ಪುತ್ತೂರು: “ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ 100 ವರ್ಷವಾಗಿದ್ದು ಈ ಅವಧಿಯಲ್ಲಾದ ಬದಲಾವಣೆ ಇವತ್ತು ನಮ್ಮ ಕಣ್ಣ ಮುಂದಿದೆ. ಆನೇಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಸಂಘವು ಸಮಾಜದಲ್ಲಿ ಪರಿವರ್ತನೆ ಹಾಗೂ ಮನಸ್ಸನ್ನು ಬದಲಾಯಿಸುವ ಕೆಲಸವನ್ನು ಮಾಡುತ್ತಿದೆ. ಹಾಗಾಗಿ ಸಂಘ ಕಾರ್ಯವು ಕಾರ್ಯಾಲಯದಲ್ಲಿ ಅಲ್ಲ. ಹೃದಯದ ಮನಸ್ಸುಗಳಲ್ಲಿ ಸಂಘ ಇರುತ್ತದೆ ಎಂದು ರಾಷ್ಟ್ರೀ ಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಹೇಳಿದರು.
ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ರಾಷ್ಟ್ರೀ ಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆಯ `ಪಂಚವಟಿ’ ಸಂಘ ಕಾರ್ಯಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬೌಧಿಕ್ ಮಾಡಿದರು.ಸಂಘದ ಕಾರ್ಯಾಲಯ ಒಂದು ತಪಸ್ಸಿನ ಕೇಂದ್ರ. ಅಲ್ಲಿ ನಡೆಯುವ ಬೈಠಕ್, ಚಿಂತನೆ ಆ ಪ್ರದೇಶ ಕಾರ್ಯಕರ್ತರ ಕುಂಡಲಿಯನ್ನು ಜಾಗೃತಿ ಮಾಡುತ್ತದೆ. ಆ ರೀತಿಯ ಜಾಗೃತಿಯು ಹಿಂದು ಸಮಾಜದ ಜಾಗೃತಿಯ ಸಾವಿರಾರು ಕೇಂದ್ರಗಳಾಗಿ ಮೂಡಿದೆ ಎಂದರು
ಯೌವನ ಕಳೆದಂತೆ ನಿಜವಾದ ಸತ್ಯವನ್ನು ಕಂಡರೂ ಹೇಳುವ ಮನಸ್ಸು ಇರುವುದಿಲ್ಲ. ಸಂಘಟನೆಯ ಮನಸ್ಥಿತಿ ಎಂಬುದು ಯೌವನವಿದ್ದಂತೆ ಸಕ್ರೀಯವಾಗಿರುತ್ತದೆ. ಯುವ ಮನಸ್ಸುಗಳು ಸಮಾಜದ ವಿವಿಧ ಸಂಘಟನೆಯ ರೂಪದಲ್ಲಿ ನಿಂತಿದೆ. ಸಮಾಜದ ಪರಿವರ್ತನೆಗಾಗಿ ಸ್ವಯಂಸೇವಕರು ಮಾಡುತ್ತಿರುವ ಕಾರ್ಯದಿಂದ ಪುತ್ತೂರು ಜಿಲ್ಲೆಗೆ ಪ್ರತ್ಯೇಕ ಸ್ಥಾನವಿದೆ. ಸಂಘ ಕಾರ್ಯವು ಪ್ರೇರಣೆ ಕೊಡುವ ಕುಂಡಲಿಯಂತೆ ಎಂದರು.

ವ್ಯವಸ್ಥಾ ಪರಿವರ್ತನೆ ಮತ್ತು ಸಾಮಾಜಿಕ ಪರಿವರ್ತನೆಯ ಪ್ರಯತ್ನಗಳನ್ನು ಕಾರ್ಯಕರ್ತರು ನಿರಂತರವಾಗಿ ನಡೆಸಬೇಕು. ಅನುಶಾಸನಗಳನ್ನು ಮೀರಿದರೆ ಘಾತಕವಾಗಿ ಪರಿಣಮಿಸುತ್ತದೆ. ಬೈಠಕ್, ಚಿಂತನೆ ಆ ಪ್ರದೇಶ ಕಾರ್ಯಕರ್ತರ ಕುಂಡಲಿಯನ್ನು ಜಾಗೃತಿ ಮಾಡುತ್ತದೆ. ಹೊಸ ಯೋಜನೆ, ಹೊಸ ಚಿಂತನೆಗಳು ಆಯಾ ಕಾಲಕ್ಕೆ ಅನುಗುಣವಾಗಿ ನಡೆಯುತ್ತಿರಬೇಕು. ಹಳೆಯ ಬುನಾಧಿಯಲ್ಲಿ ಹಿಂದು ಸಮಾಜದ ಜಾಗೃತಿಯ ಕೇಂದ್ರಗಳಾಗಿ ಮೂಡಿದೆ. ಪಂಚವಟಿ ರಾಷ್ಟç ತಪಸ್ಸನ್ನು ಮಾಡುವ ಪ್ರೇರಣೆ ಕೊಡುವ ಕೇಂದ್ರವಾಗಿದೆ ಎಂದರು.

ಅತಿಥಿಗಳು ವೇದಿಕೆಗೆ ಆಗಮಿಸಿದ ತಕ್ಷಣ ಧ್ವಜಾರೋಹಣ, ಪರಿಚಯ, ಧನ್ಯವಾದ ಸಮರ್ಪಣೆ, ವೈಯಕ್ತಿಕ ಗೀತೆಯ ಬಳಿಕ ಬೌಧಿಕ್ ವರ್ಗ ಪ್ರಾರ್ಥನೆ, ಧ್ವಜಾವತರಣ ನಡೆಯುವ ಮೂಲಕ ಕಾರ್ಯಕ್ರಮ ನಡೆಯಿತು. ನಗರದ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ ನಡೆದು, ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿತು. ಪ್ರಾಂತ ಸಂಘಚಾಲಕ ಡಾ.ವಾಮನ ಶೆಣೈ, ಪುತ್ತೂರು ಜಿಲ್ಲೆಯ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ಉಪಸ್ಥಿತರಿದ್ದರು.

ಹಿರಿಯರಾದ ಸೀತಾರಾಮ ಕೆದಿಲಾಯ, ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹಕ ಪ್ರಕಾಶ್ ಪಿ.ಎಸ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಚಾರಕ್ ನಂದೀಶ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಹಿಂದು ಸೇವಾ ಪ್ರತಿಷ್ಠಾನದ ರಾಜ್ಯ ಸಂಚಾಲಕ ಸುಧಾಕರ್, ಅಖಿಲ ಭಾರತೀಯ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ, ವನವಾಸಿ ಕಲ್ಯಾಣ ಆಶ್ರಮದ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಶ್ರೀಪಾದ್, ಆರೋಗ್ಯಭಾರತಿ ಕ್ಷೇತ್ರ ಸಂಘಟನಾ ಮಂತ್ರಿ ಸದಾಶಿವ, ಪ್ರಾಂಥ ಶಾರಿರೀಕ್ ಪ್ರಮುಖ್ ಸತೀಶ್ ಕುತ್ತಾರು, ಕರ್ನಾಟಕ ಪ್ರಾಂತ ಘೋಷ್ ಪ್ರಮುಖ್ ಗಿರೀಶ್, ಪ್ರಾಂತದ ವೆಂಕಟೇಶ್ ಪಾಟಕ್, ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ, ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತಿತರರು ಹಾಜರಿದ್ದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಕಾರ್ಯಾವಾಹ ವಿನೋದ್ ಸ್ವಾಗತಿಸಿದರು. ಪುತ್ತೂರು ಜಿಲ್ಲೆಯ ಸಹಕಾರ್ಯವಾಹ ನವೀನ್ ಕೈಕಾರ ವಂದಿಸಿದರು.