ಬೆಳ್ತಂಗಡಿ : ಜ 1 : ಹೊಸ ವರ್ಷದ ಮೊದಲ ದಿನ ಬೆಳಿಗ್ಗೆ ಬೆಳ್ತಂಗಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮೋಗೆರಡ್ಕ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಇನೋವಾ ಕಾರು ಹಾಗೂ ಖಾಸಗಿ ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮೂಡಬಿದ್ರೆಯ ಗಂಜಿಮಠ ಸುರಲ್ಪಾಡಿ ನಿವಾಸಿ ನೌಷದ್ ಹಾಜಿ (47) ಮತ್ತು ಚಾಲಕ ಉಲಾಯಿಬೆಟ್ಟು ನಿವಾಸಿ ಫಾಜಿಲ್(21) ಸಾವನ್ನಪ್ಪಿದವರು. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ದೌಡಾಯಿಸಿದ್ದಾರೆ.
ಅಪಘಾತದದ ತೀವ್ರತೆಗೆ ಕಾರಿನ ಮುಂಭಾಗ ಸಂಫೂರ್ಣ ನುಜ್ಜುಗುಜ್ಜಾಗಿದ್ದು ಗುರುತು ಸಿಗದಷ್ಟು ಕಾರಿಗೆ ಹಾನಿಯಾಗಿದೆ. ಬಸ್ಸಿನ ಚಾಲಕನ ಸೀಟಿನ ಬದಿಯಲ್ಲಿ ಸಂಪೂರ್ಣ ಜಖಂ ಆಗಿದೆ. ಚಾಲಕನ ಕೆಳಗಡೆಯ ಟಯರ್ ತನ್ನ ಸ್ಥಾನದಿಂದ ಕಳಚಿಕೊಂಡು ಹಿಂಬಂದಿಯ ಟಯರ್ ಬಳಿಗೆ ಬಂದಿದೆ. ಅಲ್ಲಿಯವರೆಗೂ ಬಸ್ಸಿನ ಅಂಚಿಗೆ ಹಾನಿಯಾಗಿದೆ. ಅಲ್ಲದೇ ಚಾಲಕನ ಸೀಟಿನ ಮುಂಭಾಗಕ್ಕೂ ಹಾನಿ ಉಂಟಾಗಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ


