
ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗಶ್ವರ ದೇವಸ್ಥಾನದ ಗದ್ದೆಯಲ್ಲಿ ಇಂದು (31-12-20220) ರಾತ್ರಿ 9.30ಕ್ಕೆ ಗಾನ ಸಾರಥಿ ಶ್ರೀ ರಾಘವೇಂದ್ರ ಜನ್ಸಾಲೆ ಸಾರಥ್ಯದ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ “ಪಾವನ ತುಳಸಿ” ಎಂಬ ಯಕ್ಷಗಾನ ನಡೆಯಲಿದೆ.
ಯಕ್ಷ ಪ್ರೇಮಿಗಳು ಪುತ್ತೂರು ಸದಸ್ಯರು ಹೊಸ ವರ್ಷವನ್ನು ಹೊಸತನದಿಂದ ಸ್ವಾಗತಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಹೊಸ ವರ್ಷವನ್ನು ನವರಸಗಳನ್ನು ತುಂಬಿರುವ ಯಕ್ಷಗಾನದೊಂದಿಗೆ ಸ್ವಾಗತಿಸಲು, ಕಲಾ ಮಾತೆಯ ಆರಾಧನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುತ್ತೂರಿನ ಜನರನ್ನು ಯಕ್ಷ ಪ್ರೇಮಿಗಳು, ಜನ್ಸಾಲೆ ಅಭಿಮಾನಿಗಳು ಪುತ್ತೂರು ವಿನಂತಿಸಿದ್ದಾರೆ.
