Ad Widget

ಜ 22 : ಪುತ್ತೂರು ತಾಲೂಕು ಯುವ ಬಂಟರ ಸಂಘ ಪ್ರಸ್ತುತಪಡಿಸುವ ಬಂಟ ಕ್ರೀಡಾ ವೈಭವ

WhatsApp Image 2023-01-21 at 18.06.03
Ad Widget

Ad Widget

Ad Widget

ಪುತ್ತೂರು ತಾಲೂಕು ಯುವ ಬಂಟರ ಸಂಘ ಪ್ರಸ್ತುತಪಡಿಸುವ ಬಂಟ ಕ್ರೀಡಾ ವೈಭವವು ಜನವರಿ 22 ರಂದು ಪುತ್ತೂರಿನ ದರ್ಭೆಯಲ್ಲಿರುವ ಸಂತ ಫಿಲೋಮಿನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ದಿ. ಎ . ಜೀವನ ಭಂಡಾರಿ ಸಿದ್ಯಾಳ  ಸ್ಮರಣಾರ್ಥ ನಡೆಯುವ ಓವರ್‌ ಆರ್ಮ್‌  ಕ್ರಿಕೆಟ್‌ ಪಂದ್ಯಾಟ ಬಂಟ ಕ್ರೀಡಾ ವೈಭವದ ಪ್ರಮುಖ ಆಕರ್ಷಣೆಯಾಗಿರಲಿದೆ.

Ad Widget

Ad Widget

Ad Widget

Ad Widget

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸದಾಶಿವ ರೈ ದಂಬೆಕ್ಕಾನ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದು, ಬಂಟರ ಸಂಘದ ತಾಲೂಕು ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ.  ನಿವೃತ್ತ ಶಿಕ್ಷಣ ಸಂಯೋಜಕ ಪಧ್ಮನಾಭ ಆಳ್ವ ಗುತ್ತಿಮಾರು ಬೆಳ್ಳಿಪ್ಪಾಡಿ ಧ್ವಜರೋಹಣ ನೆರವೇರಿಸಲಿದ್ದಾರೆ. ಸಮರ್ಥ್‌ ಭಂಡಾರಿ ಸಿದ್ಯಾಳ ಮುಖ್ಯ ಅತಿಥಿಗಳಾಗಿದ್ದಾರೆ.

Ad Widget

Ad Widget

Ad Widget

Ad Widget

 ಕ್ರಿಡಾಕೂಟದಲ್ಲಿ ಪುರುಷರಿಗೆ ಹಗ್ಗ ಜಗ್ಗಾಟ, ಗುಂಡೆಸೆತ, ವೇಗದ ನಡಿಗೆ, ಮಹಿಳೆಯರಿಗೆ ಹಗ್ಗಜಗ್ಗಾಟ, ಗುಂಡೆಸೆತ, ವೇಗದ ನಡಿಗೆ, ತ್ರೋ ಬಾಲ್‌, ಮಕ್ಕಳಿಗೆ 100 ಮೀ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಯುವ ಬಂಟರ ಸಂಘದ  ಅಧ್ಯಕ್ಷರಾದ  ಮುಂಡಾಳಗುತ್ತು ಶಶಿರಾಜ್‌ ರೈ ಹಾಗು  ಪದಾಧಿಕಾರಿಗಳು  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: