Ad Widget

ಒಂದು ವಾರಗಳ ಕಾಲ ಪುತ್ತೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ – ಸದಸ್ಯರ ಸಂಖ್ಯೆ 50 ಸಾವಿರಕ್ಕೆರಿಸುವ ಗುರಿ : ಸಾಜಾ ರಾಧಾಕೃಷ್ಣ ಆಳ್ವಾ

WhatsApp Image 2023-01-19 at 18.17.03
Ad Widget

Ad Widget

Ad Widget

ಪುತ್ತೂರು:  ಜ 19 : ರಾಜ್ಯದಾದ್ಯಂತ ನಡೆಯುತ್ತಿರುವವ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನವರಿ 21ರಿಂದ 29ರರವೆಗೆ ನಡೆಯಲಿದೆ ವಾರಗಳ ಕಾಲ ನಡೆಯುವ ಈ  ಅಭಿಯಾನ  ಮುಕ್ತಾಯವಾಗುವ ವೇಳೆ ಪುತ್ತೂರು  ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಸದಸ್ಯರ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ ಹೇಳಿದರು.

Ad Widget

Ad Widget

Ad Widget

Ad Widget

Ad Widget

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ವೇಳೆ 54 ಶಕ್ತಿ ಕೇಂದ್ರ ವ್ಯಾಪ್ತಿಯ 220 ಬೂತ್‌ಗಳ 55 ಸಾವಿರ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಪೇಜ್ ಪ್ರಮುಖರು ಸಾಥ್ ನೀಡಲಿದ್ದಾರೆ. ಈ ಸಂದರ್ಭ ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಕೆಲಸವೂ ನಡೆಯಲಿದೆ. ಮಿಸ್ಡ್ ಕಾಲ್ ಮೆಂಬರ್‌ಶಿಪ್ ಅಭಿಯಾನ ನಡೆಯಲಿದೆ ಎಂದರು.

Ad Widget

Ad Widget

Ad Widget

Ad Widget

Ad Widget

ಜ.2ರಿಂದ 12ರವರೆಗೆ ಬೂತ್ ಅಭಿಯಾನವನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಲಾಗಿದೆ. ಈ ಸಂದರ್ಭ  ಪ್ರತೀ ಬೂತ್ ವ್ಯಾಪ್ತಿಯಲ್ಲಿ ಕನಿಷ್ಠ 25 ಮನೆಗಳಲ್ಲಿ ಪಕ್ಷದ ಧ್ವಜ ಅಳವಡಿಸಲಾಗಿದೆ.  220 ಬೂತ್ ವ್ಯಾಪ್ತಿಯಲ್ಲಿ  ಸರಿ ಸುಮಾರು  5500 ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ  ಧ್ವಜ ಅಳವಡಿಸಲಾಗಿದೆ.

3 ವರ್ಷಗಳ ಹಿಂದೆ ಪುತ್ತೂರು ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ  43 ಸಾವಿರ ಸದಸ್ಯತ್ವ ಮಾಡಲಾಗಿತ್ತು. ಅದನ್ನೀಗ 50 ಸಾವಿರಕ್ಕೆ ಏರಿಸುವ ಗುರಿ ಇದೆ.  29ರಂದು ಅಭಿಯಾನ ಮುಕ್ತಾಯಗೊಳ್ಳಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ನಡೆಸುವ ಮನ್ ಕೀ ಬಾತ್ ಕಾರ್ಯಕ್ರಮವನ್ನು ಕಾರ್ಯರ್ತರು ಬೂತ್ ಮಟ್ಟದ ಒಂದು ಮನೆಯಲ್ಲಿ ಕುಳಿತು ಆಲಿಸಲಿದ್ದಾರೆ ಎಂದು ವಿವರಿಸಿದರು.

Ad Widget

Ad Widget

Ad Widget

Ad Widget

 ವಿಧಾನಸಭಾ ಚುನಾವಣೆಗೆ 80 ದಿನಗಳಿದ್ದು, ಇದೀಗ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ರಾಜ್ಯ ಮಟ್ಟದ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ 21ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ  ಜೆ.ಪಿ. ನಡ್ಡಾ ಉದ್ಘಾಟಿಸಲಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮವನ್ನು ಉಪ್ಪಿನಂಗಡಿಯಲ್ಲಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಬಿಜೆಪಿ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ವಿಜಯ ಸಂಕಲ್ಪ ಅಭಿಯಾನ ಸಮಿತಿಯ ಸಹ ಸಂಚಾಲಕ ಸುನಿಲ್ ದಡ್ಡು ಉಪಸ್ಥಿತರಿದ್ದರು

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: