Ad Widget

S Angara | ‘ಜೀವಮಾನದುದ್ದಕ್ಕೂ ಬಿಜೆಪಿಗೆ ಮತ ಹಾಕಿದ್ದರೂ ಯಾವುದೇ ಸ್ಪಂದನ ಇಲ್ಲ. ಮುಂದಕ್ಕೆ ಓಟು ಕೇಳಲು ಬನ್ನಿ’ ಸಚಿವ ಅಂಗಾರರಿಗೆ ಸ್ವಕ್ಷೇತ್ರದಲ್ಲೇ ಬಿಜೆಪಿ ಕಾರ್ಯಕರ್ತರ ಆಕ್ರೋಶ

InShot_20230103_171938976
Ad Widget

Ad Widget

Ad Widget

ಕಡಬ (ಜ.3) : ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತದಾರರ ಆಕ್ರೋಶ ಅಲ್ಲಲ್ಲಿ ಪ್ರಕಟವಾಗತೊಡಗಿದ್ದು, ಗುದ್ದಲಿಪೂಜೆಗೆಂದು ಆಗಮಿಸಿದ ಸುಳ್ಯ ಶಾಸಕ , ಸಚಿವ ಎಸ್‌.ಅಂಗಾರ (S Angara) ಅವರಿಗೆ ‘ಮೊದಲು ಸಮಸ್ಯೆ ಬಗೆಹರಿಸಿ, ಬಳಿಕ ಗುದ್ದಲಿ ಪೂಜೆ ಮಾಡಿ’ ಎಂದು ತಾಕೀತು ಮಾಡಿದ ಘಟನೆ ಕಡಬ ಸಮೀಪದ ಬಲ್ಯ ಎಂಬಲ್ಲಿ ಸೋಮವಾರ ನಡೆದಿದೆ.

Ad Widget

Ad Widget

Ad Widget

Ad Widget

Ad Widget

ಅಂಗಾರ(S angara) ಅವರು ಪ್ರಮುಖರೊಡಗೂಡಿ 85 ಲಕ್ಷ ರು. ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸಕ್ಕೆ ಬಲ್ಯಕ್ಕೆ ಆಗಮಿಸಿದ್ದರು. ಬಲ್ಯದ ರಸ್ತೆಯೊಂದರ ಅಭಿವೃದ್ಧಿಗೆಂದು ಸತತ ಮನವಿ ಸಲ್ಲಿಸುತ್ತಿದ್ದರೂ, ಯಾವುದೇ ಸ್ಪಂದನ ತೋರದ ಜನಪ್ರತಿನಿಧಿಗಳ ಮೇಲಿನ ಆಕ್ರೋಶವನ್ನು ಎದುರಿಸಿದರು. ಮೊದಲು ಚುನಾವಣೆ ಬಹಿಷ್ಕಾರದ ಬ್ಯಾನರ್‌ ಅಳವಡಿಸಿ ಅಂತರ ಕಾಯ್ದುಕೊಂಡಿದ್ದ ಅಲ್ಲಿನ ನಿವಾಸಿಗರು ಬಳಿಕ ಶಿಲಾನ್ಯಾಸದ ಸ್ಥಳಕ್ಕೆ ಬಂದು ತಮ್ಮ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

Ad Widget

Ad Widget

Ad Widget

Ad Widget

Ad Widget

ಈ ವೇಳೆ ಉತ್ತರಿಸಿದ ಸಚಿವ ಅಂಗಾರ, ಯಾರು ಮನವಿ ಕೊಟ್ಟರೂ, ಕೊಡದಿದ್ದರೂ ನಾನೇನು ಮಾಡಬೇಕೋ ಅದನ್ನು ಮಾಡುವೆ. ನೀವು ಮನವಿ ಕೊಟ್ಟಮಾತ್ರಕ್ಕೆ ಕಾಮಗಾರಿಯ ಕೆಲಸ ಮಾಡಲು ಹಣ ಯಾರು ಕೊಡಬೇಕು? ಸರ್ಕಾರ ತಾನೆ? ಸರ್ಕಾರ ದುಡ್ಡು ಕೊಟ್ಟರೆ ಕಾಮಗಾರಿ ಮಾಡಿಸುವೆ ಎಂದು ಉತ್ತರಿಸಿದರು. ಆಗ ಅಲ್ಲಿ ಜಮಾಯಿಸಿದ ಮಂದಿ ವಾಗ್ವಾದ ನಡೆಸಿ, ಜೀವಮಾನದುದ್ದಕ್ಕೂ ಬಿಜೆಪಿಗೆ ಮತ ಹಾಕಿದ್ದರೂ ಯಾವುದೇ ಸ್ಪಂದನ ಇಲ್ಲ. ಮುಂದಕ್ಕೆ ಓಟು ಕೇಳಲು ಬನ್ನಿ ಎಂದು ಎಚ್ಚರಿಸಿ ಹೇಳುತ್ತಾ ಸ್ಥಳದಿಂದ ನಿರ್ಗಮಿಸಿದರು.

ಬಳಿಕ ಬಿಜೆಪಿ(BJP) ಮುಖಂಡ ಕೃಷ್ಣ ಶೆಟ್ಟಿ ಅಸಮಾಧಾನಿತ ಮಂದಿಯನ್ನು ಕರೆದು ಸಮಾಧಾನ ಪಡಿಸಲು ಯತ್ನಿಸಿದರು.

Ad Widget

Ad Widget

Ad Widget

Ad Widget

ಆಗ ಮುಖಂಡರೊಬ್ಬರು ನೀವು ಬಿಜೆಪಿಗೆ ಓಟ್ ಹಾಕಿದ್ದೀರಿ ಎನ್ನುವುದಕ್ಕ ಏನೂ ಗ್ಯಾರಂಟಿ ಎಂದು ಹೇಳಿದಾಗ ಮತ್ತೊಮ್ಮೆ ತೀವ್ರ ಆಕ್ರೋಶ ಬುಗಿಲೆದ್ದಿತು. ಗಣಪತಿ ಸ್ವಸ್ತಿಕದೆದುರು ಹೀಗೆ ಮಾತನಾಡಿದ್ದು ತಪ್ಪು ಎಂದು ಕಾರ್ಯಕರ್ತರಿಗೆ ಬುದ್ದಿ ಹೇಳಿದರು.

ತನ್ನ ಕ್ಷೇತ್ರದ ಮತದಾರ ವ್ಯಕ್ತಪಡಿಸುವ ಆಕ್ರೋಶ ಅಸಮಾಧಾನವನ್ನು ಕೇಳಿಸಿಕೊಳ್ಳಲೂ ಸಹನೆ ಇಲ್ಲದ ಅಂಗಾರ ರವರ ಇಂದಿನ ವರ್ತನೆ ಮುಂದಿನ ಚುನಾವಣೆಯ ದೃಷ್ಟಿಯಿಂದ ದುಷ್ಪರಿಣಾಮಕಾರಿಯಾಗಿ ಪರಿಣಮಿಸುವ ಸಾಧ್ಯತೆ ಮೂಡಿಸಿದೆ. ನಾಗರಿಕರ ಆಕ್ರೋಶದ ನಡುವೆಯೂ ಮೂರು ರಸ್ತೆಗಳ ಅಭಿವೃದ್ಧಿಗೆ 85 ಲಕ್ಷ ರು. ಅನುದಾನ ಇರಿಸಿ ಶಂಕುಸ್ಥಾಪನೆ ನೆರವೇರಿತು. 

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: