ಬಂಟ್ವಾಳ, ಜ 16 : ಶ್ರೀರಾಮ ದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜ22 ರಂದು ಬಂಟ್ವಾಳ ತಾಲೂಕಿನ ಮಾಣಿಯ ಪೆರಾಜೆ( ಮಾಣಿ ಮಠ) ಯಲ್ಲಿ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮ ವು ಜ 26 ರ ವರೆಗೆ ಮುಂದುವರೆಯಲಿದೆ. ವಿವಿಧ ರೀತಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ರಾಮಚಂದ್ರ ಪುರಮಠದ ರಾಘವೇಶ್ವರ ಶ್ರೀ ಗಳ ಮಾರ್ಗದರ್ಶನದಲ್ಲಿ ನೂತನ ಶಿಲಾಮಯ ಗರ್ಭಗುಡಿಯ ನಿರ್ಮಾಣ ಕಾರ್ಯವು ನೆರವೇರಿದೆ.
ಜ21 ರಂದು ಎಲ್ಲಾ ವಲಯಗಳಿಂದ ಬಾಳೆ ಎಲೆ, ತೆಂಗಿನಕಾಯಿ, ಸಿಂಗಾರ, ತರಕಾರಿ ಇತ್ಯಾದಿಗಳು ಸಂಗ್ರಹಿಸಲಾಗುವುದು, ಜ 22 ರ ಸಂಜೆ 4 ಗಂಟೆಗೆ ಮೆರವಣಿಗೆ ಮೂಲಕ ಮಾಣಿ ಮಠಕ್ಕೆ ಹಸಿರುವಾಣಿ ಸಮರ್ಪಣೆಯಾಗಲಿದೆ. ಸಂಜೆ 3 ಗಂಟೆಗೆ ರಾಘವೇಶ್ವರ ಶ್ರೀ ಗಳಿಗೆ ಪೂರ್ಣ ಕುಂಭ ಸ್ವಾಗತ ಹಾಗೂ ಮೆರವಣೆಗೆಯ ಮೂಲಕ ಪುರಪ್ರವೇಶ ಕಾರ್ಯಕ್ರಮ ನಡೆಯಲಿದೆ.
ಜ 22 ರಂದು ಬೆಳಗ್ಗೆ 7 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದೆ. ಸಂಜೆ 5 ರಿಂದ ವಾಸ್ತು ಹೋಮಹವನಾದಿಗಳು ನಡೆಯಲಿದೆ.
ಜ22 ರಿಂದ ಜ 25 ರ ವರೆಗೆ ಸಂಜೆ 7 ರಿಂದ 10 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ
ಜನವರಿ 22 ರಿಂದ 26 ರವರೆಗೆ ಪೆರಾಜೆಯ ಮಠದಲ್ಲಿ ಶ್ರೀ ರಾಮ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ.
ಜ 22 ರಂದು ಬೆಳಗ್ಗೆ 7 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದೆ. ಸಂಜೆ 5 ರಿಂದ ವಾಸ್ತು ಹೋಮಹವನಾದಿಗಳು ನಡೆಯಲಿದೆ.
ಜ22 ರಿಂದ ಜ 25 ರ ವರೆಗೆ ಸಂಜೆ 7 ರಿಂದ 10 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಜ 23 ರಂದು ಬೆಳಗ್ಗೆ 7 ರಿಂದ ಶುದ್ಧೀಹವನ, ಪ್ರತಿಷ್ಠಾ ಹವನಗಳು ನಡೆಯಲಿದೆ.ಬೆಳಗ್ಗೆ 11.20 ರ ಮೀನಲಗ್ನದ ಮುಹೂರ್ತದಲ್ಲಿ ಪುನಃ ಪ್ರತಿಷ್ಠೆ ಶಿಖರಕಲಶ, ಹಾಗೂ ಸೂತ್ರ ಸಂಗಮ ಕಾರ್ಯಕ್ರಮವು ನಡೆಯಲಿದೆ.
ಜ 23 ರಿಂದ ಜ 26 ರ ವರೆಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರ ವರೆಗೆ ಭಜನಾ ಕಾರ್ಯಕ್ರಮಗಳು ನಡೆಯಲಿದೆ.
.