ಬೆಂಗಳೂರು, ಜ. 8: ಸಾವಿರಾರು ಯುವಕರ ಉದ್ಯೋಗದ ಕನಸಿಗೆ ಕೊಳ್ಳಿ ಇಟ್ಟ ಪಿಎಸ್‌ಐ ಹಗರಣದ ರೂವಾರಿ ದಿವ್ಯಾ ಹಾಗರಗಿಗೆ (Divya Hagaragi) ಜಾಮೀನು ದೊರೆತ ಕೂಡಲೇ ವಿಜಯೋತ್ಸವ ಮೂಲಕ ಸ್ವಾಗತಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
‘ಭ್ರಷ್ಟ ಬಿಜೆಪಿ ಸರಕಾರದ ಆಡಳಿತದ ವಿಪರ್ಯಾಸ ಇದು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ 56ಸಾವಿರ ಪಿಎಸ್ಸೈ ಅಭ್ಯರ್ಥಿಗಳು ಭವಿಷ್ಯದ ದಿಕ್ಕು ಕಾಣದೆ ನೋವು ಅನುಭವಿಸುತ್ತಿದ್ದಾರೆ. ಅಕ್ರಮ ನಡೆಸಿದ ಆರೋಪಿಗಳು ಸರಕಾರದ ಸಹಕಾರದಿಂದ ಜಾಮೀನು ಪಡೆದು, ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಈ ಮೂಲಕ 56 ಸಾವಿರ ಯುವಕರನ್ನು ಅಣಕಿಸುತ್ತಿದೆ ಸರಕಾರ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸರಕಾರದ ಸಹಕಾರ, ಗೃಹ ಸಚಿವರ ಮುತುವರ್ಜಿಯಿಂದ ಜಾಮೀನು ಪಡೆದು ಹೊರಬಂದ ಪಿಎಸ್ಸೈ ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯ ಹಾಗರಗಿಯನ್ನು ಪಟಾಕಿ ಹಚ್ಚಿ ಸಂಭ್ರಮಿಸಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು. ಯಾಕೆ ಈ ಸಂಭ್ರಮ?, 56 ಸಾವಿರ ಯುವಕರ ಬದುಕು ಮುಳುಗಿಸಿದ್ದಕ್ಕಾ?, ಸರಕಾರದ ಕಿಂಗ್‍ಪಿನ್‍ಗಳನ್ನು ಬಚಾವು ಮಾಡಿದ್ದಕ್ಕಾ?’ ಎಂದು ಪ್ರಶ್ನಿಸಿದೆ.
ಸರ್ಕಾರದ ಸಹಕಾರ, ಗೃಹಸಚಿವರ ಮುತುವರ್ಜಿಯಿಂದ ಜಾಮೀನು ಪಡೆದು ಹೊರಬಂದ PSI ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯ ಹಾಗಾರಗಿಯನ್ನು ಪಟಾಕಿ ಹಚ್ಚಿ ಸಂಭ್ರಮಿಸಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು.
— Karnataka Congress (@INCKarnataka) January 8, 2023
ಯಾಕೆ ಈ ಸಂಭ್ರಮ @BJP4Karnataka?
56 ಸಾವಿರ ಯುವಕರ ಬದುಕು ಮುಳುಗಿಸಿದ್ದಕ್ಕಾ?
ಸರ್ಕಾರದ ಕಿಂಗ್‍ಪಿನ್‍ಗಳನ್ನು ಬಚಾವು ಮಾಡಿದ್ದಕ್ಕಾ? pic.twitter.com/R6NhEvVzxS
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ 9 ತಿಂಗಳಿನಿಂದ ಜೈಲಿನಲ್ಲಿದ್ದ ದಿವ್ಯಾ ಹಾಗರಿಗಿ ಯನ್ನು ಜನವರಿ 5 ರಂದು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಅಂದು ದಿವ್ಯಾ ಹಾಗರಗಿ ಸೇರಿ 217 ಜನರನ್ನು ನ್ಯಾಯಾಲಯ ಷರತ್ತುಬದ್ದ ಜಾಮೀನಿನಮೇಲೆ ಬಿಡುಗಡೆ ಮಾಡಿದೆ.
चौंकिए मत, ये नये साल का नहीं, PSI CET स्कैम की सरगना और @BJPKarnataka नेता #DivyaHagaragi को कोर्ट से बेल मिलने के बाद का जश्न है।
— Netta D'Souza (@dnetta) January 8, 2023
यही है बीजेपी का चाल चरित्र और चेहरा, जिसमें अपराधियों को शह देकर उनका महिमामंडन किया जाता है। #BJPkaReportCard #BJPKePaap #Modi #AmitShah pic.twitter.com/Ay7I2GFueK
ದಿವ್ಯ ಹಾಗರಗಿ (ಪಿಎಸ್‌ಐ ಸ್ಕ್ಯಾಮ್ ಕಿಂಗ್ ಪಿನ್) ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿ ಆಚೆ ಬಂದಿದ್ದಾರೆ ಪಾಪ ಹಾರ ಹಾಕಿ ಪಟಾಕಿ ಸಿಡಿಸಿ ಸ್ವಾಗತ ಕೋರಲಾಯ್ತು.
— Meera Raghavendra (@MeeraRaghavendr) January 7, 2023
ಜೈಲಿಂದ ಬೇಲ್ ಮೇಲೆ ಆಚೆ ಬಂದ ಆರೋಪಿಗಳಿಗೆ ಅದ್ಧೂರಿ ಸ್ವಾಗತ ಕೋರೋದು ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವ ವಿಚಾರ. #ಲಜ್ಜೆಗೆಟ್ಟವರು pic.twitter.com/Bb5MjMcRad