ಉಪ್ಪಿನಂಗಡಿ, ಜ 18 ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿಯಲ್ಲಿರುವ ಇಂಡಿಯನ್ ಟಯರ್ ರಿಸೋಲ್ ಸಂಸ್ಥೆಯೊಂದರಲ್ಲಿ ಏರ್ ಕಂಪ್ರೈಸರ್ ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟ ಘಟನೆ ಜ.18ರಂದು ಮಧ್ಯಾಹ್ನ ನಡೆದಿದೆ. ಕಡಬ ತಾಲೂಕಿನ ಆಲಂಕಾರು ಮೂಲದ ರಾಜೇಶ್ ಪೂಜಾರಿ (43) ಮೃತ ವ್ಯಕ್ತಿ.
ಏರ್ ಕಂಪ್ರೆಸರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ರಾಜೇಶ್ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಮೃತ ಕಾರ್ಮಿಕ ಏರ್ ಕಂಪ್ರೆಸರ್ ಮೂಲಕ ಟಯರ್ ಗೆ ಗಾಳಿ ತುಂಬಿಸುವ ಕೆಲಸ ದಲ್ಲಿ ನಿರತರಾಗಿದ್ದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಟಯರ್ ರಿಸೋಲ್ ಮೆಶಿನಿನ ಮುಚ್ಚಳ ಗಾಳಿಯ ಒತ್ತಡಕ್ಕೆ ಸಿಡಿದು ಅವಘಡ ಸಂಭವಿಸಿದೆ ಎನ್ನಲಾಗಿದೆ
ಇನ್ನು ಸ್ಫೋಟದಿಂದಾಗಿ ಅಂಗಂಡಿಯ ಜಗಲಿ ಹಾಗೂ ಗೋಡೆ ಹಾನಿಯಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.