ಪುತ್ತೂರು, ಜ 23 : ಈಗಾಗಲೇ ಪುತ್ತೂರು ತಾಲೂಕಿನ ಮೊಟ್ಟಮೊದಲ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಹೊಂದಿರುವ ವಿವೇಕಾನಂದ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಎಂ.ಆರ್.ಪಿ.ಎಲ್. ಪ್ರಾಯೋಜಿತ ತ್ಯಾಜ್ಯ ನೀರು ಸಂಸ್ಕರಣ ಸ್ಥಾವರದ ಎರಡನೇ ಘಟಕದ ಲೋಕಾರ್ಪಣಾ ಸಮಾರಂಭವು ನಾಳೆ(ಜ 24) ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ವಿವೇಕಾನಂದ ಪಾಲಿಟೆಕ್ನಿಕ್‌ನ ಸಭಾಭವನ (ಎ ವಿ ಸಭಾಂಗಣ)ದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮವು ಜರಗಲಿದೆ.
ಪುತ್ತೂರು ನಗರಸಭಾ ಅಧ್ಯಕ್ಷರಾದ ಶ್ರೀ ಜೀವಂಧರ ಜೈನ್, ಎಂ.ಆರ್.ಪಿ.ಎಲ್.ನ ಗ್ರೂಪ್, ಜನರಲ್ ಮ್ಯಾನೇಜರ್(ಮಾನವ ಸಂಪನ್ಮೂಲ) ಶ್ರೀ ಕೃಷ್ಣ ಹೆಗ್ಡೆ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಅಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್, ಬಂಗಾರಡ್ಕ, ರ ಉಪಸ್ಥಿತಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಂಜೀವ ಮಠಂದೂರು ನಾಳೆ(ಜ.24) ಲೋಕಾರ್ಪಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ ಎಂದು ಪಾಲಿಟೆಕ್ನಿಕ್‌ನ ಪ್ರಕಟಣೆಯು ತಿಳಿಸಿದೆ.
ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಮೊದಲ ತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಾಪನೆ ಯಶಸ್ವಿಯಾಗಿತ್ತು ಅದಲ್ಲದೆ ಪ್ರಶಂಸೆಗೆ ಪಾತ್ರವಾಗಿತ್ತು.