ಪುತ್ತೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ದೇವಳದ ನೀರಿನ ಟ್ಯಾಂಕ್ , ಹೊರಾಂಗಣ ಸುತ್ತು ಮೇಲ್ಛಾವಣಿ ಹಾಗೂ ಇಂಟರ್ ಲಾಕ್ ದೇವಳಕ್ಕೆ ಸಮರ್ಪಣೆ ಜ.17ರಂದು ವರ್ಷಾವಧಿ ಜಾತ್ರೋತ್ಸವ ಧ್ವಜಾರೋಹಣಗೊಂಡು ನಡೆಯಿತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ವಿಶೇಷ ಮುತುವರ್ಜಿಯಲ್ಲಿ ದೇವಸ್ಥಾನದ ರಾಜಾಂಗಣ ಮತ್ತು ಹೊರಾಂಗಣ ಸುತ್ತು ಮೇಲ್ಛಾವಣಿ ಮತ್ತು ಇಂಟರ್‌ಲಾಕ್ ಕಾಮಗಾರಿ ಪೂರ್ಣಗೊಂಡಿದ್ದು, ಲೋಕಾರ್ಪಣೆಯನ್ನು ನೆರವೇರಿಸಿದ ಅದಾನಿ ಗ್ರೂಪ್ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಕುಮಾರ್ ಆಳ್ವ ಮಾತನಾಡಿ , ಭಗವದ್ಗೀತೆ ಅಧ್ಯಯನ ನಡೆಸಬೇಕು, ಯಾರೋ ಭಾಷಣ ಮಾಡಿದ್ದನ್ನೇ ಅದೇ ಭಗವಧ್ಗೀತೆ ಎಂದು ತಿಳಿದುಕೊಳ್ಳಬಾರದು ಎಂದರು.
ಬೇರೆ ಧರ್ಮದ ಮಕ್ಕಳು ಕಡ್ಡಾಯವಾಗಿ ಧಾರ್ಮಿಕ ಕೇಂದ್ರಕ್ಕೆ ಹೋಗಿ ಧಾರ್ಮಿಕ ಶಿಕ್ಷಣದ ಮಹತ್ವ ಅರಿತಿದ್ದಾರೆ. ಅವರ ಬಗ್ಗೆ ಮಾತನಾಡೋದಲ್ಲ, ನಾವು ನಮ್ಮ ಮಕ್ಕಳನ್ನು ದೇವಸ್ಥಾನಗಳಿಗೆ ಕಳುಹಿಸಿ ಧಾರ್ಮಿಕತೆ ಅರಿವು ಮೂಡಿಸಬೇಕು ಮತ್ತು ಭಗವದ್ಗೀತೆ ಶಿಕ್ಷಣ ಸಿಗುವಂತಾಗಬೇಕು ಎಂದರು.
ಬೇರೆ ಭಾಷೆಯನ್ನು ಕಳಿಯುವ ಮೊದಲು ಮಾತೃಭಾಷೆಯ ಅರಿವು ಚೆನ್ನಾಗಿ ಅರ್ಥವಾಗಬೇಕು. ಮಾತೃಭಾಷೆ ಅರಿವಗೆ ಭಾಷಾ ಸಮಸ್ಯೆ ಕಾಡಲಾರದು ಎಂದರು.
ಈ ಪುಟ್ಟ ಊರಿನಲ್ಲಿ ಇಷ್ಟು ಬೆಳೆದುನಿಂತ ದೇವಸ್ಥಾನದ ಹಿಂದೆ ಶ್ರಮಪಟ್ಟ ಭಕ್ತರನ್ನು ಮೆಚ್ಚಬೇಕು ಎಂದರು. ಅದಾನಿ ಸಮೂಹ ಸಂಸ್ಥೆಯ ಸದಾ ಇರಲಿದೆ ಎಂದರು.

ನೀರಿನ ಟ್ಯಾಂಕ್‌ನ ಉದ್ಘಾಟನೆಯನ್ನು ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಕಾಣಿಯೂರು ಬಿ.ಕೆ ಕಾಂಪ್ಲೆಕ್ಸ್ ಮಾಲಕ ಪ್ರದೀಪ್ ಬೊಬ್ಬೆಕೇರಿ, ಚಾರ್ವಾಕ ಜೋಡು ದೈವಗಳ ಕ್ಷೇತ್ರದ ಆಡಳಿತದಾರರಾದ ಕುಸುಮಾಧರ ರೈ ಕಾಸ್ಪಾಡಿಗುತ್ತು, ಆಡಳಿತ ಪಂಗಡ ಅಧ್ಯಕ್ಷ ಪದ್ಮನಾಭ ಪೊನ್ನೆತ್ತಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಪ್ರಿತಾ ಕರಂದ್ಲಾಜೆ ಮತ್ತು ಶಕುಂತಳಾ ಕಾಸ್ಪಾಡಿಗುತ್ತು ಪ್ರಾರ್ಥಿಸಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಸಂತ ಪೂಜಾರಿ ದಲಾರಿ ವಂದಿಸಿದರು. ಶಿವಪ್ರಸಾದ್ ಬಾರೆಂಗಳ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅದಾನಿ ಸಮೂಹದ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ, ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಗ್ರಾ.ಪಂ.ಉಪಾಧ್ಯಕ್ಷ, ಗಣೇಶ್ ಉದನಡ್ಕ, ಕಾಣಿಯೂರು ಬಿ.ಕೆ ಕಾಂಪ್ಲೆಕ್ಸ್ ಮಾಲಕರಾದ ಪ್ರದೀಪ್ ಬೊಬ್ಬೆಕೇರಿ ಹಾಗೂ ರಾಜಾಂಗಣ ಮತ್ತು ಹೊರಾಂಗಣ ಸುತ್ತು ಮೇಲ್ಛಾವಣಿ ಕೆಲಸ ನಿರ್ವಹಿಸಿದ ನವೀನ್ ಪಂಜ, ಇಂಟರ್‌ಲಾಕ್ ಕಾಮಗಾರಿ ನಡೆಸಿದ ಯೋಗೀಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.

ಜಾತ್ರೋತ್ಸವ: ಜ.17ರಂದು ಧ್ವಜಾರೋಹಣಗೊಂಡು, ಜ.19ಕ್ಕೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ಜ.20ಕ್ಕೆ ದರ್ಶನ ಬಲಿ, ಉಳ್ಳಾಕುಲು ಹಾಗೂ ದೇವರ ಭೇಟಿ ನಡೆಯಲಿದೆ. ಜ.21ಕ್ಕೆ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನ ನಡೆದು ದ್ವಜಾವರೋಹಣ ನಡೆಯಲಿದೆ. ಜ.23ರಿಂದ 25ರವರೆಗೆ ಅಮರಕಾಸ್ಪಾಡಿ ಉಳ್ಳಾಕುಲು ನೇಮೋತ್ಸವ ಜರುಗಲಿದೆ.


