ಮುಂಬೈ, ಜ 20 : ಜಿಯೋ ಟೆಲಿಕಾಂ (Jio Offer) ಸಂಸ್ಥೆಯು ತನ್ನ ಗ್ರಾಹಕರಿಗೆ ಮತ್ತೆ ಎರಡು ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಇದು ಅತ್ಯಂತ ಜನಪ್ರಿಯವೆನಿಸಿದೆ. ಈ ಯೋಜನೆ ಯಿಂದ ಇತರ ಟೆಲಿಕಾಂ ಸಂಸ್ಥೆಗಳಿಗೆ ಭಾರೀ ಪೈಪೋಟಿ ನೀಡಿದಂತಾಗಿದೆ.
ಜೀಯೋ ಸಂಸ್ಥೆ ಇದೀಗ ಎರಡು ಜನಪ್ರಿಯ ಪ್ರೀಪೇಯ್ಡ್ ಆಫರ್ ನೀಡಿದೆ. ಜಿಯೋ ಟೆಲಿಕಾಂ ಹೊಸ 899 ರೂ. ಪ್ರಿಪೇಯ್ಡ್ ಯೋಜನೆ 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಗ್ರಾಹಕರಿಗೆ ಇದರಲ್ಲಿ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಲಭ್ಯವಾಗಲಿದೆ. ಒಟ್ಟಾರೆ ಪೂರ್ಣ ವ್ಯಾಲಿಡಿಟಿ ಅವಧಿಗೆ 225 GB ಡೇಟಾ ಪ್ರಯೋಜನ ಸಿಗುತ್ತದೆ. ಅದಲ್ಲದೆ ಅನಿಯಮಿತ ವಾಯ್ಸ್ ಕಾಲ್ ಪ್ರಯೋಜನ ಹಾಗೂ ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇವುಗಳ ಜೊತೆಗೆ ಜಿಯೋ ಆಪ್ಗಳನ್ನೂ ಬಳಸಬಹುದು.
ಜಿಯೋ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ ಎರಡನೇಯದಾದ 349 ರೂ. ಪ್ರಿಪೇಯ್ಡ್ ಯೋಜನೆ 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ 75 GB ಡೇಟಾ ಸಿಗುತ್ತದೆ. ಹಾಗೆಯೇ ಅನಿಯಮಿತ ವಾಯ್ಸ್ ಕಾಲ್ ಪ್ರಯೋಜನ ಹಾಗೂ ಪ್ರತಿದಿನ ಉಚಿತ 100 SMS ಪ್ರಯೋಜನ ಪಡೆಯಬಹುದಾಗಿದೆ. ಇದರೊಂದಿಗೆ ಜಿಯೋ ಆಪ್ಗಳನ್ನು ಉಚಿತವಾಗಿ ಬಳಸಬಹುದು.
ಈ ಯೋಜನೆಯು ಗ್ರಾಹಕರಲ್ಲಿ ಸಂತಸ ತಂದಿದೆ. ಇಂತಹಾ ಹಲವು ಯೋಜನೆಗಳಿಂದ ಜಿಯೋ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ. ಇದೀಗ ಎಲ್ಲರಿಗಿಂತ ಮೊದಲು 5 ಜಿ ತಂತ್ರಜ್ಞಾನವನ್ನು ದೇಶದ ಮೂಲೆ ಮೂಲೆಯಲ್ಲಿ ಸ್ಥಾಪನೆ ಮಾಡುವತ್ತ ಹೆಜ್ಜೆ ಇಡುತ್ತಿದೆ. ಅದರಂತೆ ಇದೀಗ ದೇಶದ 50 ಕ್ಕೂ ಹೆಚ್ಚು ನಗರಗಳಲ್ಲಿ 5ಜಿ ತಂತ್ರಜ್ಞಾನವನ್ನು ವಿಸ್ತರಿಸಿದೆ.