ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಆಟಕ್ಕೆ ಬ್ರೇಕ್ ಬಿದ್ದಿದೆ. ತುಳುನಾಡಿನ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದರು. `ಗಿರಿಗಿಟ್’ (Girgit Film) ಚಿತ್ರದ ಮೂಲಕ ಸೂಪರ್ ಸಕ್ಸಸ್ ಕಂಡಿದ್ದರು. ಈ ಚಿತ್ರದ ನಟನೆ ನೋಡಿಯೇ, ಬಿಗ್ ಬಾಸ್‌ಗೆ ಬರಲು ರೂಪೇಶ್ ಶೆಟ್ಟಿಗೆ ಅವಕಾಶ ಸಿಕ್ಕಿತ್ತು. ಒಟಿಟಿ ಮತ್ತು ಟಿವಿ ಬಿಗ್ ಬಾಸ್ ಎರಡರಲ್ಲೂ ಗಟ್ಟಿ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ ಗುರುತಿಸಿಕೊಂಡಿದ್ದರು. ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ ಎನ್ನಲಾಗುತ್ತಿದೆ.

ಕೇರಳ ರಾಜ್ಯದ ಕಾಸರಗೋಡಿನ ಉಪ್ಪಳದ ಪ್ರತಾಪ್ ನಗರದ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ರಿಷಬ್ ಶೆಟ್ಟಿ ಎಂದು ಕರ್ನಾಟಕದಲ್ಲಿ ಸಾಧನೆಗೈದಿದ್ದಾರೆ. ಯೂಟ್ಯೂಬರ್ ಆಗಿ ನಂತರ ಮಂಗಳೂರಿನಲ್ಲಿ ರೆಡಿಯೋ ಜಾಕಿಯಾಗಿ, 2015ರಲ್ಲಿ ತುಳು ಚಿತ್ರರಂಗಕ್ಕೆ ಕಾಲಿಟ್ಟರು. ಇವರು ನಟಿಸಿದ ಗಿರಿಗಿಟ್ ಸಿನಿಮಾ ಸೂಪರ್ ಹಿಟ್ ಆಯಿತು. ರೂಪೇಶ್ ಶೆಟ್ಟಿ ಗಮ್ಜಲ್ ಎನ್ನುವ ತುಳು ಚಿತ್ರದ ನಿರ್ದೇಶನವನ್ನು ಮಾಡಿದ್ದಾರೆ. ಇವರ ತಂದೆ ತ್ಯಾಂಪಣ್ಣ ಶೆಟ್ಟಿ ಯಕ್ಷಗಾನ ಕಲಾವಿದರಾಗಿ, ಮೇಳದ ಯಜಮಾನರಾಗಿ ಕಲಾ ಸೇವೆಗೈದವರು.
ಕೊವೀಡ್ ಸಂದರ್ಭ ಹಲವಾರು ಜನರಿಗೆ ಸಹಾಯ ಹಸ್ತ ಚಾಚಿದ್ದರು. ವೂಟ್ ನಲ್ಲಿ ಒಟಿಟಿ ಬಿಗ್ ಬಾಸ್ ನಲ್ಲಿ ಗೆದ್ದು ಟಿವಿ ಬಿಗ್ ಬಾಸ್ ಗೆ ಆಯ್ಕೆಯಾಗಿದ್ದರು.
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ನಿಮ್ಮ ಪ್ರಮುಖ ಮೂರು ಆಸೆಗಳೇನು ಎಂದು ಕೇಳಿದಾಗ, ಹುಲಿ ವೇಷವನ್ನು ಬಿಗ್ ಬಾಸ್ ಮನೆಗೆ ಕರೆಸಬೇಕು ಎಂದು ಹೇಳುವ ಮೂಲಕ ಹುಲಿವೇಷಕ್ಕೆ ಬಿಗ್ ಬಾಸ್ ಮನೆಯಲ್ಲಿ ಅವಕಾಶ ನೀಡಿದ್ದರು.
ಹುಲಿವೇಷದ ಬಗ್ಗೆ ಬಿರುವೆರ್ ಕುಡ್ಲ ಸ್ಪಷ್ಟನೆ: ಬಿಗ್‌ಬಾಸ್ ನಲ್ಲಿ ತುಳುನಾಡಿನ ನಟ ರೂಪೇಶ್ ಶೆಟ್ಟಿಯವರಿಗೋಸ್ಕರ ತುಳುವರ ಹುಲಿಕುಣಿತವನ್ನು ಏರ್ಪಡಿಸಲಾಗಿತ್ತು. ಎಲ್ಲರ ಮನಗೆದ್ದ ಈ ಕಾರ್ಯಕ್ರಮವನ್ನು ಹುಲಿಕುಣಿತಕ್ಕೆ ಪ್ರಸಿದ್ಧ ವಾದ ಬಿರುವೆರ್ ಕುಡ್ಲ (ರಿ) ತಂಡ ನಡೆಸಿಕೊಟ್ಟಿತ್ತು. ಆದರೆ ಈಗ ಇದರ ಲಾಭ ಪಡೆದು ಪ್ರಚಾರಗಿಟ್ಟಿಸಿಕೊಳ್ಳುತ್ತಿರುವುದು ಬೇರೆ ತಂಡ ಎಂದು ಬಿರುವೆರ್ ಕುಡ್ಲ ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿದೆ . ಯಾರದ್ದೋ ಶ್ರಮಕ್ಕೆ ಇನ್ಯಾರೋ ಹೆಸರು ಮಾಡಿಕೊಳ್ಳುತ್ತಿದ್ದಾರೆ. ಸತ್ಯ ವಿಚಾರ ಎಲ್ಲರಿಗೂ ತಿಳಿಯಬೇಕೆಂಬ ಉದ್ದೇಶದಿಂದ ಈ ವಿಚಾರ ಇಲ್ಲಿ ಹಾಕುತ್ತಿದ್ದೇವೆ ಎಂದು ವಿಡಿಯೋ ಶೇರ್ ಮಾಡಿದೆ.
ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿರುವ ನಟ ರೂಪೇಶ್ ಶೆಟ್ಟಿ ಅವರು ದೊಡ್ಡ ಮೊತ್ತವನ್ನು ವಿನ್ನಿಂಗ್ ಪ್ರೈಜ್ ಆಗಿ ಮನೆಗೆ ಒಯ್ಯಲಿದ್ದಾರೆ. ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ಗೆದ್ದಿದ್ದು ಎಷ್ಟು ಗೊತ್ತಾ?
ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಅವರು ಬಿಗ್ ಬಾಸ್ ಕಡೆಯಿಂದ 50 ಲಕ್ಷ ಹಾಗೂ ಸ್ಪಾನ್ಸರ್ ಕಡೆಯಿಂದ 10 ಲಕ್ಷ ಪಡೆಯಲಿದ್ದು ಒಟ್ಟು 60 ಲಕ್ಷ ಪಡೆಯಲಿದ್ದಾರೆ.
ಸೀಸನ್ 9ರ ಟ್ರೋಫಿ ಎತ್ತಿರುವ ರೂಪೇಶ್ ಶೆಟ್ಟಿ (Rupesh Shetty) ಅವರಿಗೆ ಬರೋಬ್ಬರಿ 60 ಲಕ್ಷ ರೂಪಾಯಿಗಳ ಬಹುಮಾನ (Prize) ವನ್ನು ನೀಡಲಾಗಿದೆ. ರನ್ನರ್ ಅಪ್ ಆಗಿರುವ ರಾಕೇಶ್ ಅಡಿಗಗೆ (Rakesh Adiga) ವಾಹಿನಿಯಿಂದ ಏಳು ಲಕ್ಷ ರೂಪಾಯಿ ಹಾಗೂ ಪ್ರಾಯೋಜಕರ ಅತ್ಯುತ್ತಮ ನಾಯಕ ಬಹುಮಾನವಾಗಿ ಐದು ಲಕ್ಷ ರೂಪಾಯಿ ಒಟ್ಟು 12 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ರಾಕೇಶ್ ಅಡಿಗ ಪಡೆದುಕೊಂಡಿದ್ದಾರೆ.