ಪುತ್ತೂರು, ಜ 18 : ರಕ್ಷಾ ಕ್ಲಿನಿಕ್ ಆ್ಯಂಡ್ ಲ್ಯಾಬೋರೇಟರಿ 24*7 ಜ.19 ರಂದು ಈಶ್ವರಮಂಗಲದಲ್ಲಿ ಶುಭಾರಂಭಗೊಳ್ಳಲಿದೆ. ಜ. 19 ಗುರುವಾರ ಬೆಳಗ್ಗೆ 10:30 ಕ್ಕೆ ಈಶ್ವರ ಮಂಗಲದ ಪೆಟ್ರೋಲ್ ಪಂಪ್ ಸಮೀಪದ ಆರ್. ಆರ್. ಪಿ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಳ್ಳಲಿದೆ.
ಜ.19 ರ ಬೆಳಗ್ಗೆ 10:30 ಕ್ಕೆ ಉದ್ಘಾಟನಾ ಸಮಾರಂಭವು ನಡೆಯಲಿದೆ. ಕಾರ್ಯಕ್ರಮ ದ ಉದ್ಘಾಟನೆಯನ್ನು ಪ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಈಶ್ವರಮಂಗಲ ಟೌನ್ ಮಸೀದಿಯ ಖಾತೀಬರಾದ ಜ| ಈ ನಝೀರ್ ಅಝ್‌ಹರಿ ಬೊಳ್ಮಿನಾರ್,
ಪ್ರಗತಿಪರ ಕೃಷಿಕರಾದ ಕೃಷ್ಣ ಭಟ್ ಮುಂಡ್ಯ,
ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿ ಇದರ ಧರ್ಮದರ್ಶಿಗಳಾದ ಶಿವರಾಮ.ಪಿ, ನೆಟ್ಟಣಿಗೆ ಮಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ, ಪುತ್ತೂರು ಗ್ರಾಮಾಂತರ ಠಾಣೆ ಸಂಪ್ಯ ಇದರ ಠಾಣಾಧಿಕಾರಿ
ಉದಯ ರವಿ ಎಂ. ವೈ. ಹಾಗೂ ಆರ್.ಆರ್.ಪೀ ಕಾಂಪ್ಲೆಕ್ಸ್ ಕಟ್ಟಡ ಮಾಲಕ ಬಿ. ವೆಂಕಟ್ರಮಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗ್ರಾಮಾಂತರ ಭಾಗದಲ್ಲಿ ದಿನದ 24 ತಾಸುಗಳ ವೈದ್ಯಕೀಯ ಸೇವೆಯನ್ನು ನೀಡುವ ಈ ಕ್ಲಿನಿಕ್ ನೀಡಲಿದೆ.
ಹೆಚ್ಚಿನ ಮಾಹಿತಿಗಾಗಿ 08251-233200 ಹಾಗೂ 7204564889 ರನ್ನು ಸಂಪರ್ಕಿಸಬಹುದಾಗಿದೆ.