Connect with us

ದಕ್ಷಿಣ ಕನ್ನಡ

ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ –ಒಕ್ಕಲಿಗ ಮೀಸಲಾತಿ ಬಗ್ಗೆ ಸರಕಾರ ಶೀಘ್ರ ನಿಲುವು ಪ್ರಕಟಿಸಲಿ : ಡಾ. ನಿರ್ಮಲಾನಂದನಾಥ ಶ್ರೀ

Ad Widget

Ad Widget

Ad Widget

Ad Widget Ad Widget

ಪುತ್ತೂರು: ಒಕ್ಕಲಿಗ ಸಮುದಾಯಕ್ಕೆ 4 ಶೇ ಮೀಸಲಾತಿ ಹೆಚ್ಚಳಗೊಳಿಸ ಬೇಕೆಂಬ ಪ್ರಭಲ ಆಗ್ರಹ ಬಂದಿದೆ. ಇತರರ ಮೀಸಲಾತಿ ಹೆಚ್ಚಳವಾಗುವ ಸಂದರ್ಭ ಜನ ಸಂಖ್ಯೆಯ ಶೇ 16 ರಷ್ಟಿರುವ ಒಕ್ಕಲಿಗರ ಮೀಸಲಾತಿಯು ಹೆಚ್ಚಳವಾಗಬೇಕೆಂಬ ಭಾವನೆ ಸಮಾಜ ಬಾಂಧವರಲ್ಲಿದೆ. ಈ ಬಗ್ಗೆ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು  ಎಂದು ಶ್ರೀ ಆದಿಚುಂಚನಗಿರಿ ಕ್ಷೇತ್ರ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

Ad Widget

Ad Widget

Ad Widget

Ad Widget

Ad Widget

ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೆದ್ದಯಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

Ad Widget

Ad Widget

 ಸಮುದಾಯಕ್ಕೆ  ಮೀಸಲಾತಿ ನೀಡುವ ವಿಚಾರವಾಗಿ ಸರಕಾರ ಪೂರಕವಾಗಿ ಸ್ಪಂದಿಸೆಯಾದರೂ ಈವರೆಗೆ ಸ್ಪಷ್ಟ ನಿಲುವಿಗೆ ಬಂದಿಲ್ಲ ಎಂದು ಅವರು ಹೇಳಿದರು.   ವ್ಯಕ್ತಿ ಒಳಗೆ ಇರುವ ಶಕ್ತಿಯನ್ನು ಮರೆಯುವ ಕಾರ್ಯವಾಗಬಾರದು. ಸರ್ವವನ್ನು ತ್ಯಾಗ ಮಾಡಿದ ಸಂತ ಸಮಾಜ ನೀಡಿದ ಕೊಡುಗೆ ಫಲವಾಗಿ 1.52ಲಕ್ಷ ವಿದ್ಯಾರ್ಥಿಗಳು ಸಂಸ್ಥಾನದಲ್ಲಿ ವಿದ್ಯೆಯನ್ನು ಪಡೆಯುತ್ತಿದ್ದಾರೆ  ಎಂದು ತಿಳಿಸಿದರು.

Ad Widget

Ad Widget

ಸಚಿವ ಡಾ. ಅಶ್ವತ್ಥ ನಾರಾಯಣ ಮಾತನಾಡಿ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸರ್ಕಾರ ಮಾಡುವ ಜತೆಗೆ ಜನ ಸಂಖ್ಯೆಯ ಆಧಾರದಲ್ಲಿ ನೀಡುವ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದರು.

Ad Widget

Ad Widget

 ಗುಣಮಟ್ಟದ ಜ್ಞಾನ, ಕೌಶಲ್ಯತೆಯನ್ನು ಪಡೆಯುವ ಕಾರ್ಯ ನಡೆಯಬೇಕು. ಸ್ವಾರ್ಥತತೆಯಿಂದ ಹೊರ ಬಂದು ಕೊಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಒಕ್ಕಲಿಗ ಜನಾಂಗಕ್ಕೆ ಆಧ್ಯತೆ ನೀಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.  

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ  ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜಕ್ಕೆ ಬಹುಮುಖವಾದ ಕೊಡುಗೆಯನ್ನು ಶ್ರೀಮಠ ನೀಡುತ್ತಾ ಬಂದಿರುವ ಜತೆಗೆ ಬದುಕಿಗೆ ಅರ್ಥಪೂರ್ಣವಾದ ಮೌಲ್ಯವನ್ನು ನೀಡುವ ಕಾರ್ಯ ಮಾಡಿದೆ. ಸಾಧನೆಯ ಹಾದಿ ಕಷ್ಟವಾದರೂ, ಗುರುಗಳ ಆಶೀರ್ವಾದದಿಂದ ಫಲಪ್ರದವಾಗುತ್ತದೆ. ಸಮಾಜದ ಪ್ರೀತಿ ವಿಶ್ವಾಸ ಪೀಠದ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಡಿ.ವಿ ಸದಾನಂದ ಗೌಡ ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಣಕಹಳೆ ಮೊದಲು ಮೊಳಗಿಸಿದವರು ಒಕ್ಕಲಿಗರು. ದೇಶ ಕಟ್ಟುವುದರಲ್ಲಿ ಗೌಡ ಸಮಾಜದ ಕೊಡುಗೆ ಅಪಾರವಿದೆ. ಸಮುದಾಯದ ಕೆಲಸದ ಜತೆಗೆ ಸಮಾಜ ಕಟ್ಟು ಕಾರ್ಯವಾಗಬೇಕು. ಸಮುದಾಯದ ಸಂಘಟನೆ ಯಾವುದೇ ಪೈಪೋಟಿಗಾಗಿ ಇರುವದಲ್ಲ. 5 ತಾಲೂಕುಗಳನ್ನೊಳಗೊಂಡ ಪುತ್ತೂರು ಜಿಲ್ಲೆಯಾಗಿ ಮಾರ್ಪಾಡಾಗಬೇಕು. ಒಕ್ಕಲಿಗ ಸಮುದಾಯವರು ಕೀಳರಿಮೆ ಬೀಡಬೇಕು. ಎಂದು ತಿಳಿಸಿದರು.

ಕೆ. ಪಿ. ಸಿ. ಸಿ. ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ ಜತೆಗೂಡುವುದು ಆರಂಭ, ಒಟ್ಟಾಗಿ ಚರ್ಚಿಸುವುದು ಪ್ರಗತಿ, ಸಂಘಟನೆ ಮಾಡುವುದು ಯಶಸ್ಸಿನ ಸೂಚಕವಾಗಿದೆ. ಸಮಾಜಕ್ಕಾಗಿ ನಿರಂತರ ಹೋರಾಟವನ್ನು ಮಾಡುತ್ತಿದ್ದು, ಜನಸಂಖ್ಯೆಯ ಆಧಾರದಲ್ಲಿ ಶೇ.12 ಮೀಸಲಾತಿಯನ್ನು ನೀಡಬೇಕು. ಜನರ ಕಷ್ಟ ಸುಖಕ್ಕೆ ಭಾಗಿಯಾಗುವ ಈ ಬಡ ಒಕ್ಕಲಿಗನ ಮೇಲೆ ದಯೆ ಇರಲಿ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಒಕ್ಕಲಿಗ ಸಮಾಜ ಜಾಗೃತ ಸಮಾಜದ ಜತೆಗೆ ಧಾರ್ಮಿಕತೆಯ ಜತೆಗೆ ಸೇರಿಕೊಂಡ ಸಮಾಜವಾಗಿದೆ. ಬಿದ್ದವರನ್ನು ಮೇಲೆ ಎತ್ತು ಕಾರ್ಯವನ್ನು ಸಮಾಜ ಮಾಡಬೇಕು. ಸಂಸ್ಕಾರಯುತ ಶಿಕ್ಷಣ ನೀಡುವ ಕಾರ್ಯ ಮಠದಿಂದ ನಡೆಯುತ್ತಿದೆ. ಮಠ ಹಾಗೂ ಸಮಾಜದ ಬಾಂಧವ್ಯ ಎಲ್ಲಾ ಭಾಗದಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು.

ವಿವಿಧ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ, ಶ್ರೀ ಶಂಕರಾರೂಢ ಸ್ವಾಮೀಜಿ, ಶ್ರೀ ಶಿವಪುತ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ರಾಜ್ಯ ಸಭಾ ಸದಸ್ಯೆ ಜಗ್ಗೇಶ್, ವಿಧಾನ ಪರಿಷತ್ತ್ ಸದಸ್ಯ ಬೋಜೇಗೌಡ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಎ.ವಿ. ತೀರ್ಥರಾಮ, ಬೆಂಗಳೂರು ಒಕ್ಕಲಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ಸಿ. ಎನ್., ಬೆಳ್ತಂಗಡಿ ಮಾಜಿ ಸಚಿವ ಗಂಗಾಧರ ಗೌಡ, ಕೆ.ವಿ.ಜಿ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಗೌಡ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ. ವಿ. ರೇಣುಕಾ ಪ್ರಸಾದ್, ವಿವಿಧ ಭಾಗದ ಒಕ್ಕಲಿಗ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಎಚ್. ಎಸ್. ಸತ್ಯನಾರಾಯಣ ಗ್ರಂಥದ ಬಗ್ಗೆ ಮಾಹಿತಿ ನೀಡಿದರು. ಚಿದಾನಂದ ಬೈಲಾಡಿ ವಂದಿಸಿದರು. ಟಿವಿ ನಿರೂಪಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Click to comment

