ಪುತ್ತೂರು : ಕಂಬಳ ಕೂಟದ ಇತಿಹಾಸದಲ್ಲೇ ಅತೀ ದೊಡ್ಡ ಕಂಬಳ ಎಂಬ ಹೆಗ್ಗಳಿಕೆಗೆ ಪಾತ್ರವಾದ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ (Puttur Kambala) ಆಮಂತ್ರಣ ಪತ್ರಿಕೆ ಬಿಡುಗಡೆ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಡಿ.14ರಂದು ನಡೆಯಿತು. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಸಿ ಮಾತನಾಡಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಆಧ್ಯಕ್ಷ ಕೇಶವ ಪ್ರಸಾದ್ ಮುಳಿಯ, 30 ನೇ ವರ್ಷದ ಸಂಭ್ರಮದಲ್ಲಿರುವ ಕಂಬಳ ಸುವರ್ಣ ಮಹೋತ್ಸವ ಆಚರಿಸಿ ಶತಮಾನೋತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.

ಈ ಬಾರಿಯ ಕಂಬಳ ಕೂಟ 2023ರ ಜನವರಿ 28ಕ್ಕೆ ನಡೆಯಲಿದೆ. ಆಮಂತ್ರಣ ಪತ್ರಿಕೆ ಬಿಡುಗಡೆಗೂ ಮುನ್ನ ಪೂರ್ವಭಾವಿ ಸಭೆ ಕಂಬಳ ಕರೆ ಸಮೀಪ ನಡೆಯಿತು.
ಪ್ರಖ್ಯಾತ ಚಿತ್ರ ಕಾಂತಾರ ನಟ, ಕಂಬಳ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು 24 ಗಂಟೆಯೊಳಗೆ ನಡೆಯುವಂತಾಗಲು ಕಂಬಳ ಕೂಟಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದರು.
ಪುತ್ತೂರು ಕಂಬಳ ಕೂಟದ ಅಧ್ಯಕ್ಷ ಎನ್. ಚಂದ್ರಹಾಸ ರೈ ಮಾತನಾಡಿ , 24 ಗಂಟೆಯೊಳಗೆ ಕಂಬಳ ಕೂಟ ನಡೆಯುವಂತಾಗಲು ಎಲ್ಲರ ಸಹಕಾರ ಬೇಕು ಎಂದರು. ಕಂಬಳ ಕೂಟ ಪ್ರಾರಂಭವಾಗುವ ಮೊದಲು ಜ.28 ರ ಬೆಳಿಗ್ಗೆ ಎಲ್ಲಾ ಕಂಬಳ ಕೋಣದ ಯಜಮಾನರಿಗೆ ಸಮಿತಿ ನಿರ್ಧಾರ ತಿಳಿಸಿ ಸಹಕರಿಸುವಂತೆ ಕೋರಲಾಗುತ್ತದೆ ಎಂದರು.
ತೀರ್ಪುಗಾರ ನಿರಂಜನ್ ರೈ ಮಠಂತಬೆಟ್ಟು ಮಾತನಾಡಿ, ಕಂಬಳ ಕೂಟದಲ್ಲೇ ಪುತ್ತೂರಿನಲ್ಲಿ ಕಟ್ಟುನಿಟ್ಟಿನ ಸಮಯ ಪಾಲನೆ ನಡೆಯಲಿದೆ ಮತ್ತು ಲೇಸರ್ ತಂತ್ರಜ್ಞಾನದ ತೀರ್ಪು ನೀಡಲಿದ್ದೇವೆ, ಜಿಲ್ಲಾ ಕಂಬಳ ಸಮಿತಿಯ ತೀರ್ಮಾನದಂತೆ ನಡೆಯಲಿದೆ ಎಂದರು.
30ನೇ ವರ್ಷದ ಸ್ಮರಣ ಸಂಚಿಕೆ ಹೊರ ಬರುವ ಬಗ್ಗೆ ಮಾಹಿತಿ ನೀಡಿದರು.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು, ಕಂಬಳ ಸಮಿತಿ ಸಂಚಾಲಕರಾದ ಸುಧಾಕರ್ ಶೆಟ್ಟಿ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಕಾರ್ಯದರ್ಶಿ ದಿನೇಶ್ ಪಿ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ಕಂಬಳ ಕೂಟದ ಉಪಾಧ್ಯಕ್ಷ ಶಿವರಾಮ್ ಆಳ್ವ, ಉದ್ಯಮಿ ರಾಧಾಕೃಷ್ಣ ನಾೖಕ್, ಜಿನ್ನಪ್ಪ ಪೂಜಾರಿ ಮುರ, ಸುದರ್ಶನ್ ನಾೖಕ್ ಕಂಪ , ಜೋಕೀಂ ಡಿಸೋಜಾ,

ಸದಸ್ಯರಾದ ಶಶಿಕಿರಣ್ ರೈ, ರೋಶನ್ ರೈ ಬನ್ನೂರು , ಪ್ರವೀಣ್ ಶೆಟ್ಟಿ ಅಳಕೆಮಜಲು, ಭಾಗ್ಯೇಶ್ ರೈ, ವಿಕ್ರಮ್ ಶೆಟ್ಟಿ ಅಂತರ , ಗಣೇಶ್ ರಾಜ್, ಉಮೇಶ್ ಕರ್ಕೇರಾ , ಉಮಾಶಂಕರ್ ನಾೖಕ್, ಕೃಷ್ಣಪ್ರಸಾದ್ ಆಳ್ವ , ಎ.ಕೆ ಜಯರಾಮ್ ರೈ, ರಾಕೇಶ್ ಶೆಟ್ಟಿ ಕೆಮ್ಮಾರ, ಮಂಜುನಾಥ ಗೌಡ ಶಶಿಧರ್ ನೆಲ್ಲಿಕಟ್ಟೆ, ಸುದರ್ಶನ್ ನಾೖಕ್ ಕಂಪ , ಸಂತೋಷ್ ಕುಮಾರ್ ಸವಣೂರು, ಸದಾಶಿವ ಸಾಮಾನಿ, ಯೋಗೀಶ್ ಸಾಮಾನಿ, ಗಂಗಾಧರ್ ರೈ ಕೈಕಾರ, ಸುದೇಶ್ ನಾೖಕ್, ಸಂತೋಷ್ ಮುರ, ಬಿಪಿನ್ ಶೆಟ್ಟಿ ಸವಣೂರು, ಹಸೈನರ್ ಬನಾರಿ, ಸುಂದರ ಮುರ, ಮಹಾಬಲ ರೈ ಒಳತ್ತಡ್ಕ, ಪ್ರೇಮನಂದ ನಾೖಕ್, ವಿಲ್ಫ್ರೆಡ್ ಫೆರ್ನಾಂಡೀಸ್ , ವಿಜಿತ್ ಗೌಡ ಸಹಿತ ನೂರಾರು ಜನ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು .