Connect with us

ನಿಧನ ವಾರ್ತೆ

Heart Attack | ಶಿವಮೊಗ್ಗ: ಶಾಲೆಗೆ ಹೊರಡುತಿದ್ದ 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ನಿಧನ

Ad Widget

Ad Widget

Ad Widget

Ad Widget Ad Widget

ಶಿವಮೊಗ್ಗ: ಹೃದಯಾಘಾತದಿಂದ (Heart Attack) ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ವರದಿಯಾಗಿದೆ. 

Ad Widget

Ad Widget

Ad Widget

Ad Widget

Ad Widget

ಕಳೆದೆರಡು ದಿನಗಳಿಂದ ಮಡಿಕೇರಿ, ಮಂಗಳೂರಿನಲ್ಲಿ ಶಾಲೆಗೆ ಹೊರಟಿದ್ದ ಸಣ್ಣ ಪ್ರಾಯದ ವಿದ್ಯಾರ್ಥಿಗಳೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಶಿವಮೊಗ್ಗದಲ್ಲೂ ಘಟನೆ ನಡೆದಿದೆ.

Ad Widget

Ad Widget

10ನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ ಮೃತ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

Ad Widget

Ad Widget

ಬುಧವಾರ ಜಯಂತ್ ಎಂದಿನಂತೆ ಶಾಲೆಗೆ ಹೊರಡುತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಜಯಂತ್ ನನ್ನು ಸಮೀಪದ ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಜಯಂತ ಹೃದಯಾಘಾತದಿಂದ ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. 

Ad Widget

Ad Widget

ಸಣ್ಣ ಪ್ರಾಯದವರ ಹೃದಯಾಘಾತ ಪ್ರಕರಣ ತನಿಖೆಗೆ ಒತ್ತಾಯಿಸಿದ್ದ ಶಕುಂತಲ ಶೆಟ್ಟಿ

Click to comment

Leave a Reply

ನಿಧನ ವಾರ್ತೆ

Bhagavata Subramanya Dhareshwara-ಹಾಡು ನಿಲ್ಲಿಸಿದ ಬಡಗುತಿಟ್ಟಿನ ಗಾನ ಕೋಗಿಲೆ – ಯಕ್ಷಗಾನದ ಹಿರಿಯ ಭಾಗವತ ಸುಬ್ರಮಣ್ಯ ಧಾರೇಶ್ವರ ಇನ್ನಿಲ್ಲ

Ad Widget

Ad Widget

Ad Widget

Ad Widget Ad Widget

ಕುಂದಾಪುರ: ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಳಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಇವರು ಬಡಗುತಿಟ್ಟಿನ ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕಾಳಿಂಗ ನಾವಡರ ಅಗಲುವಿಕೆಯ ಬಳಿಕ ಉಂಟಾಗಬಹುದಿದ್ದ ನಿರ್ವಾತವನ್ನು ತುಂಬಲು ಯತ್ನಿಸಿದ್ದರು.

Ad Widget

Ad Widget

Ad Widget

Ad Widget

Ad Widget

ಸುಬ್ರಹ್ಮಣ್ಯ ಧಾರೇಶ್ವರರವರು ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು. ಯಕ್ಷರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು.

Ad Widget

Ad Widget

ದಿ. ಉಪ್ಪೂರು ನಾರಣಪ್ಪ ಭಾಗವತರ ಶಿಷ್ಯರಾಗಿ ದಿ. ಕಾಳಿಂಗ ನಾವಡ ಅವರ ಅಬ್ಬರದ ಕಾಲದಲ್ಲೂ ಸರಿಸಾಟಿಯಾಗಿ ಬೆಳೆದ ಧಾರೇಶ್ವರರ ತಾಳಕ್ಕೆ ಕುಣಿಯದ ಕಲಾವಿದರಿಲ್ಲ. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೃಷ್ಣ ಯಾಜಿ ಬಳ್ಕೂರ, ಕೊಂಡದಕುಳಿ ರಾಮಚಂದ್ರ ಹೆಗಡೆ ಹೀಗೆ ಬಹುತೇಕ ಎಲ್ಲ ಕಲಾವಿದರಿಗೂ ಭಾಗವತಿಕೆ ಮಾಡಿದ್ದಾರೆ

Ad Widget

Ad Widget

1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳದ ರಂಗಂಮಚವೇರಿದವರು ಯಶಸ್ಸಿನ ಶಿಖರ ತಲುಪಿದ್ದರು.

Ad Widget

Ad Widget

ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಮೂಲಕ ರಂಗಸ್ಥಳದ ಮೇಲೇರಿದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿದ್ದರು.

ಮೇಳ ಬಿಟ್ಟು 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಬದುಕಿನುದ್ದಕ್ಕೂ ತಮ್ಮ ಸ್ವರದ ಮೂಲಕವೇ ಅಭಿಮಾನಿಗಳನ್ನು ಸೆಳೆದಿಟ್ಟುಕೊಂಡಿದ್ದ ಭಾಗವತರ ಅಗಲುವಿಕೆ ನಿಜಕ್ಕೂ ಮಾತಾಡದ ಸ್ಥಿತಿ ತಂದಿದೆ.

ಯಕ್ಷಗಾನದಲ್ಲಿ ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಸುಬ್ರಮಣ್ಯ ಧಾರೇಶ್ವರ ಎನ್ನುವ ಹೆಸರು ಜನಪ್ರಿಯತೆಯಲ್ಲಿರುವಾಗಲೇ ಏಕಾಏಕಿ ಮೇಳ ತಿರುಗಾಟ ನಿಲ್ಲಿಸಿದ್ದರು. 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಸುಬ್ರಮಣ್ಯ ಧಾರೇಶ್ವರ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಭಾಗವತರಾಗಿ ಯಕ್ಷ ಸೇವೆ ಸಲ್ಲಿಸಿದ್ದರು.

Continue Reading

ನಿಧನ ವಾರ್ತೆ

Run over-ತಂದೆಯಿಂದಲೇ ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಪುಟ್ಟ ಕಂದಮ್ಮ ದುರ್ಮರಣ

Ad Widget

Ad Widget

Ad Widget

Ad Widget Ad Widget

ಬೆಂಗಳೂರು: ಆಕಸ್ಮಿಕವಾಗಿ ತಂದೆಯಿಂದಲೇ ಕಾರು ಹರಿದು ಮಗು ಸಾವನ್ನಪ್ಪಿರೋ ಘಟನೆ ಹೆಚ್‌ಎಸ್‌ಆರ್ ಲೇಔಟ್‌ನ ಆಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

Ad Widget

Ad Widget

ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಕಂದಮ್ಮ. ಏ. 21ರ ರಾತ್ರಿ 11:30ಕ್ಕೆ ಘಟನೆ ನಡೆದಿದೆ. ಸಂಬಂಧಿಗಳ ಮದುವೆಗೆ ಎಂದು ಚನ್ನಪಟ್ಟಣಕ್ಕೆ ಹೋಗಿದ್ದ ಕುಟುಂಬ ವಾಪಸ್ ಆಗಿತ್ತು. ಕಾರಿನಿಂದ ಇಳಿದು ಎಲ್ಲರೂ ಮನೆ ಒಳಗೆ ಹೋಗಿದ್ದರು. ಮಗುವಿನ ತಂದೆ ಕಾರಿನಿಂದ ಲಗೇಜ್ ತೆಗೆದು ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ಮಗು ತಂದೆಯ ಹತ್ತಿರ ಓಡಿ ಬಂದಿದೆ.

Ad Widget

Ad Widget

ಕಾರಿನಲ್ಲಿದ್ದ ಲಗೇಜ್ ಮನೆಯೊಳಗೆ ಇಡುತ್ತಿದ್ದಾಗ ಮಗು ಕಾರಿನ ಡೋರ್ ಬಳಿಯೇ ನಿಂತಿತ್ತು. ಆದರೆ ಇದನ್ನು ತಂದೆ ಗಮನಿಸಿರಲಿಲ್ಲ. ಲಗೇಜ್ ತೆಗೆದು ಕಾರು ಚಾಲನೆ ಮಾಡಿದ ಸಂದರ್ಭ ಆಕಸ್ಮಿಕವಾಗಿ ಕಾರು ಮಗು ಮೇಲೆ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Ad Widget

Ad Widget
Continue Reading

ನಿಧನ ವಾರ್ತೆ

Suicide-ಉಪ್ಪಿನಂಗಡಿ : ಸೈಕಲ್ ರಿಪೇರಿ ಮಾಡಿಕೊಟ್ಟಿಲ್ಲವೆಂದು ನೇಣಿಗೆ ಶರಣಾದ 13ರ ಬಾಲಕ

Ad Widget

Ad Widget

Ad Widget

Ad Widget Ad Widget

ಉಪ್ಪಿನಂಗಡಿ : ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಮನೆ ನಿವಾಸಿ ನಂದನ್ (13) ಎಂಬಾತ ಮನೆಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಸಂಜೆ ನಡೆದಿದೆ. ಈತ ಮುಂದಿನ ಅವಧಿಯಲ್ಲಿ ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ.

Ad Widget

Ad Widget

Ad Widget

Ad Widget

Ad Widget

ಪಂಜದ ದಿ. ರೋಹಿತ್ ಗೌಡ ಎಂಬವರ ಮಗನಾದ ನಂದನ್ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ತನ್ನ ಮಾವನ ಮನೆಯಲ್ಲಿದ್ದು, ಉಪ್ಪಿನಂಗಡಿಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ. ನಂದನ್ ಏಳನೇ ತರಗತಿ ಉತ್ತೀರ್ಣನಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದರು.

Ad Widget

Ad Widget

ನಂದನ್ ಶುಕ್ರವಾರದಂದು ತನ್ನ ನಾಲ್ವರು ಗೆಳೆಯರೊಂದಿಗೆ ಆಟವಾಡುತ್ತಿದ್ದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದರು. ಮನೆಯ ಇನ್ವರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ತಿಳಿಸಿದ್ದರೆನ್ನಲಾಗಿದೆ. ಇದರಿಂದ ಮನನೊಂದ ಆತ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡು ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading