ಜಮ್ಮು – ಕಾಶ್ಮೀರ, ಜ 23 : 2016 ರಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತು ಕೇಂದ್ರ ಸರ್ಕಾರ ಸುಳ್ಳುಗಳನ್ನು ಹರಡುತ್ತಿದೆ ಎಂದು ಕಾಂಗ್ರೆಸ್ ನ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಜಮ್ಮುವಿನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಮಾರಂಭದಲ್ಲಿ ಮಾತನಾಡಿದರು.
Digvijay Singh questions surgical strikes. Statements made by imbecile congress leaders, calling Osama-bin-Laden, 'Osama-ji' has ruined the congress party. Boggles my mind, @RahulGandhi still wants to associate with such idiots. We need opposition with constructive criticism. pic.twitter.com/ICDomAmISG
— Shesh Paul Vaid (@spvaid) January 23, 2023
ಕಾಂಗ್ರೆಸ್ ನ ಹಲವು ನಾಯಕರು ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ದಾಳಿ ನಡೆಸಿಯೇ ಇಲ್ಲ ಎನ್ನುವಂತಹಾ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಭಾರತೀಯ ಸೇನೆಯು ಪತ್ರಿಕಾಗೋಷ್ಠಿ ನಡೆಸಿ ಸರ್ಜಿಕಲ್ ಸ್ಟ್ರೈಕ್ ಕುರಿತು ಹೇಳಿಕೆ ನೀಡಿದ್ದರು. ಪಾಕ್ ಕಡೆಯಿಂದ ಈ ದಾಳಿ ಕುರಿತು ಹೇಳಿಕೆ ಬಂದಿತ್ತು. ಬಳಿಕ ಕಾಂಗ್ರೆಸ್ ನಾಯಕರು ತುಟಿಕ್ ಪಿಟಿಕ್ ಎನ್ನಲಿಲ್ಲ.
ಆದರೆ ಇದೀಗ ಕಾಂಗ್ರೇಸ್ ಪಕ್ಷವು ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತು ಓಲೈಕೆಯ ರಾಜಕಾರಣಿ ನಡೆಸುತ್ತಿದೆ. ಯಾವೊಬ್ಬ ಕಾಂಗ್ರೆಸ್ ನಾಯಕರೂ ದಿಗ್ವಿಜಯ್ ಸಿಂಗ್ ಕುರಿತು ವಿಷಾದ ವ್ಯಕ್ತಪಡಿಸಿಲ್ಲ. ಈ ಹೇಳಿಕೆಯು ಕಾಂಗ್ರೆಸ್ ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಿಂಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯ, “ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ 21 ದ್ವೀಪಗಳಿಗೆ ಭಾರತದ 21 ಪರಮ ವೀರ ಚಕ್ರ ಪ್ರಶಸ್ತಿ ವಿಜೇತರ ಹೆಸರನ್ನಿಟ್ಟ ದಿನದಂದು ಕಾಂಗ್ರೆಸ್ ಮತ್ತು ದಿಗ್ವಿಜಯ್ ಸಿಂಗ್ ಪಾಕಿಸ್ತಾನದ ಭಾಷೆ ಮಾತನಾಡುತ್ತಾರೆ ಹಾಗೂ ನಮ್ಮ ಸೇನಾ ಪಡೆಗಳ ಶೌರ್ಯ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಾರೆ. ಇದು ನಾಚಿಕೆಗೀಡು,” ಎಂದು ಟ್ವೀಟ್ ಮಾಡಿದ್ದಾರೆ.