Ad Widget

ಮಾಜಿ ನಗರಸಭಾ ಅಧ್ಯಕ್ಷ ಹೆರ್ಗೆ ದಿನಕರ ಶೆಟ್ಟಿಯವರನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿಸಲು ಒತ್ತಾಯ   

IMG-20221229-WA0127 (1)
Ad Widget

Ad Widget

Ad Widget

ಉಡುಪಿ ಜ : 3 :  ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ.  ಚುನಾವಣಾ ಕಣ ರಂಗೇರುತ್ತಿದೆ.   ಹಲವು ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಅಡಳಿತರೂಢ ಬಿಜೆಪಿಯ ಹಲವು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬದಲಾಯಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಗುಜಾರತ್‌ ನಲ್ಲಿ ದೊಡ್ಡ ಮಟ್ಟದಲ್ಲಿ ಹಾಲಿ ಶಾಸಕರ ಟಿಕೆಟ್‌ ಗಳನ್ನು ಕತ್ತರಿಸಿ ಮಣೆ ಹಾಗಿದ್ದು ಅಲ್ಲಿ ಅಭೂತಪೂರ್ವ ವಿಜಯ ಆ ಪಕ್ಷ ಸಾಧಿಸಿದೆ . ಅದೇ ಮಾನದಂಡವನ್ನು ಕರ್ನಾಟದಲ್ಲೂ ಬಿಜೆಪಿ ಹೈಕಮಾಂಡ್‌ ಅನುಸರಿಸಲಿದೆ ಎಂಬ ಮಾತುಗಳು ಬಿಜೆಪಿ ಮೂಲಗಳಿಂದ ಕೇಳಿಬರುತ್ತಿದೆ.

Ad Widget

Ad Widget

Ad Widget

Ad Widget

ಈ ಹಿನ್ನಲೆಯಲ್ಲಿ ಕಡಲತಡಿಯಲ್ಲಿರುವ   ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರು ಹೊಸ ಮುಖವನ್ನು ನೀರಿಕ್ಷಿಸುತ್ತಿದ್ದಾರೆ. ಸದ್ಯ ಆ ಬಗ್ಗೆ ಚರ್ಚೆಯಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಹೆಸರೆಂದರೇ   ಹೆರ್ಗ ದಿನಕರ ಶೆಟ್ಟಿಯವರದು. ತಳಮಟ್ಟದ ಕಾರ್ಯಕರ್ತನಿಂದ ಹಿಡಿದು ಹಿರಿಯ ನಾಯಕರೊಂದಿಗೆ ಸೇರಿ ಎಲ್ಲಾ ಸಮುದಾಯಗಳ ಹಿರಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮೂರು ಬಾರಿ ನಗರಸಭಾ ಸದಸ್ಯ ದಿನಕರ ಶೆಟ್ಟಿಯವರಿಗೆ ಈ ಬಾರಿ ಪಕ್ಷದ ಟಿಕೆಟ್‌ ಒಲಿಯಲಿದೆ ಎಂದು ಹೇಳಲಾಗುತ್ತಿದೆ.

Ad Widget

Ad Widget

Ad Widget

Ad Widget

  ಸಂಘ ಪರಿವಾರದ ಹಿನ್ನೆಲೆಯುಳ್ಳ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಾಗಿರುವ ದಿನಕರ ಶೆಟ್ಟಿ ಉಡುಪಿ ನಗರ ಸಭಾ ಸದಸ್ಯರಾಗಿ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು, ಆಡಳಿತದ ಅಗಾಧ ಅನುಭವ ಹೊಂದಿದ್ದಾರೆ. ಅವರು ನಗರಸಭಾ ಅಧ್ಯಕ್ಷರಾಗಿದ್ದ  ಅವಧಿಯಲ್ಲಿ ಉಡುಪಿ ನಗರಸಭೆಯನ್ನು ರಾಜ್ಯದಲ್ಲಿಯೇ ನಂಬರ್ 1 ಸ್ಥಾನಕ್ಕೇರಿಸಿಧ ಕೀರ್ತಿ ಅವರದು

 ನಗರ ಪ್ರದೇಶ ಮಾತ್ರವಲ್ಲದೇ ವಿವಿಧ ಸಂಘಟನೆಗಳೊಂದಿಗೆ ಹಾಗೂ ಸಹಕಾರ ಸಂಘಗಳು, ದೈವಾರಾಧನೆ, ದೇವಳಗಳ ಜೊತೆಗೂಡಿ ಗ್ರಾಮೀಣ ಪ್ರದೇಶದಲ್ಲಿ ಬಿಡುವಿಲ್ಲದೇ ನಡೆಸುತ್ತಿರುವ ಚಟುವಟಿಕೆಗಳಿಂದ ದಿನಕರಣ್ಣ, ಶೆಟ್ಟಿಬೆಟ್ಟು, ಪರ್ಕಳಕ್ಕೆ ಮಾತ್ರವಲ್ಲದೇ ಹಳ್ಳಿಗರಿಗೂ ಆಪ್ತರನ್ನಾಗಿಸಿದೆ.

Ad Widget

Ad Widget

ಹವ್ಯಾಸಿ ಯಕ್ಷಗಾನ ಹಾಗೂ ನಾಟಕ ಕಲಾವಿದರಾಗಿರುವ ಬಹುಮುಖ ಪ್ರತಿಭೆ. ರಾತ್ರಿ 12 ಗಂಟೆಗೆ ಕರೆ ಮಾಡಿದರೂ ಕೊಂಚವೂ ಬೇಸರಿಸಿಕೊಳ್ಳದೇ ಕರೆ ಸ್ವೀಕರಿಸಿ  ಪ್ರತಿಕ್ರಿಯೆ ನೀಡುವ ಸರಳ ಸಜ್ಜನಿಕೆಯ  ವ್ಯಕ್ತಿ

ಉಡುಪಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ನಂಬರ್ 1 ಕ್ಷೇತ್ರವನ್ನಾಗಿಸುವುದು ಹೇಗೆ ಎಂಬ ನೀಲಿನಕ್ಷೆಯನ್ನು ಅವರು ಹೊಂದಿದ್ದು  ಹೆರ್ಗ ದಿನಕರ ಶೆಟ್ಟಿಯವರನ್ನು ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿಸಬೇಕೆಂದು ದೊಡ್ಡ ಸಂಖ್ಯೆಯ ಮತದಾರರು ಒತ್ತಾಯಿಸುತ್ತಿದ್ದಾರೆ    

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: