ಮಡಿಕೇರಿ, ಜ.16: ಯುವತಿಯೊಬ್ಬಳನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ(Murder)ಗೈದ ಘಟನೆ ವೀರಾಜಪೇಟೆ ಸಮೀಪದ ನಾಂಗಾಲ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ನಾoಗಲ ಗ್ರಾಮದ ಬುಟ್ಟಿಯಂಡ ಮಾದಪ್ಪ ಎಂಬವರ ಪುತ್ರಿ ಆರತಿ(24) ಕೊಲೆಯಾದ ಯುವತಿ. ಈ ನಡುವೆ ಕೊಲೆ ಆರೋಪಿ ತಮ್ಮಯ್ಯ ಎಂಬಾತ ನಾಂಗಾಲದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ರಾತ್ರಿ ಆರತಿಯನ್ನು ಮನೆ ಸಮೀಪವೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಯಾದ ಸ್ಥಳದಲ್ಲಿ ಆರೋಪಿ ತಮ್ಮಯ್ಯನಿಗೆ ಸೇರಿದ್ದು ಎನ್ನಲಾದ ಹೆಲ್ಮೆಟ್ ಪತ್ತೆಯಾಗಿದ್ದರೆ, ಅನತಿ ದೂರದಲ್ಲಿ ಆತನ ಬೈಕ್ ಕೂಡ ಪತ್ತೆಯಾಗಿದೆ. ಈತ ನಾಂಗಾಲದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆರತಿಗೆ ಆರೋಪಿ ತಮ್ಮಯ್ಯ ಕೆಲ ದಿನಗಳಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆದರೆ ಕೊಲೆಗೆ ಕಾರಣ ತಿಳಿದುಬಂದಿಲ್ಲ.