widget

Ad Widget

Ad Widget

ಸರ್ಕಾರದಿಂದ ಗೋಶಾಲೆಗಳು ಆಗಬೇಕಾಗಿದೆ. ವಿದೇಶದಲ್ಲಿ 20-20 ಎಕ್ರೆ ಜಾಗದಲ್ಲಿ ಬೇಲಿ ಹಾಕಿ ವಿವಧ  ಹಂತಗಳನ್ನು ಮಾಡಿ ಸ್ವತಂತ್ರವಾಗಿ ಗೋವುಗಳನ್ನು ಬಿಟ್ಟು ಮೇಯಿಸಲು ವ್ಯವಸ್ಥೆಗಳಿದೆ. ಆದರೆ ನಮ್ಮಲ್ಲಿ ಗೋವುಗಳು ಇದ್ದರೂ, ಗೋಶಾಲೆಗಳನ್ನು ಮುಚ್ಚುವಂತ ಪರಿಸ್ಥಿತಿ ಇದೆ.  ನಮ್ಮ ಪಕ್ಕದ ಕೊಯಿಲದಲ್ಲಿ ಇರುವ ಗೋಶಾಲೆಯಲ್ಲಿ ಸುಮಾರು 7೦೦ ಗೋವುಗಳಿದ್ದು, ಇವತ್ತು ೬ ಹಸುಗಳು ತಿನ್ನಲು ಆಹಾರವಿಲ್ಲದ ಮರಣ ಹೊಂದಿದೆ ಎಂದರು

Ad Widget

Ad Widget

Ad Widget

Ad Widget

   ನಾವು ಶ್ರೀಗಳ ನೇತ್ರತ್ವದಲ್ಲಿ ಮನೆ ಮನೆಗಳಲ್ಲಿ ಗೋವು ಸಾಕುವ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಆದರೇ  ಈಗಿನ ಸರಕಾರದ  ಅವಧಿಯಲ್ಲಿ ಗೋವುಗಳಿಗೆ ತಿನ್ನಲು ಆಹಾರವಿಲ್ಲದ ಪರಿಸ್ಥಿತಿ ಬಂದಿದೆ ಎನ್ನುವುದು ಅತ್ಯಂತ ನೋವಿನ ವಿಷಯ . ಇಂತಹ ಗಂಭೀರ ಪರಿಸ್ಥಿತಿಯನ್ನು ಎಲ್ಲರೂ ಗಮನಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇದೆ. ನಾವು ಆರಾಧನೆ ಮಾಡುವ ಗೋವನ್ನು ಬದುಕಿಸುವ ಕೆಲಸ ನಮ್ಮ ಪ್ರಮುಖರ ಮುಖಾಂತರ  ಸರ್ಕಾರದ ಮುಖಾಂತರ ಆಗಬೇಕೆಂಬ ಬೇಡಿಕೆಯನ್ನು ಇಟ್ಟರು.

ಗೋವಿನ ಬಗ್ಗೆ ಅರಿವನ್ನು ಮೂಡಿಸಿದವರು, ಇವತ್ತು ಮನೆ ಮನೆಯಲ್ಲಿ ಗೋವನ್ನು ಸಾಕ್ಲಿಕೆ ಪೂರಕ ವ್ಯವಸ್ಥೆ ಮಾಡಿದವರು ಶ್ರೀರಾಮಚಂದ್ರಾಪುರಮಠದ ಗುರುಗಳು  ಎನ್ನುವುದು ಸಂಶಯಾತೀತ.  ಶ್ರೀ ರಾಮಚಂದ್ರಾಪುರ ಮಠದ ಗುರುಗಳ ಮಾರ್ಗದರ್ಶನದಂತೆ ಪುತ್ತೂರಿನಲ್ಲಿ 35  ಸಾವಿರ ಜನರನ್ನು ಸೇರಿಸಿ  ಗೋ ಸಂರಕ್ಷಣೆಯ ಜಾಗೃತಿ  ಕಾರ್ಯಕ್ರಮ ಮಾಡಲಾಗಿತ್ತು. ಅದರಲ್ಲಿ ನನಗೂ ಭಾಗವಹಿಸಲು ಒಂದು ಅವಕಾಶವನ್ನು ಮಾಡಿಕೊಟ್ಟಿದ್ದರು. ಆ ಬಳಿಕ ಮಂಗಳೂರಿನಲ್ಲಿ ೧ ಲಕ್ಷ ಜನ ಸೇರಿಸಿ ಮಾಡಿದ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಮೂಲಕ ಈ ಮಟ್ಟಕ್ಕೆ ಬೆಳೆಯಲು ಆಶೀರ್ವದಿಸಿದವರು ಶ್ರೀಗುರುಗಳು ಎಂದು ತಿಳಿಸಿದರು.

Ad Widget

Ad Widget

ಸರಕಾರದ ದುರಾಡಳಿತವನ್ನು ಪ್ರಶ್ನಿಸಿದ ಅಶೋಕ್‌ ಕುಮಾರ್‌ ರೈವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ” ಅಶೋಕ್ ರೈ ಹೇಳಿದ ರೀತಿ ಕೊಯಿಲದಲ್ಲಿ ಆಹಾರ ಸಮಸ್ಯೆ ಇಲ್ಲ, ಅಲ್ಲಿ ಗೋಶಾಲೆ ನಿರ್ಮಾಣ ಮಾಡುತ್ತಿದೆ ನಮ್ಮ ಸರ್ಕಾರ. ಕೊಯಿಲದ ಗೋಶಾಲೆ ಅದ್ಭುತವಾಗಿ ಹೊರಬರ್ತದೆ ಎಂದರು.

ಅಶೋಕ್‌ ಕುಮಾರ್‌ ರೈ ಯವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್‌ ಏನೂ ?

ಕೊಯ್ಲ ಫಾರ್ಮ್ ನಲ್ಲಿ ತಿನ್ನಲು ಪಶುಆಹಾರ (ಫೀಡ್) ಇಲ್ಲದೇ ಸಾಯುತ್ತಿದ್ದಾವೆ ಗೋವುಗಳು..! ಸರಕಾರದ ದಿವ್ಯ ನಿರ್ಲಕ್ಷ….

ಮಾತೆತ್ತಿದರೆ ಗೋರಕ್ಷಣೆಯ ಬಗ್ಗೆ ಗಂಟೆಗಟ್ಟಲೆ ಮಾತಾಡುವ ಜನಪ್ರತಿನಿಧಿಗಳು, ಪ್ರತೀ ಗ್ರಾಮಗಳಲ್ಲೂ ಜಾನುವಾರುಗಳ ಫಾರ್ಮ್ ತೆರೆಯಲಾಗುತ್ತದೆ, ಅದಕ್ಕಾಗಿ ಸರಕಾರೀ ಜಾಗಗಳನ್ನು ಮೀಸಲಿಡಲಾಗುತ್ತದೆ. ಎಲ್ಲರೂ ಗೋವುಗಳನ್ನು ಸಾಕಬೇಕು… ಅವುಗಳ ಮೇವಿಗೆ ಯಾವುದೇ ಕೊರತೆಯಾಗದಂತೆ ಪ್ರತೀ ನೂರು ಗೋವುಗಳಿಗೆ ಒಂದು ಹೆಕ್ಟೇರ್ ನಂತೆ ಭೂಮಿಯಿ ನೀಡಲಾಗುವುದು. ಅಲ್ಲಿ ಚೆಕ್ ಡ್ಯಾಮ್ ಗಳನ್ನೂ ಕಟ್ಟಿ ಹುಲ್ಲು ಬೆಳೆಸಿ ಗೋವುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಅಂತೆಲ್ಲ ಹೇಳಿಕೆ ನೀಡುತ್ತಾರೆ. ಅಷ್ಟೇ ಅಲ್ಲ ಇದಕ್ಕಾಗಿ ರಾಜ್ಯದಲ್ಲಿ “ಮಹಾರಾಷ್ಟ್ರ ಮಾದರಿ ಯಲ್ಲಿ ಫಾರ್ಮ್ ಗಳನ್ನೂ ಸ್ಥಾಪಿಸಲಾಗುವುದು ಅಂತ ಹೇಳಿ ಅದಕ್ಕಾಗಿಯೇ ಅಧಿಕೃತ ಮಹಾರಾಷ್ಟ್ರ ಪ್ರವಾಸವನ್ನೂ ಕೈಗೊಳ್ಳುತ್ತಾರೆ…! ಆದರೆ ಕೊಯಿಲದಲ್ಲಿ ಜಾನುವಾರುಗಳು ಆಹಾರ ಇಲ್ಲದೇ ಹಸಿವೆಯಿಂದ ನರಳಿ ಸಾಯುತ್ತಿವೆ.

ಗೋವುಗಳ ಕುರಿತು ನೈಜ ಕಳಕಳಿ ಇದ್ದಿದ್ದರೆ ಸರಕಾರದ ಸುಪರ್ಧಿಯಲ್ಲಿರುವ ಬಡಪಾಯಿ ಗೋವುಗಳನ್ನು ಹಸಿವೆಯಿಂದ ರಕ್ಷಿಸಲಿ. ಈ ಬಡಪಾಯಿ ಗೋವುಗಳಿಗೆ ಕನಿಷ್ಠ ಪಕ್ಷ ಹೊಟ್ಟೆ ತುಂಬಾ ಮೇವನ್ನಾದರೂ ಹಾಕುವ ಪುಣ್ಯದ ಕೆಲಸ ಮಾಡಬೇಕು… ಬಾಯಿ ಬಾರದ ಆ ಪಶುಗಳು ಹಸಿವೆಯಿಂದ ನರಳಿ ನರಳಿ ಸಾಯುವ ಹಾಗೆ ಆಗದಿರಲು ತುರ್ತಾಗಿ ಜನಪ್ರತಿನಿಧಿಗಳು ಗಮನ ಹರಿಸಬೇಕು

ಕೊಯ್ಲ ಫಾರ್ಮ್ ರಾಜ್ಯದ ಪಶುಸಂಗೋಪನಾ ಇಲಾಖೆಯ ಅಡಿಯಲ್ಲಿ ಬರುವ ಜಾನುವಾರು ತಳಿ ಸಂವರ್ಧನಾ ಕೇಂದ್ರ… ಈಗ ಇಲ್ಲಿಯೇ ಹೊಸ ಪಶುವೈದ್ಯಕೀಯ ಕಾಲೇಜು ಕೂಡಾ ಬರುತ್ತಿದೆ. ಆದರೆ ಇಲ್ಲಿನ ನೂರಾರು ಗೋವುಗಳಿಗೆ ಕಳೆದ ಕೆಲ ಸಮಯದಿಂದ ಸರಕಾರ ಮೇವನ್ನೇ ಪೂರೈಸಿಲ್ಲ.. ಕೊಯ್ಲ ಹುಲ್ಲುಗಾವಲು ಈ ಚಳಿಗಾಲ ಮತ್ತು ಬೇಸಿಗೆಯಲ್ಲಿ ಸಂಪೂರ್ಣ ಒಣಗಿದೆ. ಅಲ್ಲಿ ಒಣ ಹುಲ್ಲು ಬಿಟ್ಟರೆ ಬೇರೇನೂ ತಿನ್ನಲು ಸಿಗುವುದಿಲ್ಲ. ಆದರೆ ಸರಕಾರ ಪೂರೈಕೆ ಮಾಡಬೇಕಿದ್ದ ಪಶು ಆಹಾರವನ್ನು ಸರಿಯಾಗಿ ಪೂರೈಕೆ ಮಾಡದೇ ಇಲ್ಲಿರುವ ಹಸುಗಳು ಹಸಿವೆಯಿಂದ ಪ್ರಾಣ ಕಳಕೊಳ್ಳುತ್ತಿವೆ… ಈಗ ಕಳೆದೊಂದು ವಾರದಿಂದೀಚೆಗೆ ಕೊಯ್ಲ ಫಾರ್ಮ್ ನಲ್ಲಿ ಹಲವಾರು ದನಗಳು ಹೊಟ್ಟೆಗಿಲ್ಲದೆ ಸತ್ತಿದೆ. ಇಲ್ಲಿನ ಅಧಿಕಾರಿಗಳು ತಮ್ಮ ಮೇಲಿನ ಅಧಿಕಾರಿಗಳಿಗೆ ಅದೆಷ್ಟು ಕೇಳಿಕೊಂಡರೂ, ಮನವಿ ಕಳಿಸಿದರೂ ಈ ಕೇಂದ್ರಕ್ಕೆ ಪಶು ಆಹಾರ ಬರಲೇ ಇಲ್ಲ..

ಕೊಯ್ಲ ದಲ್ಲಿರುವ ಫಾರ್ಮ್ ಮತ್ತು ಅದರಲ್ಲಿರುವ ಆರುನೂರೋ ಏಳುನೂರೋ ದನಗಳು… ಇವುಗಳಿಗೆ ಆಹಾರ ಒದಗಿಸುವ ಕುರಿತು ತಕ್ಷಣವೇ ಜನಪ್ರತಿನಿಧಿಗಳು ಗಮನಹರಿಸಬೇಕಾದ ಅವಶ್ಯಕತೆ ಇದೆ. ಇದು ಆಗ್ರಹ ಕೂಡಾ….

ಅಶೋಕ್ ಕುಮಾರ್ ರೈ
ರೈ ಎಸ್ಟೇಟ್, ಕೋಡಿಂಬಾಡಿ.

Ad Widget

Leave a Reply

Recent Posts

error: Content is protected !!
%d bloggers like this: