ಪುತ್ತೂರು : ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ನ ಸದಸ್ಯ ಗಿರೀಶ್ ಗೌಡ ಮರಿಕೆ ಎನ್ನುವವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಡಿ.29ರ ಬೆಳಗ್ಗಿನ ಜಾವ ನಿಧನರಾದರು.
ಇವರಿಗೆ ಸುಮಾರು 34 ವರ್ಷ ವಯಸ್ಸಾಗಿತ್ತು. ಆರ್ಯಾಪು ಪಂಚಾಯತ್ ನ 4 ನೇ ವಾರ್ಡಿನ ಕ್ರಿಯಾಶೀಲ ಬಿಜೆಪಿ ಬೆಂಬಲಿತ ಸದಸ್ಯರಾದ ಗಿರೀಶ್ ಗೌಡ ಮರಿಕೆ ಇವರು ಕೆಲ ಸಮಯದಿಂದ ಜಾಂಡಿಸ್ ಖಾಯಿಲೆಯಿಂದ ಬಳಲುತಿದ್ದರು.
ಎರಡು ದಿನಗಳ ಹಿಂದೆಯಷ್ಟೇ ಹೊಟ್ಟೆ ನೋವು ಉಲ್ಬಣಿಸಿದ ಕಾರಣ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಡಿ 29ರ ಬೆಳಗ್ಗಿನ ಜಾವ ನಿಧನರಾದರು.
ಮೃತರು ತಂದೆ ನಿವೃತ್ತ ಶಿಕ್ಷಕ ಬೋಜಪ್ಪ ಗೌಡ , ತಾಯಿ ಹಾಗು ಒಬ್ಬ ಸಹೋದರನನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವು ಬೆಳಿಗ್ಗೆ ಅಂದಾಜು 10 ಗಂಟೆಗೆ ಮನೆಗೆ ತಲುಪುವುದೆಂದು ಮೃತರ ಕುಟುಂಬದವರು ತಿಳಿಸಿದ್ದಾರೆ.