Connect with us

ಬಿಗ್ ನ್ಯೂಸ್

Sanjeeva Poojary | ಭಜಕರ ಹಾಗೂ ಹಿಂದೂ ಸಂಘಟನೆಗಳ ನಿಂದನೆ ಆರೋಪ ಎದುರಿಸುತ್ತಿರುವ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅಮಾನತು ಆದೇಶಕ್ಕೆ ತಡೆ

Ad Widget

Ad Widget

ಕಡಬ: ಗ್ರಾಮ ಸಭೆಯಲ್ಲಿ ಉಡಾಫೆ ಉತ್ತರ, ಸಾಮಾಜಿಕ ಜಾಲತಾಣದಲ್ಲಿ ಭಜಕರ ನಿಂದನೆ ಹಾಗೂ ಹಿಂದೂ ಸಂಘಟನೆಯನ್ನು ಗುರಿಯಾಗಿಸಿ ಪೋಸ್ಟ್ ಹಾಕುತ್ತಿದ್ದ ಆರೋಪ ಎದುರಿಸುತಿದ್ದ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರನ್ನು (Sanjeeva Poojary) ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಫಾರಸ್ಸಿನ ಮೆರೆಗೆ ಅಮಾನತುಗೊಳಿಸಲಾಗಿತ್ತು, ಇದೀಗ ಈ ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಧೀಕರಣ (KSAT) ತಡೆ ನೀಡಿದೆ.

Ad Widget

Ad Widget

Ad Widget

Ad Widget

ಸಾಮಾಜಿಕ ಜಾಲತಾಣದಲ್ಲಿ ಭಜಕರ ಬಗ್ಗೆ ನಿಂದನೆ, ಹಿರೇಬಂಡಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಉಡಾಫೆಯಾಗಿ ವರ್ತಿಸಿದ ಕೊಯಿಲ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.

Ad Widget

Ad Widget

Ad Widget

ಸಂಜೀವ ಪೂಜಾರಿಯವರು ಹಲವಾರು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ತಿಂಗಳುಗಳ ಹಿಂದೆ ಭಜನೆ ಮಾಡುವ ಭಜಕರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು ಇದರ ವಿರುದ್ಧ ಬಜರಂಗದಳದ ಕಾರ್ಯಕರ್ತರು ಇವರ ಅಮಾನತಿಗೆ ಒತ್ತಾಯಿಸಿ ಬೀದಿಗೆ ಇಳಿದಿದ್ದರು. ಇದೀಗ ಅಮಾನತು ಆದೇಶ ಬಂದ ಹತ್ತೇ ದಿನದಲ್ಲಿ ನ್ಯಾಯಾಲಯ ತಡೆ ನೀಡಿ ಎಂದಿನಂತೆ ಕರ್ತವ್ಯ ನಿರ್ವಹಿಸಲು ಆದೇಶಿಸಿದೆ.

Ad Widget

ಈ ನಡುವೆ ರಾತ್ರಿ ನೂರಾರು ಜನ ತನ್ನ ಮನೆಗೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಚಾರ ವಿಧಾನಸೌಧದಲ್ಲೂ ಚರ್ಚೆಯಾಗಿತ್ತು.

Ad Widget

Ad Widget

ಸಂಜೀವ ಪೂಜಾರಿಯವರ ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ನಿಯಮ 1958 ನಿಯಮ 98ರ ಪ್ರಕಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಸದ್ರಿ ನೌಕರರಿಗೆ ಅಮಾನತ್ತಿನ ಅವಧಿಗೆ ಅವರ ಕೇಂದ್ರಸ್ಥಾನ ಮತ್ತೂರು ಎಂದು ನಿಗಧಿಪಡಿಸಿದೆ. ಹಾಗೂ ಕೇಂದ್ರಸ್ಥಾನವನ್ನು ಬಿಡುವ ಮೊದಲು ವಲಯ ಅರಣ್ಯಾಧಿಕಾರಿ ಪುತ್ತೂರು ಇವರ ಪೂರ್ವಾನುಮತಿಯನ್ನು ಪಡೆಯತಕ್ಕದು ಎಂದು ಆದೇಶಿಸಿ ಅಮಾನತು ಮಾಡಲಾಗಿದೆ.

ಭಜನೆ ಆರೋಪದ ಬಗ್ಗೆ ಸಂಜೀವ ಪೂಜಾರಿ ಅಭಿಪ್ರಾಯ
Click to comment

Leave a Reply

ರಾಜ್ಯ

ನಾಲ್ಕು ಎಕರೆ ಬರಡು ಭೂಮಿಯಲ್ಲಿ ಡ್ರಾಗನ್ ಫ್ರುಟ್ ಕೃಷಿ : ವರ್ಷಕ್ಕೆ 12ರಿಂದ 16ಲಕ್ಷ ಆದಾಯ

Ad Widget

Ad Widget

ಕಾಗವಾಡ: ಉಷ್ಣ ವಲಯದಲ್ಲಿ ಬೆಳೆಯುವ ಡ್ರ್ಯಾಗನ್‌ ಪ್ರೂಟ್‌ ಕಡಿಮೆ ಕ್ಯಾಲೊರಿ ಹಾಗೂ ವಿಟಮಿನ್‌ ಸಿ, ಬಿ1, ಬಿ2, ಬಿ3, ಐರನ್‌, ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಹೇರಳವಾಗಿ ಹೊಂದಿರುತ್ತದೆ. ಪೌಷ್ಠಿಕಾಂಶದ ಮೌಲ್ಯಗಳಿಂದಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಹಾಗಾಗಿ ರೈತ ಮಹಿಳೆಯೊಬ್ಬರು ಬರಡು ಭೂಮಿಯಲ್ಲಿ ಡ್ರಾಗನ್ ಫ್ರುಟ್ ಬೆಳೆದು ಕೈತುಂಬಾ ಆದಾಯ ಪಡೆದುಕೊಂಡು ಮಾದರಿಯಾಗಿದ್ದಾರೆ.

Ad Widget

Ad Widget

Ad Widget

Ad Widget

ಕಾಗವಾಡ ಮತ ಕ್ಷೇತ್ರದ ಆಜೂರ ಗ್ರಾಮದ ಲತಾ ರಾವಸಾಬ ಐಗಳಿ ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಡ್ರಾಗನ್ ಫ್ರುಟ್ ಬೆಳೆದು ವರ್ಷಕ್ಕೆ 12ರಿಂದ 16 ಲಕ್ಷ ಆದಾಯವನ್ನು ಪಡೆದುಕೊಂಡು ಕೃಷಿಯಲ್ಲಿ ಲಾಭದಾಯಕ ಬೆಳೆ ಬೆಳೆಯುತ್ತಿದ್ದಾರೆ. ಒಟ್ಟು ನಾಲ್ಕು ಎಕರೆಯಲ್ಲಿ 6ಸಾವಿರ ಸಸಿಗಳನ್ನು ನಾಟಿ ಮಾಡಿ ಕೈತುಂಬಾ ಆದಾಯ ಪಡೆಯುತ್ತಿದ್ದಾರೆ. ಫಸಲನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ, ಕೊಲ್ಲಾಪುರ, ಮತ್ತು ಹೈದರಾಬಾದ್‌, ವಿಜಯಪೂರ, ಬೆಂಗಳೂರು, ಮಂಗಳೂರು, ನಗರಗಳಿಗೆ ಸರಬರಾಜು ಮಾಡುತ್ತಾರೆ.

Ad Widget

Ad Widget

Ad Widget

ಲತಾ ಐಗಳಿ ಅವರ ಮಾತು:

Ad Widget

ಪ್ರತಿ ಕೆಜಿಗೆ ₹80 ರಿಂದ ₹200ರ ವರಗೆ ಮಾರಾಟ ವಾಗುತ್ತದೆ. ಎಕರೆಗೆ ₹6 ಲಕ್ಷದಿಂದ ₹8 ಲಕ್ಷ ಆದಾಯ ಬರುತ್ತದೆ. ಇದಕ್ಕೆ ರೋಗಬಾಧೆ ಕಡಿಮೆ, ನೀರಿನ ಪ್ರಮಾಣವು ಕಡಿಮೆ ತಗಲುವುದರಿಂದ ಕೀಟನಾಶಕಗಳ ನಾಶಕ ಬಳಕೆ ಇಲ್ಲದಿರುವದರಿಂದ ಖರ್ಚು ಕಡಿಮೆಯಾಗಿ ಆದಾಯ ಲಾಭದಾಯಕವಾಗಿದೆ. ತಮ್ಮ ಪತಿ ರಾವಸಾಬ ಐಗಳಿ ಸಾಹಾಯದಿಂದ ಬೆಳೆಯನ್ನು ಬೆಳೆದು ನಾವು ಖುಷಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಲತಾ ಐಗಳಿ.
ಈ ಬೆಳೆಯಲ್ಲಿ ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ಹೈನುಗಾರಿಕೆಯಿಂದ ಬರುವ ಸಾವಯುವ ಗೊಬ್ಬರ, 40 ದಿನಗಳ ಕಾಲ ಅದು ಎರೆ ಹುಳಗಳು ತಯಾರಾಗುವರೆಗೆ ಕಾದು ಅದನ್ನು ಬಳಸಿ ಈ ಡ್ರಾಗನ್ ಫ್ರುಟ್ ಬೆಳೆಯುತ್ತಿದ್ದೇವೆ ಎಂದು ಹೇಳಿದರು.

Ad Widget

Ad Widget


ರೈತರಿಗೆ ಉಚಿತವಾಗಿ ಡ್ರ್ಯಾಗನ್ ಸಸಿ ನೀಡುತ್ತಿರುವ ದಂಪತಿ:

ಪಕ್ಕದ ರೈತರಿಗೆ ಅನುಕೂಲವಾಗಲಿ ಎಂದು ಈ ದಂಪತಿ ಉಚಿತವಾಗಿ ಡ್ರಾಗನ್‌ ಫ್ರುಟ್ ಸಸಿಗಳನ್ನು ವಿತರಣೆ ಮಾಡಿ ಉದಾರತೆ ಮೆರೆಯುತ್ತಿದ್ದಾರೆ. ಡ್ರಾಗನ್‌ ಫ್ರುಟ್‌ನ ಹಲವು ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸದ್ಯ ನಾವು ನಮ್ಮ ತೋಟದಲ್ಲಿ ಐದು ತೆರನಾದ ಹಣ್ಣುಗಳನ್ನು ಬೆಳೆಯುತ್ತಿದ್ದೇವೆ. ರೆಡ್ ವೈಟ್ ಯಲ್ಲೋ ವೈಟ್ ಜಂಬೂ ರೆಡ್ ಸಿ ವೈರಟಿ ರೆಗ್ಯುಲ‌ರ್ ರೆಡ್‌ ತರಹದ ಹಣ್ಣು ಬೆಳೆಯುತ್ತೇವೆ. ತಂತ್ರಜ್ಞಾನ ಬಳಸಿಕೊಂಡು ನಮ್ಮ ಜಮೀನುಗಳಿಗೆ ಹೊಂದುವಂತಹ ಹಲವು ಬೆಳೆಗಳನ್ನು ಬೆಳೆಯಬಹುದು. ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ರೈತರು ಬೇರೆ ಬೆಳೆಗಳ ಕಡೆ ಗಮನವನ್ನು ಕೊಡಬೇಕು ಎಂದು ರೈತರಿಗೆ ಸಲಹೆ ನೀಡುತ್ತಾರೆ ಲತಾ ಐಗಳಿ.

ಮಧುಮೇಹ ಅಧಿಕ ರಕ್ತದೊತ್ತಡ ಕ್ಯಾನ್ಸ‌ರ್ ಬಿಳಿ ರಕ್ತ ಕಣಗಳು ಹೆಚ್ಚಿಸುವುದು ಹೀಗೆ ಹಲವು ರೋಗಗಳಿಗೆ ಈ ಹಣ್ಣು ಪ್ರಯೋಜನವಾಗಲಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ಹೇಳುತ್ತಾರೆ .

Continue Reading

ರಾಜ್ಯ

Karnataka Land Revenue Amendment Bill-2022 : ರೈತ ಹೋರಾಟಕ್ಕೆ ಮಣಿದ ರಾಜ್ಯ ಸರಕಾರ- ಕೃಷಿ ಭೂಮಿ ಖರೀದಿ ಕುರಿತ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕ-2022 ವಾಪಸ್ಸಿಗೆ ನಿರ್ಧಾರ

Ad Widget

Ad Widget

Karnataka Land Revenue Amendment Bill-2022 ಬೆಳಗಾವಿ: ರೈತರ ಹೋರಾಟಕ್ಕೆ ಮಣಿದು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Ad Widget

Ad Widget

Ad Widget

Ad Widget

ಈ ಮೊದಲು ಕೃಷಿ ಭೂಮಿ ಹೊಂದಿದವರು ಮಾತ್ರ ಕೃಷಿ ಭೂಮಿ ಖರೀದಿಗೆ ಅವಕಾಶ ಇತ್ತು. 2022 ರಲ್ಲಿ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕದ ಮೂಲಕ ಯಾರು ಬೇಕಾದರೂ ಭೂಮಿ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು.

Ad Widget

Ad Widget

Ad Widget

ಬಿಜೆಪಿ ಸರ್ಕಾರದ ಅವಧಿಯ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿದೇಯಕವನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕೆಲವೊಂದು ಹೊಸ ತಿದ್ದುಪಡಿಯೊಂದಿಗೆ ನೂತನ ವಿಧೇಯಕ ಈ ಬಾರಿಯ ಅದಿವೇಶನದಲ್ಲೇ ಮಂಡಿಸಲು ತೀರ್ಮಾನಿಸಲಾಗಿದೆ.

Ad Widget
Continue Reading

ರಾಷ್ಟ್ರೀಯ

online priest Fraud ಪೂಜೆಗೆಂದು ದುಡ್ಡು ಪಡೆದು ಪಂಗನಾಮ: 80 ಲಕ್ಷ ರೂ ವಂಚಿಸಿದ ‘ಆನ್‌ಲೈನ್ ʼ ಆರ್ಚಕ

Ad Widget

Ad Widget

ಬೆಂಗಳೂರು: ಇತ್ತೀಚಿಗೆ ಸಾಕಷ್ಟು ಆನ್ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಆತಂಕಕಾರಿಯಾಗಿದೆ. ಪ್ರತಿದಿನ ಹೊಸ ಹೊಸ ನಮೂನೆಯ ಮೋಸಗಳನ್ನು ಕಾಣಬಹುದಾಗಿದೆ. ಈ ವಂಚನೆ ಈಗ ಧಾರ್ಮಿಕ ಕ್ಷೇತ್ರಕ್ಕೂ ಕಾಲಿಟ್ಟಿದೆ. ಆರ್ಚಕರ ಸೋಗಿನಲ್ಲಿ ವ್ಯಕ್ತಿಯೊಬ್ಬರು ಆನ್‌ಲೈನ್ ಮೂಲಕ ₹ 80 ಸಾವಿರ ಪಡೆದು ಮಹಿಳೆಯೊಬ್ಬರಿಗೆ ವಂಚಿಸಿರುವ ಘಟನೆ ಬೆಂಗಳೂರು ನಗರದ ಬನ್ನೇರುಘಟ್ಟ ಬಳಿ ನಡೆದಿದೆ.

Ad Widget

Ad Widget

Ad Widget

Ad Widget

‘ಬನ್ನೇರುಘಟ್ಟ ರಸ್ತೆಯ ನಿವಾಸಿಯಾಗಿರುವ 36 ವರ್ಷದ ಮಹಿಳೆಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

Ad Widget

Ad Widget

Ad Widget

ಈ ವಂಚನೆ ಪ್ರಕರಣದ ಬಗ್ಗೆ ಮಹಿಳೆ ಕೊಟ್ಟಿರುವ ಮಾಹಿತಿಯ ಪ್ರಕಾರ, ಮಹಿಳೆ ತಮ್ಮ ಮನೆಯಲ್ಲಿ ಪೂಜೆ ಮಾಡಿಸಲು ತೀರ್ಮಾನಿಸಿದ್ದರು. ಇದಕ್ಕಾಗಿ ಪೂಜಾರಿ ಅವರನ್ನು ಹುಡುಕುತ್ತಿದ್ದರು. ಸ್ನೇಹಿತರೊಬ್ಬರು ಪೂಜಾರಿ ಶರಣ್ ಭಟ್ ಎಂಬುವರ ಮೊಬೈಲ್ ನಂಬರ್ ನೀಡಿದ್ದರು. ಅದಕ್ಕೆ ಕರೆ ಮಾಡಿದ್ದ ಮಹಿಳೆ, ಪೂಜೆ ಮಾಡಿಕೊಡುವಂತೆ ವಿನಂತಿಸಿದ್ದರು.’

Ad Widget

ಪೂಜೆ ಮಾಡಲು ಒಪ್ಪಿದ್ದ ಪೂಜಾರಿ, ‘ನನ್ನ ಖಾತೆಗೆ ₹ 50,000 ಕಳುಹಿಸಿ. ಅದನ್ನು ದೇವರ ಮುಂದೆ ಇರಿಸಿ ಕೆಲದಿನ ಪೂಜೆ ಮಾಡುತ್ತೇನೆ. ನಂತರ, ನಿಮ್ಮ ಮನೆಗೂ ಅದೇ ಹಣವನ್ನು ತಂದಿಟ್ಟು ಪುನಃ ಪೂಜೆ ಮಾಡುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ಮಹಿಳೆ, ಹಣ ಕಳುಹಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

Ad Widget

Ad Widget

‘ಪೂಜೆ ಸಾಮಗ್ರಿಗಳನ್ನು ಖರೀದಿಸಬೇಕೆಂದು ಹೇಳಿದ್ದ ಆರೋಪಿ, ಪುನಃ ₹ 30 ಸಾವಿರ ಪಡೆದಿದ್ದ. ಇದಾದ ನಂತರ ಆರೋಪಿ, ಪೂಜೆ ಮಾಡಲು ಬಂದಿದ್ದ. ಹಣವನ್ನೂ ವಾಪಸು ಕೊಡದೇ ಪರಾರಿಯಾಗಿದ್ದಾನೆ’ ಎಂದು ಹೇಳಿದರು.

Continue Reading

Trending

error: Content is protected !!