Ad Widget

ಕೇರಳದ : ಅಧ್ಯಯನ ನೆಪದಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳ  ಲ್ಯಾಬ್‌ ನಲ್ಲಿ ಶಸ್ತ್ರಾಸ್ತ್ರಗಳ ತಯಾರಿ – ಪೊಲೀಸ್‌ ವರದಿ   

WhatsApp-Image-2023-01-15-at-12.41.42
Ad Widget

Ad Widget

Ad Widget

Arm manufacturing training ಕಾಸರಗೋಡು:  ಕೇರಳದ ಕೆಲವು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನದ ನೆಪದಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿದೆ ಎಂದು ಪೊಲೀಸರ ವರದಿ ತಿಳಿಸಿದೆ.   ಪಠ್ಯಕ್ರಮದ ಪ್ರಾಯೋಗಿಕ ಅನುಭವದ ಭಾಗವಾಗಿರುವ ಲ್ಯಾಬ್ ಚಟುವಟಿಕೆಗಳ ಸಂದರ್ಭ ಮಾಡಲಾಗುತ್ತಿದೆಎಂಬ ಪೊಲೀಸರ ವರದಿಯ ಅಧಾರದಲ್ಲಿ ರಾಜ್ಯದ  ಎಡಿಜಿಪಿ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ನೀಡಿದ್ದಾರೆ.

Ad Widget

Ad Widget

Ad Widget

Ad Widget

 ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಲ್ಯಾಬ್ ಚಟುವಟಿಕೆಗಳ ಮೇಲೆ ಸೂಕ್ತ  ಕಣ್ಗಾವಲಿರಿಸಿ  ನಿಗಾವಹಿಸುವಂತೆ ತಾಂತ್ರಿಕ ಶಿಕ್ಷಣ ನಿರ್ದೇಶಕರು  ಶಿಕ್ಷನ ಸಂಸ್ಥೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ.ಶಿಕ್ಷಕರು ಹಾಗೂ ಲ್ಯಾಬ್ ಸಿಬ್ಬಂದಿ ವಿದ್ಯಾರ್ಥಿಗಳ ಲ್ಯಾಬ್ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸುತ್ತೋಲೆಯಲ್ಲಿ  ಸ್ಪಷ್ಟ ಪಡಿಸಲಾಗಿದೆ.ಆದರೆ ಶಸ್ತ್ರಾಸ್ತ್ರ ತಯಾರಿ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ತಾಂತ್ರಿಕ ಶಿಕ್ಷಣ ನಿರ್ದೇಶಕ ಬೈಜು ಭಾಯ್ ತಿಳಿಸಿದ್ದಾರೆ.ಸರಕಾರದ ಆದೇಶವನ್ನು ಪಾಲಿಸಿ ಸುತ್ತೋಲೆ ಹೊರಡಿಸಲಾಗಿದೆ‌ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

Ad Widget

Ad Widget

Ad Widget

Ad Widget

ಇದೇ ವೇಳೆ  ತಾಂತ್ರಿಕ ಶಿಕ್ಷಣ ಪ್ರಯೋಗಾಲಯಗಳಲ್ಲಿ ಅಧ್ಯಯನದ ಭಾಗವಾಗಿ ನಡೆಯುವ ಪ್ರಾಯೋಗಿಕ ತರಗತಿಗಳು ಶಿಕ್ಷಕರ  ಮೇಲುಸ್ತುವಾರಿಯಲ್ಲಿಯೇ ನಡೆಯಬೇಕೇಂದು  ಎಂದು ಗುಪ್ತಚರ ಇಲಾಖೆ ಎಡಿಜಿಪಿ ಟಿ.ಕೆ.ವಿನೋದ್ ಕುಮಾರ್ ಸರಕಾರಕ್ಕೆ ನೀಡಿರುವ ವರದಿಯಲ್ಲಿ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳು ಲ್ಯಾಬ್ ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಐಟಿಐಗಳಲ್ಲಿ ಶಿಕ್ಷಕರ ಮೇಲ್ವಿಚಾರಣೆಯಿಲ್ಲದೆ ವಿದ್ಯಾರ್ಥಿಗಳು ಆಯುಧಗಳನ್ನು ತಯಾರಿಸುತ್ತಿದ್ದಾರೆ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಾಲೇಜು ಪ್ರಿನ್ಸಿಪಾಲರಿಗೂ ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವಂತೆ ಸೂಚಿಸಲಾಗಿದೆ.ತಿರುವನಂತಪುರಂ ಧನುವಾಚಪುರಂ ಸರಕಾರಿ ಐಟಿಐನಲ್ಲಿ ಲ್ಯಾಬ್ ಚಟುವಟಿಕೆ ಮರೆಯಲ್ಲಿ ಕೆಲವು ವಿದ್ಯಾರ್ಥಿಗಳು ಆಯುಧಗಳನ್ನು ತಯಾರಿಸಿರುವ ಬಗ್ಗೆ ಈ ಹಿಂದೆಯೇ ದೂರುಗಳು ಬಂದಿದ್ದವು.

Ad Widget

Ad Widget

ಈ ಹಿನ್ನೆಲೆಯಲ್ಲಿ ಪೊಲೀಸ್ ವರದಿ ಹಾಗೂ ನಿರ್ದೇಶಕರ ಸುತ್ತೋಲೆ ಹೊರಡಿಸಲಾಗಿದೆ.ರಾಜ್ಯ ಕೈಗಾರಿಕಾ ತರಬೇತಿ ಇಲಾಖೆಯಡಿ ಐಟಿಐಗಳು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ.ಈ ಕುರಿತು ಎಡಿಜಿಪಿ ಕೈಗಾರಿಕಾ ತರಬೇತಿ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಎಡಿಜಿಪಿ ಪತ್ರ ಕಳುಹಿಸಿದ್ದಾರೆ.ಡಿ.21ರಂದು ಎಡಿಜಿಪಿ ಈ ಕುರಿತು ವರದಿ ಸಲ್ಲಿಸಿದ್ದು ಅದನ್ನು ಸರಕಾರಕ್ಕೆ ಹಸ್ತಾಂತರಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.

Ad Widget

Leave a Reply

Recent Posts

error: Content is protected !!
%d bloggers like this: