Naresh Pavitra Lokesh Viral Video: ನಟಿ ಪವಿತ್ರಾ ಲೋಕೇಶ್ ಮತ್ತು ಟಾಲಿವುಡ್ ನಟ ನರೇಶ್ (Naresh) ಅವರ ನಡುವಿನ ಪ್ರೇಮ್ ಕಹಾನಿಯಿಂದಾಗಿ ಭಾರಿ ವಿವಾದ ಸೃಷ್ಟಿಸಿತ್ತು. ಇವರಿಬ್ಬರ ಸಂಬಂದಗಳ ಬಗ್ಗೆ ಸಾಕಷ್ಟು ಸುದ್ದಿಗಳು ಓಡಾಡಿದ್ದವು. ಇಬ್ಬರು ಮದುವೆ ಆಗಿದ್ದಾರೆ, ಆಗಲಿದ್ದಾರೆ ಎಂಬೆಲ್ಲ ಚರ್ಚೆಗಳು ನಡೆದಿದ್ದವು. ಈ ರೀತಿಯ ಆರೊಪಗಳನ್ನು ನರೇಶ್ ಅವರ ಮೂರನೇ ಪತ್ನಿ ರಮ್ಯಾ ಮಾಡಿದ್ದರು.
ನರೇಶ್ ರಮ್ಯಾ ಸಂಸಾರದ ಗಲಾಟೆ ಬೀದಿಗೆ ಬಂದಿತ್ತು. ಅದಕ್ಕೆಲ್ಲ ಈಗ ಫುಲ್ ಸ್ಟಾಪ್ ಹಾಕಲು ನರೇಶ್ ಮತ್ತು ಪವಿತ್ರಾ ಲೋಕೇಶ್ (Pavitra Lokesh) ನಿರ್ಧರಿಸಿದ್ದಾರೆ. ಇಬ್ಬರೂ ಶೀಘ್ರದಲ್ಲೇ ಮದುವೆ (Naresh Pavitra Lokesh Marriage) ಆಗಲಿದ್ದಾರೆ. ಈ ಸುದ್ದಿಯನ್ನು ಅಧಿಕೃತವಾಗಿ ತಿಳಿಸುವ ಸಲುವಾಗಿ ನರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಹೊಸ ವಿಡಿಯೋ ನರೇಶ್ ಹಂಚಿಕೊಂಡಿದ್ದಾರೆ
ಹೊಸ ವರ್ಷ, ಹೊಸ ಆರಂಭ. ನಿಮ್ಮೆಲ್ಲರ ಹಾರೈಕೆ ಬೇಕು’ ಎಂದು ಕ್ಯಾಪ್ಷನ್ ನೀಡುವ ಮೂಲಕ ನರೇಶ್ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. 2023ರ ಹೊಸ ವರ್ಷವನ್ನು ನರೇಶ್ ಮತ್ತು ಪವಿತ್ರಾ ಲೋಕೇಶ್ ತುಂಬ ರೊಮ್ಯಾಂಟಿಕ್ ಆಗಿ ಸ್ವಾಗತಿಸುತ್ತಿದ್ದಾರೆ. ಕ್ಯಾಂಡಲ್ ಹಚ್ಚಿ, ಕೇಕ್ ಕತ್ತರಿಸಿ, ಪರಸ್ಪರ ಸಿಹಿ ತಿನಿಸಿ ನಂತರ ತುಟಿಗೆ ಚುಂಬಿಸುತ್ತಿರುವ ವಿಡಿಯೋವನ್ನು ಈ ಜೋಡಿ ಹಂಚಿಕೊಂಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಯಾವುದೋ ಸಿನಿಮಾದ ಟೀಸರ್ ಇರಬಹುದೇನೋ ಎಂಬ ರೀತಿಯಲ್ಲಿ ಈ ವಿಡಿಯೋ ಮೂಡಿಬಂದಿದೆ. ಆದ್ರೆ ಇದು ಸಿನಿಮಾ ಅಲ್ಲ, ರಿಯಲ್. ‘ನಮ್ಮ ಪ್ರಪಂಚಕ್ಕೆ ಸ್ವಾಗತ. ಹೊಸ ವರ್ಷದ ಶುಭಾಶಯಗಳು. ಶೀಘ್ರದಲ್ಲೇ ಮದುವೆ ಆಗುತ್ತಿದ್ದೇವೆ’ ಎಂಬ ಸಾಲುಗಳು ಈ ವಿಡಿಯೋದಲ್ಲಿ ಇದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಮದುವೆ ದಿನಾಂಕದ ಬಗ್ಗೆ ಏನೊಂದು ಮಾಹಿತಿ ಇಲ್ಲ.
New Year ✨
— H.E Dr Naresh VK actor (@ItsActorNaresh) December 31, 2022
New Beginnings 💖
Need all your blessings 🙏
From us to all of you #HappyNewYear ❤️
– Mee #PavitraNaresh pic.twitter.com/JiEbWY4qTQ
2022ರಲ್ಲಿ ಸಖತ್ ಸದ್ದು ಮಾಡಿದ್ದ ಪವಿತ್ರಾ & ನರೇಶ್
ಕಳೆದ ಕೆಲ ತಿಂಗಳ ಹಿಂದೆ ಪವಿತ್ರಾ ಲೋಕೇಶ್ ಮತ್ತು ನರೇಶ್ ನಡುವಿನ ಸಂಬಂಧದ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಪವಿತ್ರಾ ಮತ್ತು ನರೇಶ್ ಮದುವೆಯಾಗಿದ್ದಾರಂತೆ, ಮದುವೆಯಾಗ್ತಾರಂತೆ ಎಂಬ ಅಂತೆ-ಕಂತೆ ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ ತುಂಬೆಲ್ಲಾ ಹರಿದಾಡಿದ್ದವು. ಕೊನೆಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಕೂಡ ಸಾಕಷ್ಟು ಆರೋಪ ಮಾಡಿದ್ದರು. ‘ನನ್ನ ಪತಿ ನರೇಶ್ ನನಗೆ ಮೋಸ ಮಾಡಿದ್ದಾರೆ. ನರೇಶ್ಗೆ ಮೂರು ಮಕ್ಕಳಿದ್ದಾರೆ. ಮೂರು ಮದುವೆಯಿಂದಲೂ ಒಂದೊಂದು ಮಗು ಆಗಿದೆ.. ನನ
ಗೆ ಡಿವೋರ್ಸ್ ನೋಟಿಸ್ ಕಳಿಸಿದ್ದಾರೆ. ನಾನು ಕಾನೂನು ಮೂಲಕ ಹೋರಾಡುತ್ತೇನೆ. ಖಂಡಿತ ಇದಕ್ಕೆಲ್ಲ ನಾನು ಉತ್ತರ ನೀಡುತ್ತೇನೆ. ಮದುವೆ ಆದಾಗಿನಿಂದ ಇದೇ ಕರ್ಮ ಆಗಿದೆ. ಸಂಸಾರ ಅಂದಮೇಲೆ ಏರುಪೇರು ಇರೋದು ಸಹಜ. ಅವರು ಹೇಗೆಲ್ಲ ನಡೆದುಕೊಂಡಿದ್ದಾರೆ ಎಂಬುದನ್ನು ಹೇಳಿದ್ದೇನೆ. ನಾನು ಮಾಡಿದ ಆರೋಪಗಳನ್ನು ಸಾಬೀತುಪಡಿಸಿದ್ದೇನೆ. ನಮ್ಮತ್ತೆ ಇದ್ದಿದ್ದರೆ ಈ ಪರಿಸ್ಥಿತಿಯೇ ಬರುತ್ತಿರಲಿಲ್ಲ. ನನಗೆ ಅನ್ಯಾಯ ಆಗಿದೆ, ನಾನು ಕೇಳುತ್ತಿದ್ದೇನೆ’ ಎಂದೆಲ್ಲ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟಿ ಪವಿತ್ರಾ ಲೋಕೇಶ್ ” ‘ಇದು ತುಂಬಾ ಪರ್ಸನಲ್ ವಿಷಯ. ನನ್ನೆಲ್ಲಾ ನೋವು-ಸುಖದಲ್ಲಿ ನರೇಶ್ ಭಾಗಿಯಾಗಿದ್ದಾರೆ. ಹೀಗಾಗಿ, ಈಗ ಅವರ ಸಂಕಷ್ಟದ ಸಮಯದಲ್ಲಿ ನಾನು ಅವರ ಜೊತೆಗೆ ಇರುತ್ತೇನೆ. ನಾಳೆ ಏನಾಗುತ್ತೆ ಅಂತ ಈಗಲೇ ನಾನು ಹೇಳೋಕೆ ಆಗಲ್ಲ. ಅಫ್ ಕೋರ್ಸ್ ನಾವು ಜೊತೆಗಿರ್ತೀವಿ. ನಾವು ಅಟ್ಯಾಚ್ ಆಗಿದ್ದೀವಿ. ಸ್ನೇಹಕ್ಕಿಂತ ಒಂದು ಹೆಜ್ಜೆ ಮುಂದೆನೇ ಇದೆ ಅಂದುಕೊಳ್ಳಿ. ಅದರಲ್ಲಿ ತಪ್ಪೇನು? ನರೇಶ್ ಪತ್ನಿ ರಮ್ಯಾ ಬಳಿ ಇರುವ ಒಡವೆ ತರಹದ್ದೇ ನನ್ನ ಬಳಿ ಯಾಕೆ ಇರಬಾರದು? ನಾನು ಕಷ್ಟ ಪಟ್ಟಿದ್ದೇನೆ, ಕೆಲಸ ಮಾಡಿದ್ದೇನೆ. ಬೇಕಾದಷ್ಟು ಒಡವೆ ನಾನೇ ಕೊಂಡುಕೊಂಡಿದ್ದೇನೆ. ಇನ್ಸ್ಟಾಲ್ಮೆಂಟ್ನಲ್ಲೂ ಒಡವೆ ಖರೀದಿ ಮಾಡಿದ್ದೇನೆ. ಅದು ಯಾವ ಅಂಗಡಿ ಅಂತಲೂ ನಿಮಗೆ ತೋರಿಸುತ್ತೇನೆ. ನನ್ನ ಬಳಿ ಬೇಕಾದಷ್ಟು ಒಡವೆ ಇದೆ. ನಾನು ಕಾಲೇಜಿನಲ್ಲಿ ಓದುವಾಗ ನನ್ನ ತಾಯಿ ನನಗೆ 2 ಬಳೆ 1 ಚೇನ್ ಮಾಡಿಸಿಕೊಟ್ಟಿದ್ದರು. ಅದಾದ್ಮೇಲೆ ನಾನು ನನ್ನ ಸಂಪಾದನೆಯಲ್ಲಿ ಬೇಕಾದಷ್ಟು ಒಡವೆ ಖರೀದಿ ಮಾಡಿದ್ದೇನೆ. ಅದಕ್ಕೆಲ್ಲಾ ದಾಖಲಾತಿ ಇದೆ’ ಎಂದು ರಮ್ಯಾ ಆರೋಪಕ್ಕೆ ತಿರುಗೇಟು ನೀಡಿದ್ದರು ಪವಿತ್ರಾ ಲೋಕೇಶ್.
ಸದ್ಯ ಪವಿತ್ರಾ ಲೋಕೇಶ್ ಮತ್ತು ನರೇಶ್ ಮದುವೆ ಆಗುವ ಕುರಿತು ಅಧಿಕೃತ ಮಾಹಿತಿ ಸಿಕ್ಕಿದೆ. ಅಂದಹಾಗೆ, ತೆಲುಗು ಚಿತ್ರರಂಗದಲ್ಲೂ ಬ್ಯುಸಿ ಇರುವ ಪವಿತ್ರಾ, ನರೇಶ್ ಜೊತೆಗೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
New Year ✨
— H.E Dr Naresh VK actor (@ItsActorNaresh) December 31, 2022
New Beginnings 💖
Need all your blessings 🙏
From us to all of you #HappyNewYear ❤️
– Mee #PavitraNaresh pic.twitter.com/JiEbWY4qTQ