Leave a Reply

ಮಂಗಳೂರು

Brijesh Chowta-ಕಾಂಗ್ರೆಸಿಗೆ ಮತ ನೀಡಿದರೆ ಎಸ್ಡಿಪಿಐ ಕೈ ಬಲಪಡಿಸಿದಂತೆ ; ಶಕ್ತಿನಗರ ಕಾಲ್ನಡಿಗೆ ರೋಡ್ ಶೋದಲ್ಲಿ ಕ್ಯಾ. ಬ್ರಿಜೇಶ್ ಚೌಟ

Ad Widget

Ad Widget

Ad Widget

Ad Widget Ad Widget

ಮಂಗಳೂರು, ಎ.24 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಚುನಾವಣಾ ಪ್ರಚಾರದ ಕೊನೆಯಲ್ಲಿ ಮಂಗಳೂರು ನಗರದ ಶಕ್ತಿನಗರದಲ್ಲಿ ಕಾಲ್ನಡಿಗೆಯಲ್ಲಿ ರೋಡ್ ಶೋ ನಡೆಸಿದ್ದಾರೆ. ಶಕ್ತಿನಗರದಿಂದ ನಾಲ್ಯಪದವು ಶತಮಾನೋತ್ಸವ ಶಾಲೆಯ ವರೆಗೂ ನೂರಾರು ಕಾರ್ಯಕರ್ತರ ಜೊತೆಗೆ ಕಾಲ್ನಡಿಗೆಯಲ್ಲಿ ಬಂದು ಮತಯಾಚನೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಇದೇ ವೇಳೆ ಮಾತನಾಡಿದ ಬ್ರಿಜೇಶ್ ಚೌಟ, ಜಿಲ್ಲೆಯಲ್ಲಿ ಬಿಜೆಪಿ ವಿರೋಧಿ ಶಕ್ತಿಗಳೆಲ್ಲ ಒಂದಾಗಿವೆ. ಎಸ್ಡಿಪಿಐ ಅವರಲ್ಲಿ ಅಭ್ಯರ್ಥಿ ಯಾರೆಂದು ಕೇಳಿದರೆ ಕಾಂಗ್ರೆಸ್, ಕಮ್ಯುನಿಸ್ಟರಲ್ಲಿ ಕೇಳಿದರೂ ಕಾಂಗ್ರೆಸ್ ಎಂದೇ ಹೇಳುತ್ತಾರೆ. ಕಾಂಗ್ರೆಸಿನವರಲ್ಲಿ ಕೇಳಿದರೆ ಅಭ್ಯರ್ಥಿ ಬಗ್ಗೆ ಸಂಶಯ ಇದೆ. ಅವರಲ್ಲೇ ಮನೆಯೊಂದು ಮೂರು ಬಾಗಿಲು ಎನ್ನುವ ರೀತಿ ಇದೆ. ಹೀಗಾಗಿ ಕಾಂಗ್ರೆಸಿಗೆ ಮತ ನೀಡಿದರೆ ಎಸ್ಡಿಪಿಐ ಕೈ ಬಲಪಡಿಸಿದಂತಾಗುತ್ತದೆ ಎಂದು ಹೇಳಿದರು.

Ad Widget

Ad Widget

ನೀವು ನೈಜ ದೇಶಭಕ್ತರು, ದೇಶಕ್ಕಾಗಿ ಮತ

Ad Widget

Ad Widget

ಬುಧವಾರ ಬೆಳಗ್ಗೆ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆ, ಮುಕ್ಕ ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿಯಿತ್ತ ಕ್ಯಾ. ಬ್ರಿಜೇಶ್ ಚೌಟ, ನಿಮಗೆ ರಾಷ್ಟ್ರಭಕ್ತಿ, ರಾಷ್ಟ್ರಸೇವೆಯ ಬಗ್ಗೆ ಪ್ರತ್ಯೇಕ ಹೇಳಬೇಕಾಗಿಲ್ಲ. ನೀವೇ ನೈಜ ದೇಶ ಭಕ್ತರು. ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಬಲತುಂಬಿದವರು ವೈದ್ಯರು ಮತ್ತು ಆರೋಗ್ಯ ಸಿಬಂದಿ. ನಿಮ್ಮನ್ನು ಕೊರೊನಾ ವಾರಿಯರ್ಸ್ ಎಂಬುದಾಗಿ ಕೊಂಡಾಡಿದ್ದರು ಎಂದರಲ್ಲದೆ, ಪ್ರಧಾನಿಯನ್ನು ಮೂರನೇ ಬಾರಿಗೆ ಗದ್ದುಗೆ ಏರಿಸುವಲ್ಲಿ ನಿಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.

Ad Widget

Ad Widget
Continue Reading

ಮಂಗಳೂರು

Congress roadshow-ಪಂಪ್’ವೆಲ್’ನಿಂದ ಕಣ್ಣೂರುವರೆಗೆ ಸಾಗಿದ ಕಾಂಗ್ರೆಸ್ ರೋಡ್ ಶೋ

Ad Widget

Ad Widget

Ad Widget

Ad Widget Ad Widget

ಮಂಗಳೂರು: ಲೋಕಸಭೆ ಚುನಾವಣೆಯ ಕೊನೆ ದಿನವಾದ ಬುಧವಾರ ಮಂಗಳೂರಿನ ಪಂಪ್’ವೆಲ್’ನಿಂದ ಕಣ್ಣೂರುವರೆಗೆ ರೋಡ್ ಶೋ ಜರಗಿತು.

Ad Widget

Ad Widget

Ad Widget

Ad Widget

Ad Widget

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಸದಸ್ಯ ಐವನ್ ಡಿಸೋಜಾ, ಕಾರ್ಪೋರೇಟರ್ ಗಳಾದ ಶಶಿಧರ್ ಹೆಗ್ಡೆ, ಅಶ್ರಫ್, ಕೇಶವ ಮರೋಳಿ, ನವೀನ್ ಡಿಸೋಜಾ, ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ದಾಸ್, ಪ್ರಮುಖರಾದ ಯು.ಟಿ. ಫರ್ಜಾನ್, ರವಿರಾಜ್ ಪೂಜಾರಿ, ರಮಾನಂದ್ ಪೂಜಾರಿ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Ad Widget

Ad Widget

ಗರೋಡಿ, ದರ್ಗಾ ಭೇಟಿ:
ರೋಡ್ ಶೋ ನಡುವೆ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿ, ಅಡ್ಯಾರ್ ಕಣ್ಣೂರು ಶೇಖ್ ಯೂಸುಫ್ ಸಿದ್ದೀಕ್ ದರ್ಗಾ ಶರೀಫ್’ಗೆ ಭೇಟಿ ನೀಡಿದರು.

Ad Widget

Ad Widget

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಬುಧವಾರ ಸಂಜೆ ಉರ್ವ, ಬಂದರು ಪ್ರದೇಶದಲ್ಲಿ ರೋಡ್ ಶೋ ನಡೆಸಿ, ಮತ ಯಾಚಿಸಿದರು.

Ad Widget

Ad Widget

ತೆರೆದ ವಾಹನದ ಮುಂಭಾಗದಿಂದ ಸಾಗುತ್ತಿದ್ದ ಕಾರ್ಯಕರ್ತರು, ಘೋಷಣೆಗಳನ್ನು ಕೂಗುತ್ತಾ ಸಾಗಿದರು. ನಾಸಿಕ್ ಬ್ಯಾಂಡ್ ಸದ್ದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು.

Continue Reading

ರಾಜಕೀಯ

Belthangady-ಬೆಳ್ತಂಗಡಿ : ಸಿಗದ ಮೂಲಭೂತ ಸೌಕರ್ಯ – ನೋಟಾಗೆ ಮತ ಚಲಾಯಿಸಲು ಮಲೆಕುಡಿಯ ಸಮುದಾಯದ ನಿರ್ಧಾರ

Ad Widget

Ad Widget

Ad Widget

Ad Widget Ad Widget

ಬೆಳ್ತಂಗಡಿ: ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ತಾಲೂಕಿನ ನಾವೂರು ಗ್ರಾಮದ ಮೂಲ ನಿವಾಸಿ ಮಲೆಕುಡಿಯ ಸಮುದಾಯದವರು ತಮನ್ನು ಎಲ್ಲ ರಾಜಕೀಯ ಪಕ್ಷಗಳೂ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಈ ಬಾರಿ ನೋಟ ಚಲಾಯಿಸಲು ನಿರ್ಧರಿಸಿದ್ದು ಈ ಬಗ್ಗೆ ತಮ್ಮ ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವೂರು ಗ್ರಾಮದ ಅಲ್ಯ, ಪುಳಿತ್ತಡಿ, ಎರ್ಮಲೆ ಮಂಜಲ, ಕುದ್ರೋಳಿ, ಕಾಸರೋಳಿ ಪರಿಸರದ ಆದಿವಾಸಿ ಕುಟುಂಬಗಳು ನೋಟಾ ಮತವನ್ನು ಚಲಾಯಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

22 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳು ಈ ಪರಿಸರದಲ್ಲಿ ಜೀವನ ನಡೆಸುತ್ತಿದ್ದು ಸುಮಾರು 100 ಮಂದಿ ಮತದಾರರಿದ್ದಾರೆ. ದಶಕಗಳಿಂದ ಈ ಜನರು ತಮ್ಮ ಪ್ರದೇಶಕ್ಕೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಒದಗಿಸುವಂತೆ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

Ad Widget

Ad Widget

ಕುದುರೇಮುಖ ರಾಷ್ಟ್ರೀಯ ಉದ್ಯಾನವದ ಒಳಗಿರುವ ಈ ಕುಟುಂಬಗಳಿಗೆ ಇನ್ನೂ ಯಾವುದೇ ಮೂಲಭೂತ ಸೌಲಭ್ಯಗಳು ಲಭಿಸಿಲ್ಲ. ಗ್ರಾಮಪಂಚಾಯತಿನಿಂದ ಆರಂಭಿಸಿ ಪ್ರಧಾನಿಯವರೆಗೆ ಎಲ್ಲರಿಗೂ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ತಮ್ಮ ಬೇಡಿಕೆಗಳಿಗೆ ಯಾವ ರಾಜಕೀಯ ಪಕ್ಷಗಳೂ ಸರಕಾರಗಳೂ ಸ್ಪಂದಿಸಲಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ. ಪುಳಿತ್ತಡಿ ಪರಿಸರದಲ್ಲಿ ಇನ್ನೂ ಕರೆಂಟ್ ಬಂದಿಲ್ಲ ಆದರೆ ಅವರ ಮನೆಗಳಲ್ಲೆಲ್ಲ ವಿದ್ಯುತ್ ಮೀಟರ್ ಅಳವಡಿಸಲಾಗಿದೆ.

Ad Widget

Ad Widget

2017ರ ವೇಳೆಗೆ ಏಕಾಏಕಿ ಗುತ್ತಿಗೆದಾರರು ಬಂದು ಇವರ ಮನೆಗಳಿಗೆ ಮೀಟರ್ ಅಳವಡಿಸಿದ್ದರು. ಮೀಟರ್ ಅಳವಡಿಸಿ ಆರು ವರ್ಷಗಳೇ ಕಳೆದಿದೆ ಎನ್ನುತ್ತಾರೆ ಇಲ್ಲಿನ ಜನರು. ಆದರೆ ಮತ್ತೆ ಯಾರೂ ಇತ್ತ ತಿರುಗಿ ನೋಡಿಲ್ಲ. ಅರಣ್ಯದ ನಡುವೆ ವಾಸಿಸುತ್ತಿರುವ ಈ ಜನರಿಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಕತ್ತಲಾದ ಮೇಲೆ ಇವರ ಬದುಕೇ ದುಸ್ತರ, ಕೃಷಿಗೆ ನೀರುಣಿಸಲೂ ಸಾಧ್ಯವಾಗದೆ ಇವರು ಸಂಕಷ್ಟದಲ್ಲಿದ್ದಾರೆ.

Ad Widget

Ad Widget

ಮೆಸ್ಕಾಂ ಅಧಿಕಾರಿಗಳು ಇಲ್ಲಿಗೆ ವಿದ್ಯುತ್ ಒದಗಿಸಲು ಈ ಬಗ್ಗೆ ಸರ್ವೆ ನಡೆಸಿದ್ದು 2017ರಲ್ಲಿ 46,81,398 ರೂಗಳ ಅಂದಾಜುಪಟ್ಟಿ ತಯಾರಿಸಿದ್ದರು. ಇದಕ್ಕೆ ಅರಣ್ಯ ಇಲಾಖೆಯ ಅನುಮೋದನೆ ಪಡೆಯಲು ನಿಗದಿತ ನಮುನೆಯಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ. ಆದರೆ ಈ ಆನ್ ಲೈನ್ ಅರ್ಜಿ ಏನಾಗಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading