ಪುತ್ತೂರು : ಡಿ 31 : ರಾಜ್ಯದ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರು ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ. ಅಡಿಕೆಗೆ ನೀಡುವ ಪ್ರೋತ್ಸಾಹ ಕಡಿಮೆ ಮಾಡಬೇಕು ಎಂಬ ಹೇಳಿಕೆ ನೀಡಿದ್ದು, ಇದರ ವಿರುದ್ದ ಕಾಂಗ್ರೆಸ್ ಕಿಸಾನ್ ತಾಲೂಕು ಘಟಕದ ವತಿಯಿಂದ ಜ .2 ರಂದು ತಾಲೂಕು ಅಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಅರಗರವರ ಈ ಹೇಳಿಕೆಯಿಂದ ಅಡಿಕೆ ಬೆಳೆಗಾರರ ನೈತಿಕ ಸ್ಥೈರ್ಯ ಕುಗ್ಗಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ನಿಧಾನವಾಗಿ ಅಡಿಕೆ ಧಾರಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ರಾಜ್ಯದ ಸುಮಾರು 12 ಜಿಲ್ಲೆಗಳಲ್ಲಿ 2 ಕೋಟಿ ಮಂದಿ ಅಡಿಕೆ ಬೆಳೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ನಾಲ್ಕರಿಂದ ಐದು ಜಿಲ್ಲೆಗಳ ವ್ಯಾಪರ ವಹಿವಾಟು ಜನ ಜೀವನ ಸಂಪೂರ್ಣವಾಗಿ ಅಡಿಕೆ ಬೆಳೆಯನ್ನು ಅವಲಂಬಿಸಿದೆ. ಸರಕಾರದಲ್ಲಿ ಅಯಕಟ್ಟಿನ ಸ್ಥಾನಸಲ್ಲಿರುವ ವ್ಯಕ್ತಿಯ ಈ ಬೇಜವ್ದಾರಿ ಹೇಳಿಕೆಯಿಂದ ಈ ಜಿಲ್ಲೆಗಳ ಜನರ ಬದುಕು ಡೋಲಾಯಮಾನವಾಗಲಿದೆ. ಇದರ ಜವಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ವಹಿಸಿಕೊಳ್ಳಬೇಕಿದೆ ಎಂದರು
ಒಂದೆಡೆ ಅಡಿಕೆ ಬೆಳೆ ವಿಸ್ತರಣೆಯಿಂದ ಬೆಳೆ ಕುಸಿಯಲಿದೆ ಎನ್ನುವವರೇ ಇನ್ನೊಂದೆಡೆ ಯಾವುದೇ ನಿರ್ಬಂಧಗಳಿಲ್ಲದೇ ಅಡಿಕೆ ಅಮದಿಗೂ ಅವಕಾಶ ಕಲ್ಪಿಸಿದ್ದಾರೆ. ಭೂತನ್ ದೇಶದಿಂದ ಸಹಸ್ರಾರು ಟನ್ ಆಡಿಕೆ ಆಮದು ಆಗುತ್ತಿದೆ. ಇದನ್ನು ನಿಲ್ಲಿಸಿದರೇ ಸಾಕು . ಅಡಿಕೆ ಬೆಲೆ ಸ್ಥಿರವಾಗಲಿದೆ. ಕರ್ನಾಟಕದಲ್ಲಿ ಅಡಿಕೆ ಬೆಳೆಯನ್ನು ಕುಂಠಿತಗೊಳಿಸುವ ಹುನ್ನಾರ ನಡೆಯುತ್ತಿದ್ದು ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.
ಸರಕಾರದಲ್ಲಿರುವ ಜನ ಪ್ರತಿನಿಧಿಗಳು ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೇ ಅಡಿಕೆಗೆ ಪರ್ಯಾಯ ಬೆಳೆ ಯಾವುದು ಎಂದು ಪ್ರಶ್ನಿಸಿದ ಅವರು ಅದರ ಬದಲು ಸರಕಾರ ಅಮದು ನಿಲ್ಲಿಸಲಿ ಇಲ್ಲದಿದ್ದರೆ ಮುಂದೂದು ದಿನ ಸರಕಾರ ಇದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಕಿಸಾನ್ ಘಟಕದ ಪುತ್ತೂರು ಬ್ಲಾಕ್ ಅಧ್ಯಕ್ಷ ಮುರಳೀಧರ ಗೌಡ ಕೆಮ್ಮಾರ ಮಾತನಾಡಿ “ ಗೃಹ ಸಚಿವರ ಹೇಳಿಕೆ ಬಾಲಿಶತನದಿಂದ ಕೂಡಿದೆ. ಮುಂದೂದು ದಿನ ಅಡಿಕೆಗೆ ಬೆಲೆ ಕುಸಿಯುವ ಸಾಧ್ಯತೆ ಇದ್ದರೇ ಆಗ ಅಡಿಕೆ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಸರಕಾರ ಪ್ರೋತ್ಸಾಹ ನೀಡಬೇಕು ಹೊರತು ಸರಕಾರ ಪ್ರೋತ್ಸಾಹಿಸಬಾರದು ಎಂದು ಹೇಳುವ ಮೂಲಕ ಸಚಿವರು ಬಾಲಿಶತನ ಮೆರೆದಿದ್ದಾರೆ ಎಂದರು
ಕಿಸಾನ್ ಘಟಕದ ರವೀಂದ್ರ ರೈ ನೆಕ್ಕಿಲು, ವಿಕ್ರಂ ರೈ ಸಾಂತ್ಯ, ಬ್ಲಾಕ್ ಕಾಂಗ್ರೆಸ್ ನ ಹಬೀಬ್ ಕಣ್ಣೂರು ಉಪಸ್ಥಿತರಿದ್ದರು