ಬಳ್ಳಾರಿ: ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಸಚಿವ ಬಿ.ಶ್ರೀರಾಮುಲು (Sri Ramulu) ಮತ್ತವರ ಅಳಿಯ ಮಾಜಿ ಶಾಸಕ ಟಿ.ಎಚ್. ಸುರೇಶ್‌ಬಾಬು ಒಡೆತನದ ಫ್ಯಾಕ್ಟರಿ ನಡೆಸುತ್ತಿದ್ದ ವ್ಯಕ್ತಿಯ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿದರು.
ಶ್ರೀರಾಮುಲು ಆಪ್ತ ಜನಾರ್ಧನ ರೆಡ್ಡಿ ಪ್ರತ್ಯೇಕ ಪಕ್ಷ ಕಟ್ಟಿ ಚುನಾವಣೆ ಎದುರಿಸಲು ತಯಾರಿ ನಡೆಸುವಾಗಲೇ ಈ ದಾಳಿ ನಡೆದರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ಹಾಗೂ ಚೆನ್ನೈ ಮೂಲದ ಹದಿನೈದು ಮಂದಿ ಅಧಿಕಾರಿಗಳ ತಂಡ, ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ಪಾಲುದಾರಿಕೆಯ ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿರುವ ಕಂಪೆನಿಗಳ ಮೇಲೆ ದಾಳಿ ನಡೆಸಿದೆ. ಬಳ್ಳಾರಿಯ ವಿದ್ಯಾನಗರದ “ರಾಗಾಸ್ ಪೋರ್ಟ್ ಅಪಾರ್ಟ್ ಮೆಂಟ್”ನ ಎರಡು ಫ್ಲ್ಯಾಟ್‌ಗಳಲ್ಲೂ ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.
ಸಚಿವ ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು, ಲಾಡ್ ಕುಟುಂಬದ ಪ್ಲಾಂಟ್‌ಗಳನ್ನು ಪಾಲುದಾರ ಕೈಲಾಸ್ ವ್ಯಾಸ್ ಅವರು ಬಾಡಿಗೆ ಹಾಗೂ ಲೀಜ್ ಮೇಲೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.