Ad Widget

ಮಂಗಳೂರು : ಜ್ವರದಿಂದ ಬಳಲುತ್ತಿದ್ದ 6 ನೇ ತರಗತಿ ಬಾಲಕ ಮೃತ್ಯು – 2 ವರ್ಷದ ಹಿಂದೆಯಷ್ಟೆ ಪತಿಯನ್ನು ಕಳೆದುಕೊಂಡಿದ್ದ ಮಹಿಳೆಗೆ ಇದೀಗ ಮಗನೂ ಇಲ್ಲ

WhatsApp Image 2022-12-30 at 16.20.13
Ad Widget

Ad Widget

Ad Widget

ಡಿ 30 :  ತಲೆನೋವು,ಜ್ವರದಿಂದ ಬಳಲುತ್ತಿದ್ದ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಶ್ವಿತ್  ಡಿ 30 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳಿಂದ ಜ್ವರ , ತಲೆನೋವು ಎನ್ನುತ್ತಿದ್ದ ಬಾಲಕ ಅಶ್ವಿನ್‌ ಗೆ ಕೊನೆಯ ಕ್ಷಣದಲ್ಲಿ ಮಿದುಳು ಜ್ವರದ ಲಕ್ಷಣ ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಬಾಲಕ ಮೆದುಳು ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

Ad Widget

Ad Widget

Ad Widget

Ad Widget

Ad Widget

ಅಶ್ವಿತ್ ನಾಳೆ ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಸ್ಕಿಟ್ ನಲ್ಲೂ ಭಾಗವಹಿಸಲು ತಯಾರಿ ನಡೆಸಿದ್ದ. ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಶಾಲಾ ಆಡಳಿತ ಮಂಡಳಿ ,ಕುಟುಂಬ ಹಾಗೂ ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಎರಡು ವರ್ಷಗಳ ಹಿಂದೆ ಅಶ್ವಿತ್ ನ ತಂದೆ ಅವಘಡವೊಂದರಲ್ಲಿ ಸಾವನ್ನಪ್ಪಿದ್ದರು.ಕೊಲ್ಯ ಸಾರಸ್ವತ ಕಾಲನಿಯ ಮನೆಯಲ್ಲಿ ಅಶ್ವಿತ್ ತಾಯಿಯೊಂದಿಗೆ ವಾಸವಿದ್ದ.ಅಶ್ವಿತ್ ಶಾಲೆಯಲ್ಲೂ ಪ್ರತಿಭಾನ್ವಿತನಾಗಿದ್ದು ಶಿಕ್ಷಕರ ಪ್ರೀತಿ ಪಾತ್ರನಾಗಿದ್ದ.

  ಅಶ್ವಿನ್‌ ಗೆ ಮಿದುಳು ಜ್ವರದ ವ್ಯಾಕ್ಸಿನ್‌ ನೀಡಲಾಗಿತ್ತೆ ಎನ್ನುವುದು  ಇನ್ನೂ ಧೃಡಪಟ್ಟಿಲ್ಲ.ಈ ಬಗ್ಗೆ ತಜ್ನ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಬಾಲಕನ ಅಂತ್ಯ ಸಂಸ್ಕಾರ ಗುರುವಾರ ಮಧ್ಯಾಹ್ನ ನಡೆದಿದೆ. 11 ರ ಹರೆಯದ ಪ್ರತಿಭಾನ್ವಿತ ಬಾಲಕನ ಸಾವಿಗೆ  ಇಡೀ ಗ್ರಾಮ ರೋಧಿಸಿತ್ತು.

Ad Widget

Ad Widget

Ad Widget

Ad Widget

ಸಣ್ಣ ಪ್ರಾಯದವರು ಸಡನ್ ಆಗಿ ಮೃತಪಡುತ್ತಿರುವುದು ಕಳವಳಕಾರಿ –ವಿಡಿಯೋ ನೋಡಿ

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: