Ad Widget

ಉಡುಪಿ : ದೈವದ ಕಾರ್ಣಿಕ – ಕೋರ್ಟ್ ಹೋಗಿ ನೇಮಕ್ಕೆ ತಡೆ ತಂದ ವ್ಯಕ್ತಿ ಕುಸಿದು ಬಿದ್ದು ಸಾವು …!

WhatsApp Image 2023-01-07 at 10.25.17
Ad Widget

Ad Widget

Ad Widget

ಕರಾವಳಿ ಜಿಲ್ಲೆಗಳು ದೈವರಾಧನೆಗೆ ಹೆಸರುವಾಸಿ. ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಬ್ಲಾಕ್‌ ಬ್ಲಾಸ್ಟರ್‌ ಮೂವಿ ಕಾಂತಾರವು ((Kantara) ದೈವರಾಧನೆಯ ( Daivaradhane) ಕಥೆಯನ್ನು ಹೊಂದಿತ್ತು. ಸಿನಿಮಾದ ಯಶಸ್ಸಿಗೆ ಇದೆ ದೊಡ್ಡ ಕಾರಣ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಬಳಿಕ ದೇಶದ್ಯಾಂತದ ಜನರು ದೈವಗಳ ಆಸಕ್ತಿ ಹೊಂದಿರುವುದು ಗಮನಿಸಬಹುದಾಗಿದೆ.

Ad Widget

Ad Widget

Ad Widget

Ad Widget

Ad Widget

ಆದರೇ ಪ್ರಕೃತಿ ಮತ್ತು ಮನುಷ್ಯನ ಸಂಬಂಧದ ಸುತ್ತ ನಡೆಯುವ ಸಿನಿಮಾ ಮೂರು ದಶಕಗಳ ಹಿಂದೆ ಉಡುಪಿಯ ಗ್ರಾಮವೊಂದರಲ್ಲಿ ನಡೆದ ಘಟನೆ ಎಂಬಂತೆ ಬಿಂಬಿತವಾಗಿದ್ದರೂ ಅದೊಂದು ಕಾಲ್ಪನಿಕ ಕಥೆಯಾಗಿತ್ತು. ಹಾಗಾಗಿ ಅದರಲ್ಲಿ ನಡೆಯುವ ಕೆಲವು ಮಾನವತೀತ ಘಟನೆಗಳನ್ನು ದೈವ ಭಕ್ತರು ಕಾರಣೀಕ ಎಂದು ಭಾವಿಸಿದರೇ , ಉಳಿದವರು ಅದೊಂದು ಕಥೆಗಾರನ ಕಲ್ಪನೆ ಎಂದು ತಿಳಿದು ಕೊಂಡಿದ್ದರು . ಆದರೇ ಆ ಸಿನಿಮಾದಲ್ಲಿ ತೋರಿಸಿದ ಎರಡು ಘಟನೆಗಳು ಇದೀಗ ನಿಜ ಜೀವನದಲ್ಲೂ ನಡೆದು ದೈವದ ಕಾರಣೀಕತೆ ಬಗ್ಗೆ ಸಾಮಾನ್ಯ ಜನರಿಗೆ ದೈವಗಳ ಬಗ್ಗೆ ಇನ್ನಷ್ಟು ಭಯ ಭಕ್ತಿ ಉಂಟಾಗುವಂತೆ ಮಾಡಿದೆ.

Ad Widget

Ad Widget

Ad Widget

Ad Widget

Ad Widget

ಉಡುಪಿಯಲ್ಲಿ (Udupi) ಜಾಗದ ವಿಚಾರವಾಗಿ ಕೋರ್ಟಿಗೆ (Court) ಹೋದರೆ ನೋಡಿಕೊಳ್ಳುತ್ತೇನೆ ಎಂದು ದೈವ ಹೇಳುವ ಒಂದು ದೃಶ್ಯ ಕಾಂತಾರ ಸಿನಿಮಾದಲ್ಲಿದೆ. ದೈವ ನರ್ತಕನಿಗೆ ಭೂಮಾಲಿಕ ಬೆದರಿಕೆ ಆಮಿಷ ಒಡ್ಡಿದ ಕಥೆಯೂ ಕಾಂತಾರ ಸಿನಿಮಾದಲ್ಲಿತ್ತು. ಈ ಎರಡು ಘಟನೆಗಳನ್ನು ಹೋಲುವ ಪ್ರಕರಣ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆಯೆಂದು ಕನ್ನಡದ ಪ್ರತಿಷ್ಟಿತ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಕಾಪು ತಾಲೂಕು ಪಡುಹಿತ್ಲು ಜಾರಂದಾಯ ದೇವಸ್ಥಾನದಲ್ಲಿ (Temple) ನಡೆದ ಘಟನೆಗಳ ಹೋಲಿಕೆ ಸಿನಿಮಾದಲ್ಲಿದಂತೆ ಕಂಡು ಬಂದ ಹಿನ್ನಲೆಯಲ್ಲಿ ಈ ಘಟನೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಈ ಬಗೆಗಿನ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜಾರಂದಾಯ ದೈವಸ್ಥಾನ

