ಮಂಗಳೂರು, ಜ 07 : ಕಾಸರಗೋಡಿನಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಭಾರತ ತಂಡದ ಮಾಜಿ ಕಪ್ತಾನ್ ಎಂ.ಎಸ್. ಧೋನಿ (MS Dhoni) ಅವರು ಮುಂಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಆಗಮಿಸಿದರು.
ವಿಮಾನ ನಿಲ್ದಾಣಕ್ಕೆ ಬಂದಿಳಿದ ಧೋನಿ ಅವರನ್ನು ಶಾಸಕ ಯು.ಟಿ. ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಆತ್ಮೀಯವಾಗಿ ಸ್ವಾಗತಿಸಿದರು. ಇನ್ನು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದು, ಧೋನಿಯವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದರು.

ಸ್ನೇಹಿತ ಡಾ.ಶಾಜೀರ್ ಗಫಾರ್ ಅವರ ತಂದೆ ಪ್ರೊ.ಕೆ ಕೆ ಅಬ್ದುಲ್ ಗಫಾರ್ ಅವರ ಆತ್ಮಕಥನ NJAAN SAKSHI ಬಿಡುಗಡೆ ಸಮಾರಂಭ ಇಂದು ರಾತ್ರಿ 7 ಗಂಟೆಗೆ ನಡೆಯಲಿದ್ದು ಅದರಲ್ಲಿ ಭಾಗವಹಿಸುವ ಸಲುವಾಗಿ ಕಾಸರಗೋಡಿಗೆ ತೆರಳಲು ಧೋನಿ ಆಗಮಿಸಿದ್ದಾರೆ. ಇಂದು ಸಂಜೆ ಕಾಸರಗೋಡಿನ ಬೇಕಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ವಿಮಾನ ನಿಲ್ದಾಣದಿಂದ ಕಾಸರಗೋಡಿಗೆ ರಸ್ತೆ ಮಾರ್ಗವಾಗಿ ಸಂಚರಿಸಿದ ಎಂ.ಎಸ್ ದೋನಿಯೊಂದಿಗೆ ಖಾದರ್ ಸಹೋದರ ಇಫ್ತಿಕರ್, ಶಫಿಕ್ ಹೈದರ್ ಇಮ್ಯಾಕ್ ಗ್ರೂಪ್ ಮಂಗಳೂರು, ಅಲ್ತಫ್ saqco ಸೌದಿ ಅರೇಬಿಯ ಇವರು ಜೊತೆಗಿದ್ದರು.