Ad Widget

ಮಾಜಿ ಮುಖ್ಯಮಂತ್ರಿ ಡಿ.ವಿ ಆಪ್ತ, ಬಡವರ ಬಂಧು, ಸಾಮಾಜಿಕ ಧಾರ್ಮಿಕ ಮುಂದಾಳು ಕೋಡಿಂಬಾಡಿ ಅಶೋಕ್ ಕುಮಾರ್ ರೈ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಸಮ್ಮುಖ ಜ.22 ರಂದು ಸಹಸ್ರಾರು ಬೆಂಬಲಿಗರೊಂದಿಗೆ ಕಾಂಗ್ರೇಸ್‍ ಸೇರ್ಪಡೆ

WhatsApp Image 2023-01-19 at 16.46.59
Ad Widget

Ad Widget

Ad Widget

ಪುತ್ತೂರು : ಜ 19 : ಚುನಾವಣೆಗೆ ಇನ್ನು ಮೂರು ತಿಂಗಳಷ್ಟೆ ಬಾಕಿಯಿದ್ದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲೂ ಇಂತಹ ಅನಿರೀಕ್ಷಿತ ಅಚ್ಚರಿಯ ಬೆಳವಣಿಗೆ ಜ 22 ರಂದು ನಡೆಯಲಿದೆ. ಕರಾವಳಿ ಬಿಜೆಪಿ ಹಾಗು ಒಕ್ಕಲಿಗ ಸಮುದಾಯದ ಪ್ರಭಲ ಮುಖಂಡ, ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ. ವಿ ಸದಾನಂದ ಗೌಡರವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬಿಜೆಪಿಯ ಜಿಲ್ಲಾ ಕಾರ್ಯಕಾರಣಿಯ ನಿರ್ಗಮಿತ ಸದಸ್ಯ, ಸಾಮಾಜಿಕ, ಧಾರ್ಮಿಕ ಮುಂದಾಳು  ಅಶೋಕ್‌ ಕುಮಾರ್‌ ರೈಯವರು ಜ 22 ರಂದು ಮಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್‌ ನ ಬೃಹತ್‌ ಸಮಾವೇಶದಲ್ಲಿ ರಾಜ್ಯದ ಘಟಾನುಘಟಿ ನಾಯಕರ ಮುಂಭಾಗ ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಜ 22 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಕಾಂಗ್ರೇಸ್‌ ಪಕ್ಷವು ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌  ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ  ಪಕ್ಷದ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಆಶೋಕ್‌ ಕುಮಾರ್‌ ರೈವರು ತನ್ನಸಹಸ್ರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸುಮಾರು 150ಕ್ಕೂ ಅಧಿಕ ಬಸ್ಸಿನಲ್ಲಿ ಅವರ ಬೆಂಬಲಿಗರು ಮಂಗಳೂರಿಗೆ ಜ 22 ರಂದು ತೆರಳಲಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಪುತ್ತೂರು ವಿಧಾನ ಸಭಾ ಕ್ಷೇತ್ರ ಮೊದಲಿನಿಂದಲೂ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಹೋರಾಟದ ಅಖಾಡ. 1994ರ ವರೆಗೂ ಇಲ್ಲಿ ನಡೆದ 9 ಚುನಾವಣೆಯಲ್ಲಿ ಕಾಂಗ್ರೆಸ್‌ 7 ಬಾರಿ ವಿಜಯ ಸಂಪಾದಿಸಿದರೇ ಜನಾತ ಪಕ್ಷ , ಭಾರತೀಯ ಜನ ಸಂಘ ತಲಾ ಒಂದೊಂದು ಬಾರಿ ಗೆಲುವು ಪಡೆದಿತ್ತು. ಎರಡು ಬಾರಿಯೂ ಕಾಂಗ್ರೆಸೇತರ ಅಭ್ಯರ್ಥಿಯಾಗಿ ಗೆದ್ದವರು  ಬಿಜೆಪಿಯ ಹಿರಿಯ ನಾಯಕ ಉರಿಮಜಲು ರಾಮ್‌ ಭಟ್‌. 1994ರ ಬಳಿಕ  2018ರವರೆಗೆ ಒಟ್ಟು 6 ಬಾರಿ ಚುನಾವಣೆ ನಡೆದಿದ್ದು ಅದರಲ್ಲಿ ಒಂದು ಬಾರಿ ಮಾತ್ರ ಕಾಂಗ್ರೆಸ್‌ ವಿಜಯಿಯಾಗಿದ್ದಾರೆ 5 ಬಾರಿ ಬಿಜೆಪಿ ಜಯಭೇರಿ ಗಳಿಸಿತ್ತು.