Ad Widget

Ad Widget

Ad Widget

Ad Widget

ಪಡುಬಿದ್ರಿಯ ಜಾರಂದಾಯ ದೈವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದೆ. ಇಲ್ಲಿ ಅಡಳಿತದ ವಿಚಾರವಾಗಿ ಎರಡು ಸಮಿತಿಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಘರ್ಷಣೆ ನಡೆದ ಹಿನ್ನೆಲೆ ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಇದೀಗ ಮೃತಪಟ್ಟಿ ದ್ದಾರೆ. ಎರಡು ಸಮಿತಿಗಳ ನಡುವಿನ ಘರ್ಷಣೆ ವಿಚಾರವಾಗಿ ಕೋರ್ಟಿನಿಂದ ತಡೆ ಆಜ್ಞೆ ತಂದ ಮರುದಿನವೇ, ಈ ವಿಚಾರ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲು ಪಾತ್ರವಹಿಸಿದ್ದಾರೆ ಎನ್ನಲಾದ ಜಯ ಪೂಜಾರಿ ಎಂಬವರು ನಿಧನರಾಗಿದ್ದಾರೆ. ಈ ವಿಚಾರ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಪಡುಹಿತ್ಲು ಜಾರಂದಾಯ ದೇವಸ್ಥಾನವನ್ನು ಬಂಟ ಸೇವಾ ಸಮಿತಿ ನೋಡಿಕೊಳ್ಳುತ್ತಿತ್ತು. ಸೇವಾ ಸಮಿತಿ ಸದಸ್ಯರು ಬದಲಾದ ನಂತರ ಇಲ್ಲಿ ಘರ್ಷಣೆ ಆರಂಭವಾಗಿದೆ. ದೇವಸ್ಥಾನದ ವಿಚಾರವಾಗಿ ಅಧಿಕಾರ ಕಳೆದುಕೊಂಡ ನಂತರ ಪ್ರಕಾಶ ಶೆಟ್ಟಿ ಎಂಬವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಧಿಕಾರ ಕಳೆದುಕೊಂಡ ಪ್ರಕಾಶ್ ಶೆಟ್ಟಿ ಅವರು ನಂತರ ಪ್ರತ್ಯೇಕ ಟ್ರಸ್ಟ್ ರಚಿಸಿದ್ದಾರೆ. ದೈವಸ್ಥಾನದ ಗುರಿಕಾರರಾದ ಜಯ ಪೂಜಾರಿ ಅವರನ್ನು ಟ್ರಸ್ಟ್ ಅಧ್ಯಕ್ಷರಾಗಿ ನೇಮಸಿತ್ತು. ಈ ಮೂಲಕ ದೈವಸ್ಥಾನದ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದ್ದಾಗಿ ಪ್ರತಿವಾದಿಗಳು ಆರೋಪಿಸಿದ್ದಾರೆ.

ಕುಸಿದು ಬಿದ್ದು ಸಾವು

ಘರ್ಷಣೆ ಹಿನ್ನೆಲೆಯಲ್ಲಿ ಪ್ರಕಾಶ ಶೆಟ್ಟಿ ಮತ್ತು ಅಧ್ಯಕ್ಷ ಜಯ ಪೂಜಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಜಯ ಪೂಜಾರಿ ಡಿಸೆಂಬರ್ 24ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ನ್ಯಾಯಾಲಯ ಮೆಟ್ಟಿಲೇರಿದರೆ ನೋಡಿಕೊಳ್ಳುತ್ತೇನೆ ಎಂಬ ಕಾಂತಾರ ದೈವದ ಹೇಳಿಕೆ ನೆನಪಿಸಿಕೊಂಡ ಜನರು ನಿಜ ಘಟನೆಯನ್ನು ಸಿನಿಮಾಗೆ ಹೋಲಿಸಿ ಮಾತನಾಡಿದ್ದಾರೆ. ಇದೀಗ ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವು ಮಾಡಲಾಗಿದೆ. ಘರ್ಷಣೆ ಹಿನ್ನೆಲೆಯಲ್ಲಿ ದೈವ ನರ್ತಕರಿಗೂ ಪ್ರಕಾಶ್ ಶೆಟ್ಟಿ ಮತ್ತು ಟೀಂ ಕಿರುಕುಳ ನೀಡಿದ್ದಾಗಿ ಟ್ರಸ್ಟ್ ಸದಸ್ಯರ ವಿರುದ್ಧ ಪ್ರತಿವಾದಿಗಳ ಆರೋಪಿಸಿದ್ದಾರೆ. ತಮ್ಮ ಪರವಾಗಿ ದೈವ ನುಡಿ ನೀಡಬೇಕೆಂದು ಒತ್ತಡ ಹೇರಿದ್ದಾಗಿ ಆರೋಪ ಮಾಡಿದ್ದಾರೆ.

ಆದರೆ ಹಳೆ ಸಮಿತಿಯ ಜೊತೆಗೆ ನಿಂತ ದೈವ ನರ್ತಕ ಭಾಸ್ಕರ ಬಂಗೇರ ಇದನ್ನು ನಿರಾಕರಿಸಿದ್ದಾರೆ. ಕಾಂತರಾ ಸಿನಿಮಾದಲ್ಲೂ ದೈವ ನರ್ತಕ ಗುರುವನಿಗೆ ಬೆದರಿಕೆಯೊಡ್ಡಿ ಕೊಲ್ಲಲಾಗಿತ್ತು. ಆದರೆ ಈ ಜನ ಈ ಕಾಕತಾಳಿಯ ಘಟನೆಗೆ ಕಾಂತಾರ ಸಿನಿಮಾ ಕಥೆ ಹೋಲಿಸಿ ಜನ ಮಾತನಾಡುತ್ತಿದ್ದಾರೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: