ಪುತ್ತೂರು ಜ.21: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರ ತಾಯಿ ಮಂದಾಕಿನಿ ಇಂದು ನಿಧನರಾದರು. 90 ವರ್ಷ ವಯಸ್ಸಿನ ಅವರು ಕೆಲ ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.
ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಸ್ಪಂದಿಸದೆ ಇಂದು ನಿಧನರಾದರು.
ಮುಂಡೂರು ಗ್ರಾಮದ ಪುತ್ತಿಲ ದಿ. ಕೃಷ್ಣಯ್ಯರವರ ಪತ್ನಿ ಮಂದಾಕಿನಿ ಅವರು ಐವರು ಮಕ್ಕಳನ್ನು ಅಗಲಿದ್ದಾರೆ.
ಪುತ್ರರಾದ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಪುತ್ರಿಯರಾದ ವೀಣಾ, ವಿನಯ ಹಾಗೂ ಅನಿತಾರವರನ್ನು ಅಗಲಿದ್ದಾರೆ.