ನವ ದೆಹಲಿ, ಜ 13 : ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಿಸಿದ್ದಾರೆ.
ಟ್ವೀಟ್ ಮಾಡುವ ಮೂಲಕ ಸಾನಿಯಾ ಮಿರ್ಜಾ ನಿವೃತ್ತಿಯ ಮಾಹಿತಿ ನೀಡಿದ್ದಾರೆ.
ಜನವರಿ 16 ರಿಂದ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಸಾನಿಯಾ ಅವರ ಕೊನೆಯ ಟೂರ್ನಿಯಾಗಲಿದೆ.
ಇದೀಗ ಆಸ್ಟ್ರೇಲಿಯನ್ ಓಪನ್ ಮೂಲಕವೇ ತಮ್ಮ ವೃತ್ತಿಜೀವನವನ್ನ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ.
ಈ ಹಿಂದೆ ಫೆಬ್ರವರಿ 19 ರಂದು ಆರಂಭವಾಗಲಿರುವ ಡಬ್ಲ್ಯುಟಿಎ 1000 ದುಬೈ ಟೆನಿಸ್ ಚಾಂಪಿಯನ್ ಶಿಪ್ ನಂತರ ನಿವೃತ್ತಿಯಾಗುವುದಾಗಿ ಸಾನಿಯಾ ಘೋಷಿಸಿದ್ದರು.
ಆಸ್ಟ್ರೇಲಿಯನ್ ಓಪನ್ ನಂತರ ತಮ್ಮ ಮಗನೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇನೆ ಎಂದು ಸಾನಿಯಾ ಮಿರ್ಜಾ ತಿಳಿಸಿದ್ದಾರೆ.
ನಾನು ಟೆನಿಸ್ ಕಲಿಯಲು ತುಂಬಾ ಚಿಕ್ಕವಳಿದ್ದೇನೆ ಎಂದು ಭಾವಿಸಿದ್ದೆ. ನನ್ನ ಕನಸುಗಳ ಹೋರಾಟ 6ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು’ ಎಂದಿದ್ದಾರೆ.
Life update 🙂 pic.twitter.com/bZhM89GXga
— Sania Mirza (@MirzaSania) January 13, 2023