ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ, ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ

WhatsApp Image 2023-01-10 at 16.57.24
Ad Widget

Ad Widget

Ad Widget

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ  ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್ (86) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಡಿ 10 ರಂದು ಕೊನೆಯುಸಿರೆಳೆದಿದ್ದಾರೆ. 10ಕ್ಕೂ ಹೆಚ್ಚು ಕಾದಬರಿಗಳನ್ನು ಬರೆದಿರುವ ಅವರ ಹಲವು ಕಥಾ ಸಂಕಲನಗಳು ಪ್ರಕಟಗೊಂಡು ಓದುಗರ ಹಾಗೂ ವಿಮರ್ಶಕರ ಮೆಚ್ಚುಗೆ ಸಂಪಾದಿಸಿದ. ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟ ಸ್ಥಾನ ಸಂಪಾದಿಸಿದ ಬರಹಗಾರ್ತಿ  

Ad Widget

86 ವರ್ಷದವರಾದ ಅಬೂಬಕ್ಕರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೇರಳದ ಕಾಸರಗೋಡು ಜಿಲ್ಲೆಯವರಾದ ಸಾರಾ ಅಬೂಬಕ್ಕರ್ ಅವರು ಬಾಲ್ಯದಿಂದಲೇ ಬರವಣಿಗೆ ಮೇಲೆ ಆಸಕ್ತಿ ಹೊಂದಿದ್ದರು.

Ad Widget

Ad Widget

Ad Widget

ಹೆಣ್ಣುಮಕ್ಕಳ ಸಂಕಟಗಳಿಗೆ ಕನ್ನಡಿ ಹಿಡಿಯುತ್ತಿದ್ದ ಸಾರಾ ಅವರ ಮೊದಲ ಕಾದಂಬರಿ ಚಂದ್ರಗಿರಿ ತೀರದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ವಾಸ್ತವಿಕ ಬದುಕಿನ ಚಿತ್ರಣವನ್ನು ಸಾಕಷ್ಟು ಮಂದಿ ಮೆಚ್ಚಿದ್ದು, ಕಾದಂಬರಿಗೆ ಜನಮನ್ನಣೆ ಸಿಕ್ಕಿತು. ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ವಿಚಾರದಲ್ಲಿ ಸೌದಿಯ ವಹಾಬಿಸಂ ವಿರುದ್ಧ ಸಾರಾ ದನಿಯೆತ್ತಿದ್ದರು.

Ad Widget

ಚಪ್ಪಲಿಗಳು, ಸಹನಾ, ವಜ್ರಗಳು, ಮಗಳು ಹುಟ್ಟಿದಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಕದನವಿರಾ, ಪ್ರಚಾಹ- ಸುಳಿ, ತಳ ಒಡೆದ ದೋಣಿ ಹೀಗೆ ಸಾಕಷ್ಟು ಕೃತಿಗಳಿಂದ ಅಸಂಖ್ಯಾತ ಓದುಗರ ಮನಸ್ಸನ್ನು ಅಬೂಬಕ್ಕರ್ ಮುಟ್ಟಿದ್ದರು.

Ad Widget

Ad Widget

ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮ್ಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಇನ್ನೂ ಸಾಕಷ್ಟು ಗೌವರಗಳು ದೊರಕಿವೆ.  ಮಂಗಳೂರಿನ ಹಿಲ್ ಬಳಿ ಸಾರಾ ಅವರು ನೆಲೆಸಿದ್ದು, ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ನಡೆಸಲಾಗಿದೆ.

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: