ಬಿಜೆಪಿ ಫೈರ್ ಬ್ರಾಂಡ್ ನಾಯಕರಾದ ಉಮಾಭಾರತಿ (UmaBharti) ಹಾಗೂ ಸುಬ್ರಹ್ಮಣ್ಯ ಸ್ವಾಮಿ ಹೇಳಿಕೆಗಳು ಅವರ ಹೇಳಿಕೆಗಳು ಬಿಜೆಪಿಗೆ ಸಂಕಷ್ಟವನ್ನು ತಂದಿಟ್ಟಿದೆ. ಇತ್ತೀಚೆಗಷ್ಟೇ ಉಮಾಭಾರತಿ ಬಿಜೆಪಿ ಬೆಂಬಲಿಗರಿಗೆ ‘ಸುತ್ತಮುತ್ತ ನೋಡಿ’ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಬೇಕು ಎಂದು ಹೇಳಿದ್ದರು.
ಇದೀಗ ಅವರ ಮತ್ತೊಂದು ಹೇಳಿಕೆ ಸಂಚಲನ ಮೂಡಿಸಿದೆ. ಭಗವಾನ್ ರಾಮ ಮತ್ತು ಹನುಮಂತ ಬಿಜೆಪಿಯ ಕಾಪಿರೈಟ್ ಅಲ್ಲ ಎಂದು ಅಯೋಧ್ಯೆ ರಾಮಮಂದಿರ ಹೋರಾಟಗಾರ್ತಿ ಉಮಾಭಾರತಿ ಹೇಳಿದ್ದಾರೆ.ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ರಾಜ್ಯದಲ್ಲಿ ಹನುಮಂತನ ಮಂದಿರ ನಿರ್ಮಾಣ ಮಾಡುವುದಾಗಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉಮಾಭಾರತಿ ಈ ಹೇಳಿಕೆ ನೀಡಿದ್ದಾರೆ.
ನಾನು ರಾಜ್ಯದಲ್ಲಿ ಮದ್ಯಪಾನ ನಿಷೇಧದ ಬೇಡಿಕೆ ಇಟ್ಟಿದ್ದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಸರ್ಕಾರ ತಮ್ಮನ್ನು ಮೂಲೆಗುಂಪು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ, ಉಮಾಭಾರತಿ ಮಧ್ಯಪ್ರದೇಶದಲ್ಲಿ ಮದ್ಯ ನಿಷೇಧಿಸುವಂತೆ ಆಗ್ರಹಿಸಿ ಮದ್ಯದಂಗಡಿಗಳ ಮೇಲೆ ಕಲ್ಲು ಎಸೆದು ಸುದ್ದಿಯಾಗಿದ್ದರು.
ಉಮಾಭಾರತಿ ಮಧ್ಯಪ್ರದೇಶದ ಮಾಜಿ ಸಿಎಂ ಆಗಿದ್ದು, ರಾಜ್ಯದ ಅತ್ಯುತ್ತಮ ವರ್ಚಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇನ್ನು ಪಕ್ಷದ ಹೈಕಮಾಂಡ್ ತನ್ನನ್ನು ಕಡೆಗಣಿಸಿದ್ದರಿಂದ ಅವರು ಪಕ್ಷದ ವಿರುದ್ಧ ಮುನಿಸಿಕೊಂಡಿದ್ದಾರೆ. ಇನ್ನು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿದ ಉಮಾಭಾರತಿ, ಹಿಂದೂಗಳು ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
2014ರ ಚುನಾವಣೆಯಲ್ಲಿ ಮೋದಿ ಗೆಲುವಿನ ಹಿಂದೆ ಬಹುದೊಡ್ಡ ಶಕ್ತಿಯಾಗಿದ್ದ ಸುಬ್ರಹ್ಮಣ್ಯನ್ ಸ್ವಾಮಿ ಮೋದಿ ಸರ್ಕಾರದ ಕಟು ಟೀಕಾಕಾರಾಗಿ ಬದಲಾಗಿದ್ದರೆ. ಮೋದಿಯ ಆರ್ಥಿಕ ನೀತಿ, ಬೆಲೆಏರಿಕೆ, ಶ್ರೀರಾಮ ಮಂದಿರ , ರಾಮಸೇತು ಸಹಿತ ಎಲ್ಲಾ ವಿಚಾರದಲ್ಲೂ ಟೀಕೆ ಮಾಡುತ್ತಿರುವ ಸ್ವಾಮಿ , ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದ್ದಾರೆ.