Ad Widget

Santro Ravi | ರಾಜ್ಯ ರಾಜಕೀಯದಲ್ಲಿ ತಲ್ಲಣ ಎಬ್ಬಿಸಿದ್ದ ‘ಸ್ಯಾಂಟ್ರೋ ರವಿ’ 11 ದಿನಗಳ ನಂತರ ಗುಜರಾತ್‌ನಲ್ಲಿ ಬಂಧನ – ಈತ ನಡೆಯುತ್ತಿದ್ದ ಕಾರ್ ‘ಕೋಡ್ ವರ್ಡ್’ ಮೂಲಕ ಹುಡುಗಿಯರನ್ನು ಸಪ್ಲೈ ದಂಧೆ ಹೇಗಿತ್ತು ಗೊತ್ತೇ..?

InShot_20230113_162734370
Ad Widget

Ad Widget

ಬೆಂಗಳೂರು : ಹುಡುಗಿಯರಿಗೆ ಕಾರ್ ನ ಹೆಸರಿನ ಕೋಡ್ ವರ್ಡ್ ಮೂಲಕ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಗರ್ಲ್ಸ್‌ ಸಪ್ಲೈ ದಂಧೆ ಮಾಡುತಿದ್ದ ಹಲವು ರಾಜಕಾರಣಿಗಳ ಆಪ್ತ, ಇತ್ತಿಚೆಗೆ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದ ತಲೆ ಮರೆಸಿಕೊಂಡಿದ್ದ ವಂಚಕ ಸ್ಯಾಂಟ್ರೋ ರವಿಯನ್ನು (Santro Ravi) ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತನನ್ನು ಗುಜರಾತ್ ನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.

Ad Widget

Ad Widget

Ad Widget

Ad Widget

ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ “ಸ್ಯಾಂಟ್ರೋ ರವಿ” ಎಂದು ಕರೆಯಲ್ಪಡುವ ಕೆ.ಎಸ್. ಮಂಜುನಾಥ್ ದೇಶದಿಂದ ಪರಾರಿಯಾಗುವುದನ್ನು ತಡೆಯಲು ಆತನ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಲಾಗಿತ್ತು.ರವಿಯ ಬಂಧನಕ್ಕಾಗಿ ನಾಲ್ವರು ಎಸ್ ಪಿ ಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.

Ad Widget

Ad Widget

Ad Widget

Ad Widget

ಹಣ ವರ್ಗಾವಣೆ ವಂಚನೆ ಆರೋಪದಡಿ ಸ್ಯಾಂಟ್ರೋ ರವಿ ವಿರುದ್ಧ ಜಗದೀಶ್ ಎಂಬುವರು ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹಲವು ವರ್ಷಗಳಿಂದ ರವಿಯು ಹನಿ ಟ್ರ್ಯಾಪಿಂಗ್,ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ತನ್ನ ಇತರ ಕೆಲಸವನ್ನು ಮಾಡಲು ಪ್ರಾರಂಭಿಸಿದ್ದ ಎಂದು ಆರೋಪಿಸಲಾಗಿದೆ.

ಸ್ಯಾಂಟ್ರೋ ರವಿ ಅವರು ರಾಜ್ಯ ಅಬಕಾರಿ ಇಲಾಖೆಯ ಮಾಜಿ ಅಧಿಕಾರಿಯ ಮಗ. ರವಿ, 1995 ರಿಂದ ಮಾನವ ಕಳ್ಳಸಾಗಣೆದಾರನಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು 1988 ರಲ್ಲಿ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಅಪಹರಿಸಿ, ಆಕೆಯ ಮೇಲೆ ದೈಹಿಕ ದೌರ್ಜನ್ಯ ನಡೆಸಿ ಅದನ್ನು ಮುಚ್ಚಿಡಲು ಪ್ರಯತ್ನಿಸಿದ ಕೆಲವು ದಿನಗಳ ನಂತರ ಅವನನ್ನು ಬಂಧಿಸಲಾಗಿತ್ತು, ಆದರೆ ಅನಾರೋಗ್ಯದ ನೆಪದಲ್ಲಿ ಮೈಸೂರು ಮೂಲದ ಕೆಆರ್ ಆಸ್ಪತ್ರೆಯಿಂದ ಪರಾರಿಯಾಗಿದ್ದ.

Ad Widget

Ad Widget

ಈತನನ್ನು ಹುಡುಕಿಕೊಂಡು ಪೊಲೀಸರು ಹೆಬ್ರಿಗೂ ಬಂದಿದ್ದರು.

ಭೂಗತವಾಗಿ ಉಳಿದ ನಂತರ, ಮಂಜುನಾಥ್ ಸ್ಯಾಂಟ್ರೋ ರವಿ ಎಂಬ ಹೆಸರಿನಲ್ಲಿ ಮಹಿಳೆಯರಿಗೆ ಉದ್ಯೋಗದ ಭರವಸೆ ನೀಡಿ ನಂತರ ಅವರನ್ನು ಮಾನವ ಕಳ್ಳಸಾಗಣೆಗೆ ತಳ್ಳಿದ್ದ ಎಂದು ತಿಳಿದು ಬಂದಿದೆ.

ಸ್ಯಾಂಟ್ರೋ ರವಿಯ(Santro Ravi)  ಜೊತೆಗೆ ಸಚಿವರು, ಬಿಜೆಪಿ (BJP) ನಾಯಕರು ಇರುವ ಫೋಟೋಗಳನ್ನ ಕಾಂಗ್ರೆಸ್ (Congress) ರಿಲೀಸ್ ಮಾಡುತ್ತಿದ್ದರೆ. ಅತ್ತ ಹೆಚ್​ಡಿ ಕುಮಾರಸ್ವಾಮಿ ವಿಡಿಯೋ ರಿಲೀಸ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಗಂಭೀರವಾದ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇನ್ನು ಸ್ಯಾಂಟ್ರೋ ಕಾರು ಓಡಿದಷ್ಟೇ ಸಲೀಸಾಗಿ ದಂಧೆ ಮುಗಿಸಿ ಬಿಸಾಡಿಬಿಡ್ತಾನೆ. ಓದಿರೋದು ಬರೀ ಪಿಯುಸಿ, ಆದ್ರೆ, ಈತನ ತಲೆಯಲ್ಲಿರೋ ಖತರ್ನಾಕ್ ಕಿಲಾಡಿತನಕ್ಕೇನು ಕಮ್ಮಿಯಲ್ಲ. ಗರ್ಲ್ಸ್ ಸಪ್ಲೈಗೆ ಇಟ್ಟಿದ್ದ ‘ಕಾರ್’ ಕೋಡ್‌ವರ್ಡ್ ಸಂಗತಿಗಳು ಬಯಲಿಗೆ ಬಂದಿವೆ.

ರವಿ ರಂಗೀನಾಟಗಳೆಲ್ಲಾ ರಸ್ತೆ ಬರುತ್ತಿವೆ. ಒಂದೆಡೆ ಪಾಲಿಟಿಕ್ಸ್ ಫೈಟ್ ನಡೆಯುತ್ತಿದ್ದರೆ, ಮತ್ತೊಂದ್ಕೆಡೆ ರವಿ ಕೋರ್ಡ್ ಕಳ್ಳಾಟಗಳು ಬಯಲಾಗುತ್ತಿವೆ. ಡೀಲ್‌ಗೊಂದು ಕೋಡ್, ಗರ್ಲ್ಸ್‌ ಸಪ್ಲೈಗೆ ಕೋರ್ಡ್‌ ವರ್ಡ್ ಬಳಸುತ್ತಿದ್ದ ಸ್ಯಾಂಟ್ರೋ ರವಿ ಸೀಕ್ರೆಟ್ ಕೇಳಿದ್ರೆ, ಹಿಂಗೂ ಮಾಡ್ತಿದ್ನಾ ಎಂದು ನೀವೇ ಶಾಕ್ ಆಗ್ತೀರಾ..

ವೇಶ್ಯಾವಾಟಿಕೆ ದಂಧೆ.. ಗರ್ಲ್ಸ್ ಸಪ್ಲೈಗೆ ಇಟ್ಟಿದ್ದ ‘ಕಾರ್’ ಕೋಡ್‌ ವರ್ಡ್?

ಒಂದೇ ಮಾತಲ್ಲಿ ಹೇಳಬೇಕಂದರೆ, ಇವನ ಉದ್ಯೋಗವೇ ಡೀಲ್ ಆ್ಯಂಡ್ ಸಪ್ಲೈ. ಅಧಿಕಾರಿಗಳಿಗೆ ವರ್ಗಾವಣೆ ಡೀಲ್ ಮಾಡಿಸುತ್ತಿದ್ದನಂತೆ. ರಾಜಕಾರಣಿಗಳಿಗೆ ಹುಡುಗಿಯರನ್ನ ಕಳುಹಿಸುತ್ತಿದ್ದನಂತೆ. ಈ ದಂಧೆಯಲ್ಲಿ ಪಿಎಚ್​ಡಿ ಮಾಡಿದ್ದ ಈ ಕೇಡಿ, ತನ್ನ ದಂಧೆಯ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ಹೋಟೆಲ್​ನಲ್ಲಿ ಮೆನ್ಯೂ ಕಾರ್ಡ್​ನಂತೆ ಹೈಟೆಕ್​ ವೇಶ್ಯಾವಾಟಿಕೆಗೆ ಕೋರ್ಡ್ ವರ್ಡ್​ ಇಟ್ಟಿದ್ದನಂತೆ. ಹಾಗಾದ್ರೆ ಏನಿದು ಸ್ಯಾಂಟ್ರೋ ರವಿಯ ಸೀಕ್ರೆಟ್..? ಹೈಟೆಕ್ ವೇಶ್ಯಾವಾಟಿಕೆಗೆ ಈ ಐನಾತಿ ಕೊಟ್ಟಿದ್ದ ಕೋಡ್​​ ವರ್ಡ್​ ಏನು ಎನ್ನುವುದು ಈ ಕೆಳಗಿನಂತಿದೆ ನೋಡಿ.

ಪ್ರಾಣಿ ಬಲಿಯ ಮೂಲಕ ದೈವಗಳ ಆರಾಧನೆ ನಡೆಯುವುದರಿಂದ ಪೇಜಾವರ ಶ್ರೀಗಳ ಮಾಂಸಾಹಾರದ ಕುರಿತ ಹೇಳಿಕೆ ಗೊಂದಲ ಮೂಡಿಸುತ್ತದೆ – ಪ್ರಾಣಿಗಳನ್ನು ನೇತು ಹಾಕುವುದರ ಹಿಂದಿನ ಕಾರಣವೇನು ? ಶ್ರೀಗಳ ಹೇಳಿಕೆ ಕೋಳಿ, ಕುರಿ , ಆಡು ಬೆಳೆಯುವ ರೈತರಿಗೂ ಅರ್ಥಿಕ ನಷ್ಟ ಉಂಟು ಮಾಡಬಹುದು : ನಟ ನಿರ್ಮಾಪಕ ತಮ್ಮಣ್ಣ

ಯುವತಿಯರ ವಯಸ್ಸು.. ಚೆಂದಕ್ಕೆ ತಕ್ಕಂತೆ ಕೋಡ್​ ವರ್ಡ್

ಸ್ಯಾಂಟ್ರೋ ರವಿ ವೇಶ್ಯಾವಾಟಿಕೆ ದಂಧೆಯಲ್ಲಿ 18 ರಿಂದ 22 ವಯಸ್ಸಿನ ಯುವತಿಯರಿಗೆ ಜಾಗ್ವಾರ್ ಎಂದು ಕೋಡ್​ ವರ್ಡ್​ ಕೊಟ್ಟಿದ್ನಂತೆ.. 23 ರಿಂದ 25 ವಯಸ್ಸಿನ ಯುವತಿಯರಿಗೆ ಆಡಿ ಕಾರು ಹೆಸರಿಟ್ಟಿದ್ರೆ, 26 ರಿಂದ 29 ವಯಸ್ಸಿನ ಯುವತಿಯರಿಗೆ ಬೆಂಜ್​ ಕಾರು ಕೋಡ್​ ಕೊಟ್ಟಿದ್ನಂತೆ. ಇಷ್ಟೇ ಅಲ್ಲ 30 ವರ್ಷದ ಹುಡುಗಿಯರಿಗೆ ಬಿಎಂಡಬ್ಲ್ಯೂ ಕಾರು ಹೆಸರಿನ ಕೋಡ್​ ಇಟ್ಟಿದ್ನಂತೆ. ಇದರ ಜತೆಗೆ ಚಂದದ ಯುವತಿಯರು, ಅವರ ವಯಸ್ಸಿಗೆ ತಕ್ಕಂತೆಯೂ ಕೋಡ್​ ವರ್ಡ್ ಕೊಟ್ಟಿದ್ನಂತೆ ಕಿಲಾಡಿ.. ಮಾರ್ಕೆಟ್​​ನಲ್ಲಿ ಜಾಗ್ವಾರ್​ ಕಾರಿಗೆ ಫುಲ್​ ಡಿಮ್ಯಾಂಡ್​ ಇತ್ತಂತೆ. ಎಳಸು ಯುವತಿಯರಿಗೆ ಈತನ ಭಾರಿ ಬೇಡಿಕೆ ಇತ್ತು ಎನ್ನುವ ಬಗ್ಗೆ ಮಾಹಿತಿಯೂ ಇದೆ. ಹೀಗೆ ಕೋಡ್‌ವರ್ಡ್ ಇಟ್ಟಿದ್ದವನೇ, ಗ್ರಾಹಕ ರಾಜಕಾರಣಿಗಳಿಗೆ ಫೋಟೋ ಕಳಿಸಿ ಗಾಳ ಹಾಕಿದ್ದನಂತೆ. ಮಾಂಸದಂಧೆಯಲ್ಲಿ ಪ್ರಭಾವಿಗಳನ್ನೇ ಕ್ಲೈಂಟ್‌ಗಳನ್ನಾಗಿ ಮಾಡಿಕೊಳ್ಳುತ್ತಿದ್ದನಂತೆ. ಕ್ಲೈಂಟ್​ಗಳ ಮೂಲಕವೇ ತನ್ನ ಕೆಲಸವನ್ನೂ ಸಲೀಸಲಾಗಿ ಮಾಡಿಕೊಳ್ತಿದ್ನಂತೆ.

ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳೇ ಕ್ಲೈಂಟ್​ಗಳು
ರಾಜಕಾರಣಿಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳೇ ಸ್ಯಾಂಟ್ರೋ ರವಿಯ ಕ್ಲೈಂಟ್​ಗಳಾಗಿದ್ರಂತೆ. ಆ ಕ್ಲೈಂಟ್​ಗಳಿಗೆ ಹುಡುಗಿಯರ ಫೋಟೋಗಳನ್ನ ಕಳಿಸೋಕು ಮುನ್ನ, ಮೀಟಿಂಗ್​ ಮಾಡುತ್ತಿದ್ನಂತೆ.. ಮೀಟಿಂಗ್​ ಬಳಿಕ 50 ಯುವತಿಯರ ಫೋಟೋಸ್ ಕಳುಹಿಸಿ, ಅವರು ಸೆಲೆಕ್ಟ್​ ಮಾಡಿದವರನ್ನ ಕಳುಹಿಸುತ್ತಿದ್ನಂತೆ.. ಸ್ಯಾಂಟ್ರೋ ಕಾರಿನಲ್ಲಿಯೇ ಕೂತು ದೊಡ್ಡ ದೊಡ್ಡ ಡೀಲ್ ಮಾಡುತ್ತಿದ್ನಂತೆ. ಅಚ್ಚರಿ ಅಂದ್ರೆ ಕ್ಲೈಂಟ್​ನ ಪ್ರತಿಯೊಂದು ವ್ಯವಹಾರಗಳನ್ನೂ ಈ ಸ್ಯಾಂಟ್ರೋ ರವಿ ರೆಕಾರ್ಡ್ ಮಾಡುತ್ತಿದ್ದ ಅನ್ನೋ ಬಗ್ಗೆ ಮಾಹಿತಿ ಇದೆ.. ಯಾಕಂದ್ರೆ ತನ್ನ ಮುಂದಿನ ಕೆಲಸಕ್ಕೆ ಅನುಕೂಲ ಆಗಲಿ ಅಂತ ರೆಕಾರ್ಡ್ ಮಾಡ್ತಿದ್ನಂತೆ.. ಕೆಲಸ ಮಾಡಿಕೊಡದ ಅಧಿಕಾರಿಗಳಿಗೆ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್​ ಮಾಡ್ತಿದ್ದ ಅಂತಾನೂ ಹೇಳಲಾಗ್ತಿದೆ.

‘ಲ್ಯಾಪ್​ಟಾಪ್’​ ಹುಡುಕೋಕೆ ಹೋಗಿ ತಗ್ಲಾಕೊಂಡ್ನಾ ಸ್ಯಾಂಟ್ರೋ ರವಿ..?
ಅಸಲಿಗೆ ಸ್ಯಾಂಟ್ರೋ ರವಿ ಸೀಕ್ರೆಟ್​ ಸ್ಫೋಟವಾಗಿದ್ದೇ ಅಂದೊಂದು ಲ್ಯಾಪ್‌ಟಾಪ್‌ನಿಂದ. ತನ್ನ ಪತ್ನಿಯ ವಿರುದ್ಧವೇ ದೂರು ಕೊಡಿಸಿದ್ದ ಸ್ಯಾಂಟ್ರೋ, ತಾನು ತೋಡಿದ್ದ ಖೇಡ್ಡಾಕ್ಕೆ ತಾನೇ ಬಿದ್ದಿದ್ದಾನೆ. ಅದೇಗಂದ್ರೆ, ಪತ್ನಿ ವಿರುದ್ಧ ಖಾಸಗಿ ವ್ಯಕ್ತಿ ಮೂಲಕ ದೂರು ದಾಖಲಿಸಿದ್ದ ರವಿ, ನಮ್ಮ ಮನೆಯಲ್ಲಿ ಕಳ್ಳತನ ಸುಲಿಗೆ ಆಗಿದೆ ಎಂದು ಆರೋಪ ಮಾಡಿದ್ದ. ಈ ಸಂಬಂಧ ಪತ್ನಿ, ಆಕೆಯ ತಂಗಿಯನ್ನ ಬೆಂಗಳೂರು ಕಾಟನ್​ಪೇಟೆ ಪೊಲೀಸರು ಬಂಧಿಸಿದ್ದರಂತೆ.. ಇದಾದ ಬಳಿಕ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್​ ಠಾಣೆಯಲ್ಲಿ ಆತನ ಪತ್ನಿಯೇ ದೂರು ನೀಡಿದ್ದಳು. ಅತ್ಯಾಚಾರದ ಆರೋಪ ಹಾಗೂ ವೇಶ್ಯಾವಾಟಿಕೆಗೆ ಹೋಗುವಂತೆ ಕಿರುಕುಳ ನೀಡಿದ ಆರೋಪದಡಿ ದೂರು ನೀಡಿದ್ದಳು. ಆದ್ರೆ ಇಬ್ಬರ ಈ ಗುದ್ದಾಟ ಕೇವಲ ದೂರಿಗಷ್ಟೇ ಮುಗಿಯಲಿಲ್ಲ. ಅಸಲಿಗೆ ಇಲ್ಲಿ ಸ್ಯಾಂಟ್ರೋ ರವಿ ದೂರು ಕೊಟ್ಟಿದ್ದೇ ಆ ಲ್ಯಾಪ್‌ಟಾಪ್‌ಗಾಗಿ ಎನ್ನಲಾಗಿದೆ.

ಏನಿದು ಲ್ಯಾಪ್​ಟಾಪ್​ ಕಹಾನಿ.?
ಅಂದಹಾಗೆ, ಲ್ಯಾಪ್ ಟಾಪ್‌ಗಾಗಿ ಸ್ಯಾಂಟ್ರೋ ರವಿ ಹಾತೊರೆಯುತ್ತಿದ್ದ ಎನ್ನಲಾಗಿದೆ. ಯಾಕಂದ್ರೆ, ಸ್ಯಾಂಟ್ರೋ ರವಿ ಕಳೆದುಕೊಂಡಿರುವ ಲ್ಯಾಪ್​ಟಾಪ್​ನಲ್ಲಿ ಪ್ರಭಾವಿ ರಾಜಕಾರಣಿಗಳ ರಹಸ್ಯಗಳು ಅಡಗಿವೆಯಂತೆ.. ಪ್ರಮುಖವಾಗಿ ‘ಬಾಂಬೆ ಫ್ರೆಂಡ್ಸ್’ಗೆ ಸಲ್ಲಿಸಿದ್ದ ‘ಸೇವೆ’ಯ ಬಗ್ಗೆ ದಾಖಲೆಗಳು ಲ್ಯಾಪ್​ಟಾಪ್​ನಲ್ಲಿ ಇದ್ದ ಬಗ್ಗೆ ಮಾಹಿತಿ ಇದೆ. ಇದೇ ಕಾರಣಕ್ಕೆ ಸೀಕ್ರೆಟ್ ಲ್ಯಾಪ್​ಟಾಪ್​ನ್ನ ರವಿ ಪತ್ನಿ ಹೊತ್ತೊಯ್ದಿರಬೇಕು ಅಂತ ರವಿ ಅನುಮಾನ ವ್ಯಕ್ತಪಡಿಸಿದ್ದಾನಂತೆ.. ಲ್ಯಾಪ್​ಟಾಪ್​ ಮಿಸ್​ ಆದಾಗಿನಿಂದಲೇ ಮಾಹಿತಿ, ದಾಖಲೆ ಲೀಕ್ ಆದ ಬಗ್ಗೆ ಮಾಹಿತಿಯೂ ಇದೆ.. ಪರ್ಸನಲ್ ದಾಖಲೆಗಳು ಲೀಕ್ ಆಗಿದ್ದರಿಂದಲೇ ಸ್ಯಾಂಟ್ರೋ ರವಿ ಹೆಸರು ಭಾರಿ ಚರ್ಚೆ ಗ್ರಾಸವಾಗಿದೆ.

ಪರಾರಿಯಾಗಿರೋ ಸ್ಯಾಂಟ್ರೋ ರವಿಗಾಗಿ ಖಾಕಿ ಹುಡುಕಾಟ
ಇನ್ನೂ ಇಷ್ಟೆಲ್ಲಾ ಕಿರಾತಕ ಕೆಲಸ ಮಾಡಿ ತಲೆಮರೆಸಿಕೊಂಡಿರೋ ಸ್ಯಾಂಟ್ರೋ ರವಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಈಗಾಗಲೇ ತನಿಖೆ ಆರಂಭಿಸಿರುವ ಪೊಲೀಸರು, ಶೀಘ್ರವೇ ಸ್ಯಾಂಟ್ರೋ ರವಿಯನ್ನ ಬಂಧಿಸುತ್ತೇವೆ ಎಂದಿದ್ದಾರೆ. ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಪ್ರತಿಕ್ರಿಯಿಸಿ ಯಾವುದೇ ಮುಲಾಜಿಲ್ಲದೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಒಟ್ಟಿನಲ್ಲಿ ಸ್ಯಾಂಟ್ರೋ ರವಿಯ ಒಂದೊಂದೇ ಮುಖವಾಡಗಳು ಬಯಲಾಗ್ತಿದ್ದು, ರವಿಯ ದಂಧೆ ಬೆನ್ನತ್ತಿ ಪೊಲೀಸರು ಹೊರಟಿದ್ದಾರೆ. ಆತ ಸೆರೆ ಸಿಕ್ಕರೆ ಮತ್ತಷ್ಟು ಖತರ್ನಾಕ ಕಹಾನಿಗಳು, ಲ್ಯಾಪ್‌ಟಾಪ್‌ನ ರಹಸ್ಯಗಳು ಬಯಲಿಗೆ ಬರಲಿವೆ.

ಇದೀಗ ಬಿಜೆಪಿ ನಾಯಕರೊಂದಿಗೆ ಆಪ್ತನಾಗಿದ್ದ ಸ್ಯಾಂಟ್ರೋ ರವಿ ಗುಜರಾತಿನಲ್ಲಿ ಬಂಧನವಾಗಿರುವುದು ಹೊಸ ರಾಜಕೀಯ ಚರ್ಚೆಗೆ ಗ್ರಾಸವಾಗಲಿದೆಯೇ ಕಾದು ನೋಡಬೇಕು.

Ad Widget

Leave a Reply

Recent Posts

error: Content is protected !!
%d bloggers like this: