ಕೇಂದ್ರ ಗೃಹ ಸಚಿವರ ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪದಕ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಸಮ್ಮುಖದಲ್ಲಿ ನಡೆಯಿತು. ಕಾಂತಾರ ಸಿನಿಮಾ ಸ್ಟಾರ್ ಸಪ್ತಮಿ ಗೌಡ (Sapthami Gowda) ತಂದೆ, ಗೃಹ ಸಚಿವರ ಪದಕ ವಿಜೇತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಜೊತೆ ಫೋಟೋ ಹಂಚಿಕೊಂಡಿದ್ದಾರೆ.
ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ಮಿಂಚಿರುವ ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸಪ್ತಮಿಗೆ ಪ್ಯಾನ್ ಇಂಡಿಯಾ ಮಟ್ಟದ ಖ್ಯಾತಿ ತಂದುಕೊಟ್ಟಿದೆ.
ಕಾಂತಾರ ಸಕ್ಸಸ್ ಬಳಿಕ ಸಪ್ತಮಿ ಗೌಡ ಪ್ರಮೋಷನ್, ಸಂದರ್ಶನ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಇದೀಗ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಮುಂದಿನ ಸಿನಿಮಾಗಳ ಶೂಟಿಂಗ್ ತಯಾರಿ ನಡುವೆಯೂ ಸಪ್ತಮಿ ಹೆಚ್ಚಾಗಿ ಫ್ಯಾಮಿಲಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.
ಸಪ್ತಮಿ ಪೊಲೀಸ್ ಅಧಿಕಾರಿಯ ಮಗಳು. ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲದೆ ಇರಬಹುದು. ಖ್ಯಾತ ಪೊಲೀಸ್ ಆಫೀಸರ್ ಎಸ್‌ಕೆ ಉಮೇಶ್ ಅವರ ಮುದ್ದಾದ ಮಗಳು. ತಾಯಿ ಸಾಂತ ಮಾದಯ್ಯ. ಇಬ್ಬರೂ ಹೆಣ್ಣು ಮಕ್ಕಳಲ್ಲಿ ಸಪ್ತಮಿ ಮೊದಲ ಮಗಳು. ಇತ್ತೀಚಿಗಷ್ಟೆ ಕೋರಮಂಗಲದಲ್ಲಿ ನಡೆದ ಪದಕ ವಿಜೇತ ಕಾರ್ಯಕ್ರಮದಲ್ಲಿ ಸಪ್ತಮಿ ಅಪ್ಪನ ಜೊತೆ ಕಾಣಿಸಿಕೊಂಡಿದ್ದರು. ತಂದೆ ಮಗಳ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿವೆ.
ಎಸ್ ಕೆ ಉಮೇಶ್ ಅವರು 1990ರಿಂದ 2020ರವರೆಗೆ ಬೆಂಗಳೂರಿನಲ್ಲಿ ಕೆಲಸ ಮಾಡಿ ವ್ಯಾಪಕ ಮೆಚ್ಚುಗೆ ಗಳಿಸಿದ್ದರು. ತಮ್ಮ ಸೇವೆಗಾಗಿ 2015ರಲ್ಲಿ ರಾಷ್ಟ್ರಪತಿ ಪದಕ, 2020ನೇ ಸಾಲಿನ ಕೇಂದ್ರ ಸರ್ಕಾರದ ಸ್ಪೆಷಲ್ ಆಪರೇಷನ್ ಮೆಡಲ್ ಹಾಗೂ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ತಂದೆ ಪದಕ ಪ್ರಧಾನ ಸಮಾರಂಭಕ್ಕೆ ಮಗಳಾಗಿ ಬಂದ ಸಪ್ತಮಿ ಗೌಡ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ, ಪೊಲೀಸ್ ಕುಟುಂಬಸ್ಥರು ಹಾಗೂ ಅಧಿಕಾರಿಗಳು ಸಿಬ್ಬಂದಿಗಳು ಪೋಟೋ ತೆಗೆಸಿಕೊಂಡರು.