Heart Attack : ಉಪ್ಪಿನಂಗಡಿ: ಕಳೆದ ಕೆಲ ತಿಂಗಳುಗಳಿಂದ ಇದ್ದಕ್ಕಿದ್ದಂತೆ ಹೃದಯಾಘಾತಗಳು ಸಂಭವಿಸುತ್ತಿರುವ ಘಟನೆಗಳಲ್ಲಿ ವಿಪರೀತ ಹೆಚ್ಚಳಾವಗಿದೆ. ಖ್ಯಾತ ಚಿತ್ರ ನಟ ಪುನೀತ್ ರಾಜ್ ಕುಮಾರ್ ಹೃದಯ ಸ್ಥಭಂನಕ್ಕೆ ಒಳಗಾಗಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದರು . ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಬಾಲಕರು, ಹಾಗೂ ಯುವಕರು ಹೃದಯಘಾತಕ್ಕೆ ತುತ್ತಾಗಿ ಮೃತಪಡುತ್ತಿದ್ದಾರೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ವಾಹನ ಚಲಾಯಿಸುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ. ಮೂಲತಃ ಮಂಗಳೂರಿನ ಕಾವೂರು ನಿವಾಸಿಯಾಗಿರುವ ಟ್ಯಾಂಕರ್ ಚಾಲಕ ಕಿಶೋರ್ ಕುಮಾರ್ (53) ಮೃತಪಟ್ಟವರು.
ಇವರು ಗುರುವಾರದಂದು ಬೆಂಗಳೂರಿನಿಂದ ಮಂಗಳೂರಿನತ್ತ ಟ್ಯಾಂಕರ್ ಚಲಾಯಿಸುತ್ತಿದ್ದಾಗ ಉಪ್ಪಿನಂಗಡಿ ಸಮೀಪಿಸುತ್ತಿದ್ದಂತೆಯೇ ಹೃದಯಾಘಾತಕ್ಕೀಡಾದರು. ಕೂಡಲೇ ಟ್ಯಾಂಕರ್ ನಲ್ಲಿದ್ದ ಸಹ ಚಾಲಕ ಟ್ಯಾಂಕರ್‌ನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇಲ್ಲದಿದ್ದರೇ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಬಳಿಕ ಕಿಶೋರ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರಾದರೂ ಆಸ್ಪತ್ರೆಯಲ್ಲಿ ಅವರು ಮೃತ ಪಟ್ಟಿದ್ದಾರೆಂದುಘೋಷಿಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿ ನಿಶಾಂತ್ ಶೆಟ್ಟಿ ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿಢೀರ್ ದ ಪ್ರಕರಣಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ವಾಹನ ಚಾಲನೆಯ ವೇಳೆಯೇ ಸಾವನ್ನಪ್ಪುವ ವಿದ್ಯಾಮಾನಗಳು ಕಳವಳಕಾರಿಯಾಗಿದೆ.