Ad Widget

ಪುತ್ತೂರು: ಜನವರಿ 4ರಂದು ಅಡಿಕೆ ಬೆಳೆಗಾರರ ಜಿಲ್ಲಾ ಮಟ್ಟದ ಹಕ್ಕೊತ್ತಾಯ ಸಮಾವೇಶ

WhatsApp Image 2022-12-29 at 19.12.20
Ad Widget

Ad Widget

Ad Widget

ಪುತ್ತೂರು: ಡಿ 29 : ಒಂದೆಡೆ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿರುವ ನಡುವೆಯೇ, ಮತ್ತೊಂದೆಡೆ ಅಡಿಕೆ ಬೆಳೆಗೆ ನಾನಾ ರೀತಿಯ ಸಂಕಟಗಳು ಎದುರಾಗುತ್ತಿದ್ದು, ಬೆಳೆಗಾರರು ಆತಂಕಕ್ಕೆ ತುತ್ತಾಗಿದ್ದಾರೆ. ಉತ್ತಮ ಧಾರಣೆಯ ಖುಷಿಯ ನಡುವೆಯೂ ರೋಗ ರುಜಿನ ಹಾಗೂ ಬೆಳೆ ನಿಷೇಧದ ತೂಗುಕತ್ತಿ ನೇತಾಡುತ್ತಿದ್ದು ರೈತರನ್ನು ವಸ್ತುಶಃ ಭೀತಿಗೆ ತಳ್ಳುತ್ತಿದೆ.

Ad Widget

Ad Widget

Ad Widget

Ad Widget

ಈ ವಿಷಮ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಲು ಮತ್ತು ಬೆಳೆಗಾರರ ಮನದಾಳದ ದುಗುಡ ಹಾಗೂ ಹಕ್ಕೊತ್ತಾಯಗಳನ್ನು ಸಮರ್ಥವಾಗಿ ಸರಕಾರದ ಮುಂದಿಡಲು ವಿಜಯ ಕರ್ನಾಟಕ ಪತ್ರಿಕೆ ಮುಂದಾಗಿದೆ.  ಈ ನಿಟ್ಟಿನಲ್ಲಿ ಜನವರಿ 4ರಂದು ಬುಧವಾರ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಅಡಿಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶ ಸಂಘಟಿಸಿದೆ.

Ad Widget

Ad Widget

Ad Widget

Ad Widget

ಬೆಳಗ್ಗೆ 10 ಗಂಟೆಗೆ ಪುತ್ತೂರಿನ ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಹಕ್ಕೊತ್ತಾಯ ಸಮಾವೇಶ ನಡೆಯಲಿದೆ.ಈ ಸಮಾವೇಶದಲ್ಲಿ ