ಬೆಂಗಳೂರು, ಜ 24 : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಬೃಹತ್ ಅಕ್ರಮಗಳ ಸಂಬಂಧಪಟ್ಟಂತೆ ದಾಖಲೆ ಹಾಗೂ ಸಾಕ್ಷಾಧಾರಗಳ ಸಹಿತ ಸಂಪೂರ್ಣ ದಾಖಲೆ ಒದಗಿಸಿದ್ದರೂ ತನಿಖೆ ನಡೆಸದೆ ಲೋಕಾಯುಕ್ತ ಹಾಗೂ ಭ್ರಷ್ಟಾಚರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು 14 ಬೃಹತ್ ಹಗರಣಗಳನ್ನು ಮುಚ್ಚಿಹಾಕಿರುವುದು ಬಹಿರಂಗವಾಗಿದೆ ಎಂದು ಬೆಂಗಳೂರನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಸೇರಿ ಆ ಅವಧಿಯಲ್ಲಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ.ಖಾದರ್, ಕಾಂಗ್ರೆಸ್ಸಿನ ನಾಯಕರ, ಹಿರಿಯ ಅಧಿಕಾರಿಗಳಿಂದ ರಾಜಕೀಯ ಮತ್ತು ಹಣದ ಪ್ರಭಾವಕ್ಕೆ ಒಳಗಾಗಿದ್ದು, ಲೋಕಾಯುಕ್ತ ಹಾಗೂ ಎಸಿಬಿ ಅಧಿಕಾರಿಗಳು, ದೂರುದಾರರಿಂದ ಯಾವುದೇ ಹೇಳಿಕೆ ಪಡೆಯದೆ ಏಕಾಏಕಿ 14 ಹಗರಣ ತನಿಖೆಯನ್ಜು ಮುಚ್ಚಿಹಾಕಿದ್ದಾರೆ. ಹಾಗಾಗಿ ಆ ಎಲ್ಲಾ 14 ಹಗರಣಗಳ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ದಾಖಲೆ ಸಮೇತ ದೂರು ಸಲ್ಲಿಕೆಯಾದರೂ ಅಧಿಕಾರಿಗಳು ಕಾನೂನಿನ ಎಲ್ಲ ನಿಯಮವನ್ನು ಗಾಳಿಗೆ ತೂರಿ ಹಗರಣಗಳ ತನಿಖೆಯನ್ನು ಮುಕ್ತಾಯಗೊಳಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮುಚ್ಚಿ ಹಾಕಿರುವ ಪ್ರಕರಣಗಳ ಸಂಬಂಧ ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಪಿಐಎಲ್ ಸಲ್ಲಿಸಲಾಗುವುದು. ಸಿಎಂ ಬಸವರಾಜ ಬೊಮ್ಮಾಯಿ, ಹಗರಣಗಳನ್ನು ಸಿಐಡಿ ಮೂಲಕ ತನಿಖೆ ನಡೆಸಲು ತಕ್ಷಣ ಆದೇಶ ಹೊರಡಿಸಬೇಕು.
2013 ರಿಂದ 2018ರವರೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 121 ಬೃಹತ್ ಹಗರಣಗಳ ನಡೆದಿವೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಸಂಪೂರ್ಣ ದಾಖಲೆಗಳ ಸಹಿತ ಎಸಿಬಿ ಮತ್ತು ಲೋಕಾಯುಕ್ತಕ್ಕೆ ಪ್ರತ್ಯೇಕವಾಗಿ ದೂರು ದಾಖಲಿಸಲಾಗಿತ್ತು ಎಂದು ಎನ್. ಆರ್.ರಮೇಶ್ ವಿವರಿಸಿದರು.
ರಮೇಶ್ ರ ಈ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಭಾರೀ ತಲ್ಲಣ ಉಂಟು ಮಾಡಿದೆ. ಇನ್ನಷ್ಟು ಬಿಜೆಪಿ ಮುಖಂಡರು ತನಿಖೆಗೆ ಒತ್ತಾಯಿಸಿದ್ದಾರೆ.