ಹೊಸದಿಲ್ಲಿ: ದೇವ ಭೂಮಿ ಹಿಮಾಚಲದ ತಪ್ಪಲಿನ ಉತ್ತರಖಾಂಡದ ಜೋಶಿಮಠದಲ್ಲಿ(Joshimath) ದೇವಸ್ಥಾನ ಹಾಗೂ ಹಲವಾರು ಮನೆಗಳ ಕುಸಿತಗೊಂಡಿದೆ. ಸುಮಾರು 600 ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಅವರು ಆದೇಶಿಸಿದ್ದಾರೆ.
“ಕುಸಿಯುತ್ತಿರುವ ಪಟ್ಟಣ” ಉತ್ತರಾಖಂಡದ ಬೆಟ್ಟದ ಪಟ್ಟಣಗಳಲ್ಲಿ ಭೂಮಿ ಮುಳುಗಡೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇದಕ್ಕೆ ಹಿಮಾಚಲ ಬೆಟ್ಟದಲ್ಲಿ ಪ್ರಕೃತಿ ವಿರುದ್ಧವಾಗಿ ನಡೆಯುತ್ತಿರುವ ಪವರ್ ಪ್ರೋಜೆಕ್ಟ್ , ಹೆದ್ದಾರಿ ನಿರ್ಮಾಣ , ಸುರಂಗ ನಿರ್ಮಾಣ ಕಾರಣ ಎನ್ನಲಾಗಿದೆ.

ಜೋಶಿಮಠದಲ್ಲಿ ನಿನ್ನೆ ದೇವಾಲಯ ಕುಸಿದುಬಿದ್ದು ಈಗಾಗಲೇ ಭಯದಲ್ಲಿ ಬದುಕುತ್ತಿರುವ ಇಲ್ಲಿನ ನಿವಾಸಿಗಳು, ಕರ್ಣಪ್ರಯಾಗದಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾದ ನಂತರ ಇನ್ನಷ್ಟು ಭಯಭೀತರಾಗಿದ್ದಾರೆ.ಭೂಮಿ ಕುಸಿತದ ಕುರಿತು “ಕ್ಷಿಪ್ರ ಅಧ್ಯಯನ” ನಡೆಸಲು ಕೇಂದ್ರವು ತಜ್ಞರ ಸಮಿತಿಯನ್ನು ರಚಿಸಿದೆ. ಮಾನವ ನೆಲೆನಿಂತಿರುವ ಪ್ರದೇಶಗಳು, ಕಟ್ಟಡಗಳು, ಹೆದ್ದಾರಿಗಳು, ಮೂಲಸೌಕರ್ಯಗಳು ಮತ್ತು ನದಿ ವ್ಯವಸ್ಥೆಗಳ ಮೇಲೆ ಭೂ ಕುಸಿತದ ಪರಿಣಾಮಗಳನ್ನು ಸಮಿತಿಯು ಅಧ್ಯಯನ ನಡೆಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಜೋಶಿಮಠದ ಬೀಳುವ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ಸುಮಾರು 600 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಕ್ಷಣದ ಮತ್ತು ದೀರ್ಘಾವಧಿಯ ಕ್ರಿಯಾ ಯೋಜನೆಗಳನ್ನು ಕೂಡಲೇ ಸಿದ್ಧಪಡಿಸಬೇಕು. ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳು ತಕ್ಷಣವೇ ಲಭ್ಯವಿರಬೇಕು ಹಾಗೂ ಜನರನ್ನು ಏರ್‌ಲಿಫ್ಟಿಂಗ್ ಮಾಡಲು ವ್ಯವಸ್ಥೆ ಮಾಡಬೇಕು” ಎಂದು ಸಿಎಂ ಪುಷ್ಕರ್ ಧಾಮಿ ಹೇಳಿದರು.
ಈ ವೇಳೆ ಜೋಶಿಮಠದ ಮನೋಹರ್ ಬಾಗ್, ಸಿಂಗ್ಧರ್, ಜೆಪಿ, ಮಾರ್ವಾರಿ, ಸುನೀಲ್ ಗಾಂವ್, ವಿಷ್ಣು ಪ್ರಯಾಗ, ರವಿಗ್ರಾಮ, ಗಾಂಧಿನಗರ ಮೊದಲಾದ ಪೀಡಿತ ಪ್ರದೇಶಗಳಲ್ಲಿ ತಂಡ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿತು. ಅವರು ತಪೋವನಕ್ಕೆ ಭೇಟಿ ನೀಡಿ ಎನ್‌ಟಿಪಿಸಿ ಸುರಂಗದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಸುಮಾರು 50,000 ಜನಸಂಖ್ಯೆಯೊಂದಿಗೆ, ಕರ್ಣಪ್ರಯಾಗವು ಸಮುದ್ರ ಮಟ್ಟದಿಂದ 860 ಮೀಟರ್ ಎತ್ತರದಲ್ಲಿದೆ. ಜೋಶಿಮಠವು 1,890 ಮೀಟರ್ ಎತ್ತರದಲ್ಲಿದೆ. ಕರ್ಣಪ್ರಯಾಗವು ಜೋಶಿಮಠದಿಂದ 80 ಕಿ.ಮೀ ದೂರದಲ್ಲಿದೆ.
ಹಿಮಾಲಯದಲ್ಲಿ ನಡೆಯುತ್ತಿರುವ ಪವರ್ ಪ್ರೊಜೆಕ್ಟ್ ಗಳು ಹಾಗೂ ಚಾರ್ ಧಾಮ್ ಪ್ರೊಜೆಕ್ಟ್ ಗಳನ್ನು ವಿರೋಧಿಸಿ ಪ್ರೊಜೆಕ್ಟ್ ಅಧ್ಯಕ್ಷರಾದ, ಪರಿಸರವಾದಿ ರವಿ ಚೋಪ್ರಾ 2022ರಲ್ಲಿ ರಾಜಿನಾಮೆ ಕೊಟ್ಟಿದ್ದರು.