ಸುಬ್ರಹ್ಮಣ್ಯ: ಅಕ್ಟೋಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಮೂಕಮಲೆ ಅವರು ಜ. 5ರಂದು ಸುಬ್ರಹ್ಮಣ್ಯ (Subrahmanya) ಠಾಣೆಗೆ ಪ್ರಿಯಕರನೊಂದಿಗೆ ಹಾಜರಾಗಿ ಆತನೊಂದಿಗೇ ತೆರಳಿದ್ದಾರೆ.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯೆ ಭಾರತಿ ಮೂಕಮಲೆ ತನ್ನ ಪ್ರಿಯಕರ ನಂದನ್ ಮತ್ತು ಅವರ ನ್ಯಾಯವಾದಿ ಮುಖಾಂತರ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ನಂದನ್‌ನೊಂದಿಗೆ ಜೀವನ ಮುಂದುವರೆಸುವ ನಿರ್ಧಾರ ಪ್ರಕಟಿಸಿದ್ದಾರೆ. ಠಾಣೆಯಲ್ಲಿ ತನ್ನ ನಿರ್ಧಾರವನ್ನು ಲಿಖೀತ ರೂಪದಲ್ಲಿ ಬರೆದು ಕೊಟ್ಟು ನಂದನ್‌ನೊಂದಿಗೆ ತೆರಳಿದ್ದಾರೆ.
ತನ್ನಿಬ್ಬರು ಸಣ್ಣ ಹೆಣ್ಣು ಮಕ್ಕಳನ್ನು, ಪತಿಯನ್ನು ತೊರೆದು ಅ.29ರಂದು ಕಾಣೆಯಾಗಿದ್ದ ಭಾರತಿ ಮತ್ತವರ ಪ್ರಿಯಕರ ನಂದನ್ ಎಷ್ಟೇ ಹುಡುಕಾಡಿದರೂ ಸಿಕ್ಕಿರಲಿಲ್ಲ. ತಿಂಗಳ ಹಿಂದೆ ವೀಡಿಯೋ ಮಾಡಿ ಹರಿಯಬಿಟ್ಟಿದ್ದ ಭಾರತಿ, ತಾನು ಪ್ರಿಯಕರನೊಂದಿಗೆ ಇರುವುದಾಗಿ ತಿಳಿಸಿದ್ದು, ತನ್ನನ್ನು ಹುಡುಕುವ ಕಾರ್ಯ ಮಾಡಬೇಡಿ ಎಂದು ಕೇಳಿ ಕೊಂಡಿದ್ದರು.
ಇದಾಗ್ಯೂ ಸುಬ್ರಹ್ಮಣ್ಯ ಪೊಲೀಸರು ಅವರ ಇರುವಿಕೆಯನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಿದ್ದರು. ಆದರೆ ಆ ಕಾರ್ಯ ಫಲಪ್ರದವಾಗಿರಲಿಲ್ಲ.