ಪುತ್ತೂರಿನ ಬಲ್ನಾಡು ನಿವಾಸಿ ಪುಷ್ಪರೇಖಾ ರಸಾಯನ ಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪ್ರಭಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ. ಇವರು ಬಲ್ನಾಡು ನಿವಾಸಿ ಕೊರಗಪ್ಪ ಕುಲಾಲ್ ಮತ್ತು ಇಂದಿರಾ ದಂಪತಿಯ ಪುತ್ರಿ. ಪ್ರಸ್ತುತ ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ ಪತಿ ಹೇಮಂತ್ ಕುಮಾರ್ ಕೊಲ್ಯ ಅವರೊಂದಿಗೆ ವಾಸವಾಗಿದ್ದಾರೆ.
ರಸಾಯನ ಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ ʼಸ್ಟಡೀಸ್ ಆನ್ ಫ್ಯಾಬ್ರಿಕೇಶನ್, ಕ್ಯಾರೆಕ್ಟರೈಸೇಷನ್ ಆಂಡ್ ಓಪ್ಟಿಕಲ್ ಪ್ರಾಪರ್ಟಿಸ್ ಆಫ್ ಡೊಪ್‍ಡ್ ಕೈಟೋಸ್ಯಾನ್ ಆಂಡ್ ಪುಲ್ಲುಲ್ಯಾನ್ ಕೊಂಪೊಸಿಟ್ ಫಿಲ್ಮ್‍ಸ್’ ಎಂಬ ಮಹಾ ಪ್ರಬಂಧವನ್ನು ಅವರು ಮಂಡಿಸಿದ್ದು, ಇದನ್ನು ಪುರಸ್ಕರಿಸಿದ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.
ಪುಷ್ಪರೇಖಾ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಪ್ರೊ. ಬಿ.ಕೆ. ಸರೋಜಿನಿ ಅವರ ಮಾರ್ಗದರ್ಶನದಲ್ಲಿ ಸಂಶೋಧಾನ ಮಹಾಪ್ರಭಂದ ಮಂಡಿಸಿದ್ದರು.