 2018ರ ಚುನಾವಣೆ ಹೊರತು ಪಡಿಸಿದರೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕದ ಚುನಾವಣಾ ಇತಿಹಾಸ ಅವಲೋಕಿಸಿದರೇ  ಸೋಲು ಗೆಲುವಿನ ಅಂತರ 10 ಸಾವಿರ ಮತಗಳನ್ನು ದಾಟಿಲ್ಲ.  ಹೀಗಾಗಿ ಆಶೋಕ್‌ ರೈ ಕಾಂಗ್ರೆಸ್‌ ಸೇರ್ಪಡೆ ಚುನಾವಣಾ ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರಲಿದೆ ಎನ್ನುವುದು ಚುನಾವಣಾ ವಿಶ್ಲೇಶಕರ ಅಭಿಮತ.

Ad Widget

Ad Widget

Ad Widget

Ad Widget

ಹಲವು ದೇವಸ್ಥಾನಗಳ ಬ್ರಹ್ಮ ಕಲಶ, ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ  ತನ್ನದೇ ಆದ ಅಭಿಮಾನಿ ಬಳಗವನ್ನು ಅಶೋಕ್‌ ಕುಮಾರ್‌ ರೈವರು ಹೊಂದಿದ್ದಾರೆ. ಇತ್ತೀಚೆಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ದೀಪಾವಳಿ ಹಬ್ಬದಂದು ತಾನು ಅರ್ಥಿಕ ಸಹಕಾರ ನೀಡಿದ ಫಲಾನುಭವಿಗಳ ಸಮಾವೇಶ ನಡೆಸಿದ್ದು ಇದರಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಜಮಾವಣೆಗೊಂಡಿದನ್ನು ಸ್ಮರಿಸಬಹುದಾಗಿದೆ. ಕಳೆದ ಒಂದೂವರೆ ದಶಕಗಳಿಂದ ಅವರು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್‌ ಪಕ್ಷದ ರಾಜ್ಯ ವೀಕ್ಷಕರು ಪುತ್ತೂರು ವಿಧಾನ ಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಸಭೆಯನ್ನು ಕಳೆದ ತಿಂಗಳು ನಡೆಸಿದಾಗ, ಅಶೋಕ್‌ ಕುಮಾರ್‌ ರೈಯವರು ಕಾಂಗ್ರೆಸ್‌ ಸದಸ್ಯರಲ್ಲದಿದ್ದರೂ, ಅವರನ್ನು ಸಭೆಗೆ ಅಹ್ವಾನಿಸಿ ಅವರ ಅಭಿಪ್ರಾಯವನ್ನು ಆಲಿಸಿತ್ತು.   

ಅದಾದ ಬಳಿಕ ಇದೀಗ ಕಾಂಗ್ರೆಸ್‌ ನ ರಾಜ್ಯ ಹೈಕಮಾಂಡ್‌  ಪಕ್ಷ ಸೇರುವಂತೆ ಬುಲಾವ್‌ ನೀಡಿದ್ದು ಅದರಂತೆ ಅಶೋಕ್‌ ಕುಮಾರ್‌ ರೈಯವರು ತನ್ನ ಸಹಸ್ರಾರು ಬೆಂಬಲಿಗರ ಜತೆ ಪಕ್ಷ ಸೇರುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: