Connect with us

ಸಿನೆಮಾ

Jayasudha | 64ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಖ್ಯಾತ ನಟಿ ಜಯಸುಧಾ

Ad Widget

Ad Widget

ಬಹುಭಾಷಾ ನಟಿ ಜಯಸುಧಾ (Jayasudha) ತಮ್ಮ 64ನೇ ವಯಸ್ಸಿನಲ್ಲಿ ಮತ್ತೊಂದು ಮದುವೆ ಆಗಿರುವ ಸುದ್ದಿ ತಮಿಳು ಚಿತ್ರೋದ್ಯಮದಲ್ಲಿ ಹರಿದಾಡುತ್ತಿದೆ. ಈಗಾಗಲೇ ಎರಡು ಮದುವೆ ಆಗಿದ್ದ ಅವರು, ಎರಡರಿಂದಲೂ ವಿಚ್ಚೇದನೆ ಪಡೆದಿದ್ದರು. ಇದೀಗ ಮೂರನೇ ಮದುವೆ ಕೂಡ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಉದ್ಯಮಿಯೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರಂತೆ.

Ad Widget

Ad Widget

Ad Widget

Ad Widget

ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ ಜೊತೆ ಜಯಸುಧಾ ಮದುವೆ ಆಗಿದ್ದರು. ಹೊಂದಾಣಿಕೆಯ ಕೊರತೆಯಿಂದಾಗಿ ಈ ಜೋಡಿ ಬೇರ್ಪಟ್ಟಿತ್ತು. ಇದು ತಮಿಳು ಚಿತ್ರೋದ್ಯಮದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ರಮೇಶ್ ಅವರಿಂದ ವಿಚ್ಚೇದನೆ ಪಡೆದುಕೊಂಡ ನಂತರ ಬಾಲಿವುಡ್ ನಟ ಜಿತೇಂದ್ರ ಕಪೂರ್ ಸಹೋದರ ಸಂಬಂಧಿ ನಿತಿನ್ ಕಪೂರ್ ಜೊತೆ ಸಪ್ತಪದಿ ತುಳಿದಿದ್ದರು. ನಿತಿನ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡು ಜಯಸುಧಾ ಅವರನ್ನು ಒಂಟಿಯಾಗಿ ಬಿಟ್ಟು ಹೋದರು.

Ad Widget

Ad Widget

Ad Widget

ಇಷ್ಟಪಟ್ಟು ಮದುವೆ ಆಗಿದ್ದ ನಿತಿನ್ ಸಾವಿನ ನಂತರ ಜಯಸುಧಾ ತಮ್ಮ ಮಕ್ಕಳೊಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ ಹೊತ್ತಲ್ಲಿ ಉದ್ಯಮಿಯೊಬ್ಬರ ಜೊತೆ ಜಯಸುಧಾ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ಕಾರ್ಯಕ್ರಮಗಳಲ್ಲಿ ಅವರು ಆ ಉದ್ಯಮಿಯೊಂದಿಗೆ ಭಾಗಿಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ನಡೆದ ಆಲಿ ಮಗಳ ಮದುವೆ ಮತ್ತು ವಾರೀಸು ಸಿನಿಮಾದ ಈವೆಂಟ್ ಗೂ ಕೂಡ ಆ ಉದ್ಯಮಿಯನ್ನು ಜಯಸುಧಾ ಕರೆತಂದಿದ್ದರು.

Ad Widget

ತನ್ನ ಪುತ್ರನ ವಿವಾಹವನ್ನು ಮಾರ್ಚ್ ತಿಂಗಳಲ್ಲಿ ಅದ್ದೂರಿಯಾಗಿ ಮಾಡಿದ್ದಾರೆ.

Ad Widget

Ad Widget
Click to comment

Leave a Reply

ಸಿನೆಮಾ

  Lakshmika Sajeevan ಹಠಾತ್‌ ಹೃದಯಾಘಾತ – 24ರ ಹರೆಯದ  ಮಲಯಾಳಂ ನಟಿ ಲಕ್ಷ್ಮಿಕಾ  ಸಜೀವನ್ ಮೃತ್ಯು

Ad Widget

Ad Widget

ಚಲನಚಿತ್ರ ಹಾಗೂ ಟೆಲಿಫಿಲ್ಮ್ʼ ಗಳ ನಟನೆಯ ಮೂಲಕ ಮನೆಮಾತಾಗಿದ್ದ ಮಲಯಾಳಂ ನಟಿ (Mollywood Actress) ಲಕ್ಷ್ಮಿಕಾ ಸಜೀವನ್ (Lakshmika Sajeevan) ಅವರು ಹಠಾತ್ ಅಸ್ವಸ್ಥಗೊಂಡು ಶಾರ್ಜಾದಲ್ಲಿ ನಿಧನರಾದರು. 24ರ ಹರೆಯದ ಉದಯೋನ್ಮುಖ ಪ್ರತಿಭೆ ಹಠಾತ್ ಹೃದಯಘಾತಕ್ಕೆ (Heart Attack) ತುತ್ತಾಗಿ ಮೃತಪಟ್ಟಿರುವುದಾಗಿ ವರದಿ ತಿಳಿಸಿವೆ.

Ad Widget

Ad Widget

Ad Widget

Ad Widget

ಶೋಷಿತ ಸಮುದಾಯಗಳ ಹೋರಾಟಗಳ ಮೇಲೆ ಬೆಳಕು ಚೆಲ್ಲುವ ಸಿನಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ಟೆಲಿಫಿಲ್ಮ್ ‘ಕಕ್ಕ’ದಲ್ಲಿ ಪಂಚಮಿಯ ಪಾತ್ರ ಲಕ್ಷ್ಮಿಕಾಗೆ ಭಾರೀ ಜನಪ್ರಿಯತೆ ತಂದು ಕೊಟ್ಟಿತ್ತು. ಅದರಲ್ಲಿ ಆಕೆ ಮನೋಜ್ಞವಾಗಿ ನಟಿಸಿದ್ದು, ಚಿತ್ರದಲ್ಲಿನ ಆಕೆಯ ಅಭಿನಯವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಪಾತ್ರದ ನಟನೆಗೆ ಪ್ರೇಕ್ಷಕರಿಂದ ಲೂ ಭರಫುರ ಮನ್ನಣೆ ಮತ್ತು ಮೆಚ್ಚುಗೆ ದೊರಕಿತ್ತು.

Ad Widget

Ad Widget

Ad Widget

ದುಲ್ಕರ್ ಸಲ್ಮಾನ್ ಅವರ ‘ಒರು ಯಮಂದನ್ ಪ್ರೇಮಕಥಾ,’ ‘ಪಂಚವರ್ಣತಥಾ,’ ‘ಸೌದಿ ವೆಲ್ಲಕ್ಕ,’ ‘ಪುಜಯಮ್ಮ,’ ‘ಉಯರೆ,’ ‘ಒರು ಕುಟ್ಟನಾಡನ್ ಬ್ಲಾಗ್,’ ಮತ್ತು ‘ನಿತ್ಯಹರಿತ ನಾಯಕನ್’ ಆಕೆ ನಟಿಸಿದ ಪ್ರಮುಖ ಸಿನಿಮಾಗಳು. ಕೊಚ್ಚಿಯ ವಜವೇಲಿಲ್ ಮೂಲದ ಲಕ್ಷ್ಮಿಕಾ ಶಾರ್ಜಾದ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

Ad Widget

ಪ್ರಶಾಂತ್ ಬಿ ಮೊಲಿಕಲ್ ನಿರ್ದೇಶನದ ಮತ್ತು ಅಮಲ್ ಮೋಹನ್ ಬರೆದ ಥ್ರಿಲ್ಲರ್ ‘ಕೂನ್’ ಚಿತ್ರದಲ್ಲಿ ಲಕ್ಷ್ಮಿಕಾ ನಟಿಸಿದ್ದರು. ವಿಜೀಶ್ ಮಣಿ ನಿರ್ದೇಶನದ ‘ಪುಳಯಮ್ಮ’ ನಾಟಕ ಚಿತ್ರದಲ್ಲಿನ ದೇವಯಾನಿ ಟೀಚರ್ ಪಾತ್ರಕ್ಕಾಗಿ ಅವರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದರು.

Ad Widget

Ad Widget
Continue Reading

ಸಿನೆಮಾ

Toxic | ಯಶ್ ನಟನೆಯ ಹೊಸ ಸಿನಿಮಾ ʼಟಾಕ್ಸಿಕ್‌ʼ ಟೀಸರ್ ರಿಲೀಸ್

Ad Widget

Ad Widget

ಬೆಂಗಳೂರು: ರಾಕಿಂಗ್ ಸ್ಟಾರ್ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದ ‘ಯಶ್ 19’ ಸಿನಿಮಾದ ಅತೀದೊಡ್ಡ ಅಪ್ಡೇಟ್ ಇತ್ತೀಚೆಗಷ್ಟೇ ಹೊರಬಿದ್ದಿದೆ.‌ಆ ಮೂಲಕ ‘ಕೆಜಿಎಫ್-2’ ರಿಲೀಸ್ ಅದ 20 ತಿಂಗಳ ನಂತರ ಸಿನಿರಂಗದಲ್ಲಿ ಯಶ್ ಮೇನಿಯ ಮತ್ತೆ ಶುರುವಾಗಿದೆ (Toxic).

Ad Widget

Ad Widget

Ad Widget

Ad Widget

ಇತ್ತೀಚೆಗಷ್ಟೇ ಯಶ್ ತನ್ನ ಸೋಶಿಯಲ್ ‌ಮೀಡಿಯಾದಲ್ಲಿ‌ ‘ಲೋಡಿಂಗ್’ ಎಂದು ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿ, ಡಿ.9 ರ ಬೆಳಗ್ಗೆ 9:55 ಕ್ಕೆ ಟೈಟಲ್ ಅನೌನ್ಸ್ ಮೆಂಟ್ ಮಾಡುವುದಾಗಿ ಹೇಳಿದ್ದರು.

Ad Widget

Ad Widget

Ad Widget

ಸಿನಿಮಾಕ್ಕೆ ʼಟಾಕ್ಸಿಕ್‌ʼ (Toxic) ಎಂದು ಟೈಟಲ್ ಇಡಲಾಗಿದೆ. ಅಂದುಕೊಂಡಂತೆ ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ.

Ad Widget

1 ನಿಮಿಷ 18 ಸೆಕೆಂಡ್ ಗಳ ಟೈಟಲ್ ವಿಡಿಯೋದಲ್ಲಿ ಜೋಕರ್ ರೀತಿಯ ಮುಖವನ್ನು ಹೋಲುವ ಕ್ಯಾರೆಕ್ಟರ್ ನ್ನು ತೋರಿಸಲಾಗಿದೆ. ಮೇಲ್ನೊಟಕ್ಕೆ ಹಾಲಿವುಡ್ ರೀತಿಯ ದೃಶ್ಯ ಗಳ ವಿಎಫ್ ಎಕ್ಸ್ ಗಳನ್ನು ತೋರಿಸಲಾಗಿದೆ.

Ad Widget

Ad Widget

2025 ರ ಏಪ್ರಿಲ್ 10 ರಂದು ಸಿನಿಮಾ ತೆರೆ ಕಾಣಲಿದೆ. ಯಶ್ ಬಿಟ್ಟು ಬೇರೆ ಯಾವ ಪಾತ್ರವರ್ಗವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

‘ಯಶ್ 19’ ಅಪ್ಡೇಟ್ ಬಳಿಕ ಸಿನಿಮಾದ ಬಗ್ಗೆ ಟ್ರೆಂಡ್ ಹೆಚ್ಚಿದೆ. ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ ಎನ್ನುವ ಮಾತುಗಳು ಹಬ್ಬಿದೆ. ಇದರೊಂದಿಗೆ ಮೃಣಾಲ್ ಠಾಕೂರ್ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ಕೆಲ ವರದಿಗಳ ಪ್ರಕಾರ ಸಿನಿಮಾದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ ಎನ್ನಲಾಗಿದೆ.

ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಿದೆ.‌ ಕಳೆದ ಕೆಲ ಸಮಯದಿಂದ ಯಶ್ ಹಾಲಿವುಡ್ ತಂತ್ರಜ್ಞರನ್ನು ಭೇಟಿ ಆಗುವುದರ ಜೊತೆ ಹಾಲಿವುಡ್ ನಾಡಿನಲ್ಲೇ ಕೆಲ ಸಮಯ ಕಳೆದಿದ್ದರು. ಆ ಕಾರಣದಿಂದ ಈ ಸಿನಿಮಾದಲ್ಲಿ ಭಾರೀ ಆ್ಯಕ್ಷನ್ ಇರಲಿದೆ ಎನ್ನಲಾಗುತ್ತಿದೆ.

Continue Reading

ಸಿನೆಮಾ

Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ

Ad Widget

Ad Widget

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲ ದಿನಗಳ ಬಳಿಕ ಮುಂಗಾರು ಮಳೆ’ ಸಿನಿಮಾ ಖ್ಯಾತಿಯ ನಟಿ ಪೂಜಾ ಗಾಂಧಿ, ತಮ್ಮ ಪತಿ ವಿಜಯ್ ಅವರೊಂದಿಗೆ ಕುವೆಂಪು ಅವರ ಹುಟ್ಟೂರು ಕುಪ್ಪಳಿಗೆ ಭೇಟಿ ನೀಡಿದ್ದಾರೆ. ಕವಿ ಶೈಲದಲ್ಲಿ ಸಮಯ ಕಳೆದಿರುವ ಅವರು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೂಜಾ ಗಾಂದಿಯವರು ಹೊರ ರಾಜ್ಯದವರಾದರೂ ಮದುವೆಯಾದ ತಕ್ಷಣ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕನ್ನಡ ಸಾರಸ್ವತ ಲೋಕದ ದಿಗ್ಗಜ ಕುವೆಂಪು ಬಾಳಿ ಬದುಕಿದ ಮನೆಗೆ ಭೇಟಿ ನೀಡಿ ಅಲ್ಲಿ ಫೋಟೊ ತೆಗೆಸಿಕೊಂಡಿರುವುದು ಕನ್ನಡಿಗರ ಖುಷಿಗೆ ಕಾರಣವಾಗಿದೆ.

Ad Widget

Ad Widget

Ad Widget

Ad Widget


ಬೆಂಗಳೂರಿನ ಯಲಹಂಕದಲ್ಲಿ ನಟಿ ಪೂಜಾ ಗಾಂಧಿ ಮತ್ತು ಉದ್ಯಮಿ ವಿಜಯ್ ಘೋರ್ಪಡೆ ನವೆಂಬರ್ 29 ರಂದು ಕುವೆಂಪು ಅವರ ಪರಿಕಲ್ಪನೆಯ ಮಂತ್ರ ಮಾಂಗಲ್ಯ ಪದ್ಧತಿಯಂತೆ ನಡೆದಿತ್ತು. . ವಿವಾಹಗಳಿಗೆ ಜನರು ಮಾಡುತ್ತಿದ್ದ ದುಂದುವೆಚ್ಚ, ಅದರಿಂದ ಉಂಟಾಗುತ್ತಿದ್ದ ಸಾಲಬಾಧೆ, ಅಲ್ಲಿದ್ದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ ಮುಂತಾದವುಗಳ ವಿರುದ್ಧವಿದ್ದ ಕುವೆಂಪು ಅವರು, ಜನರು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು ಹಂಬಲಿಸಿದ್ದರು. ಇದಕ್ಕಾಗಿ ಹುಟ್ಟುಹಾಕಿದ ಹೊಸ ಪರಿಕಲ್ಪನೆಯೆ ’ಮಂತ್ರ ಮಾಂಗಲ್ಯ’.

Ad Widget

Ad Widget

Ad Widget


ಈ ಮಂತ್ರ ಮಾಂಗಲ್ಯ ಮದುವೆ ಮತ್ತು ಪೂಜಾ ಗಾಂಧಿ ಕುರಿತಂತೆ ಖ್ಯಾತ ಗೀತ ಸಾಹಿತಿ ಕವಿರಾಜ್ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ‘ಕುವೆಂಪು ಅವರ ಆದರ್ಶವನ್ನು ಬದುಕಲ್ಲಿ ಹಾಸುಹೊಕ್ಕಾಗಿಸಿರುವ ಪೂಜಾ ಗಾಂಧಿ ನಿಜವಾದ ಕನ್ನಡತಿ’ ಎಂದು ಹೊಗಳಿದ್ದರು . ಅದಾದ ಬಳಿಕ ಪೂಜಾ ಗಾಂದಿ ಕವಿಶೈಲಕ್ಕೂ ಭೇಟಿ ನೀಡಿರುವುದು ಅವರ ಕುವೆಂಪು ಬಗೆಗಿನ ಪ್ರೀತಿಯನ್ನು ತೋರಿಸುತ್ತದೆ.

Ad Widget


ಕವಿರಾಜ್ ಪೋಸ್ಟ್ನಲ್ಲಿ ಏನಿದೆ?
“ಪೂಜಾ ಗಾಂಧಿ- ಹುಟ್ಟು ಕನ್ನಡತಿ ಅಲ್ಲದಿದ್ದರೂ ಅವರ ಅಪಾರ ಕನ್ನಡ ಪ್ರೇಮ, ಅವರು ಕನ್ನಡದ ಕುರಿತು ಕಾಳಜಿಯಿಂದ ಮಾಡುತ್ತಿರುವ ಆರ್ ಎಂಡ್ ಡಿ ಮಾದರಿಯ ಕೆಲವು ಕಾರ್ಯಗಳನ್ನು ನನ್ನೊಂದಿಗೆ ಶೇರ್ ಮಾಡಿದಾಗ ಓದಿ ಮೆಚ್ಚುಗೆಯ ಜೊತೆ ಆಶ್ಚರ್ಯವಾಗಿತ್ತು. ಆದರೆ ಅದಕ್ಕೆ ನೂರು ಪಟ್ಟು ಮಹದಾಶ್ಚರ್ಯವಾಗಿದ್ದು ಇತ್ತೀಚೆಗೆ ಕರೆ ಮಾಡಿ, ‘ತಾನು ಮಂತ್ರ ಮಾಂಗಲ್ಯ ಮಾದರಿಯಲ್ಲಿ ವಿವಾಹವಾಗುತ್ತಿದ್ದೇನೆ’ ಎಂದಾಗ. ಕನ್ನಡ ಜನತೆ ಅವರಿಗೆ ಒಂದು ಐಡೆಂಟಿಟಿ ಕೊಟ್ಟ ಋಣವನ್ನು ಈ ರೀತಿ ಪದೇ ಪದೇ ಅವರು ತೀರಿಸುತ್ತಿರುವ ಪರಿಯನ್ನು ಹೊಗಳಲು ಮಾತೇ ಇಲ್ಲಾ” ಎಂದು ಕವಿರಾಜ್ ತಿಳಿಸಿದ್ದಾರೆ.

Ad Widget

Ad Widget


ಮದುವೆಯ ಬಳಿಕ ಪೂಜಾ ಗಾಂದಿ ಪತಿಯ ಜೊತೆಗೆ ಕವಿಶೈಲಕ್ಕೂ ಭೇಟಿಕೊಟ್ಟಿದ್ದಾರೆ. ಇಲ್ಲಿಯ ಸುಂದರ ತಾಣದಲ್ಲಿ ಜೋಡಿಯಾಗಿ ನಿಂತುಕೊಂಡು ಚೆಂದದ ಪೋಸ್ ಕೂಡ ಕೊಟ್ಟಿದ್ದಾರೆ. ಆ ಕ್ಷಣದ ಫೋಟೋಗಳನ್ನ ಸ್ವತಃ ಪೂಜಾ ಗಾಂಧಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿಯೇ ಪೋಸ್ಟ್ ಕೂಡ ಮಾಡಿಕೊಂಡಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಮದುವೆಯಾದ ಕೂಡಲೇ ವಿದೇಶಕ್ಕೆ ಹಾರುವ ನಟ-ನಟಿಯರ ಮಧ್ಯೆ ಪೂಜಾ ಗಾಂಧಿ ವಿಶೇಷವಾಗಿ ಕಂಡಿದ್ದಾರೆ. ಪೂಜಾ ಗಾಂಧಿ- ವಿಜಯ್ ಘೋರ್ಪಡೆ ದಂಪತಿ ಮದುವೆ ಬಳಿಕ ಮೊದಲ ಪ್ರಯಾಣವೆಂಬಂತೆ ಪೂಜಾ ಗಾಂಧಿ ಕವಿಶೈಲ ಪ್ರವಾಸ ನಡೆಸಿದ್ದಾರೆ. ಬಳಿಕ ಅಲ್ಲಿಯೆ ಇರುವ ಕವಿ ನೆಲೆಸಿದ್ದ ಮನೆಗೂ ಭೇಟಿ ನೀಡಿ ಫೋಟೊ ತೆಗೆಸಿಕೊಂಡಿದ್ದಾರೆ


ನವ ದಂಪತಿಗೆ ಶುಭ ಹಾರೈಸಿರುವ ಅಭಿಮಾನಿಗಳು ಪೂಜಾ ಗಾಂಧಿ ಅವರ ಸರಳತೆಗೆ ಹಾಗೂ ಕನ್ನಡ ಹಾಗೂ ಕುವೆಂಪು ಅವರ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹಚ್ಚ ಹಸಿರಿನ ತಾಣ ಕವಿಶೈಲ ಎಂತವರನ್ನಾದರೂ ತನ್ನತ್ತ ಸೆಳೆಯುತ್ತದೆ. ಜೊತೆಗೆ ಕುವೆಂಪು ಮೇಲಿನ ಅಭಿಮಾನಕ್ಕೂ ಈ ಜಾಗಕ್ಕೆ ಭೇಟಿ ನೀಡುವವರಿದ್ದಾರೆ.


ಕವಿ ಶೈಲದ ಬಗ್ಗೆ
ಕವಿ ಕುವೆಂಪು ಅವರ ಮನೆ ಕವಿ ಶೈಲದ ಕೆಳಭಾಗದಲ್ಲಿದೆ. ಕಲ್ಲು ಗೋಪುರ, ಕವಿಯ ಭಾವಗಳಿಗೆ ಜೀವ ತುಂಬುವ ಮಂಟಪಗಳಂತೆ ನೋಡುಗರ ಗಮನ ಸೆಳೆಯುತ್ತದೆ. ನಡುವೆ ಹಸುರು ಹುಲ್ಲುಗಳ ಮಧ್ಯೆ, ತರುಲತೆಗಳ ಸಂಗೀತ ಜಿರುಂಡಗಳು ಆಲಿಸುತ್ತಾ ಮಲಗಿರುವ ಕುವೆಂಪು ಸಮಾಧಿ ಇದೆ.


ಇಲ್ಲಿಂದ ಪೂರ್ವ ದಿಕ್ಕಿಗೆ ನೋಡಿದರೆ ಗುಡ್ಡಗಳು ಸಾಲು ಸಾಲು ದಿಗಂತದ ತನಕವೂ ಹರಡಿರುವ ವಿಶಾಲ ನೀಲಾಕಾಶ ಕಣ್ಮನ ಸೆಳೆಯುವ ರಮಣೀಯ ದೃಶ್ಯ . ಕವಿ ಕುವೆಂಪು ಕುಳಿತು. ಕಾವ್ಯಕ್ಕೆ ಸ್ಫೂರ್ತಿ ಪಡೆದ ತಾಣವಿದು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿ ಶೈಲ.


ಅಲ್ಲಿಂದಲೇ ದೂರದ ಕುಂದಾದ್ರಿ. ಕೊಡಚಾದ್ರಿ ಬೆಟ್ಟಗಳನ್ನು ಕಾಣಬಹುದು ಕವಿ ಶೈಲಯ ದಿಂದ ಬೆಟ್ಟವಿಳಿವ ದಾರಿಯಲ್ಲು. ನಡೆದು ಬಂದರೆ. ಕವಿಮನೆ ವನದೇವತೆಯ ಮಡಿಲಲ್ಲಿ ಶಾಂತ ವಾತಾವರಣದಿಂದ ಸದಾ ತಂಪಾಗಿ ಹುಲ್ಲು ಹಾಸಿಗೆಯ ಮೇಲಿರುವ ದಕ್ಷಿಣ ಭಾರತದ ಶಾಂತಿನಿಕೇತನವಿದೆ.

Continue Reading

Trending

error: Content is protected !!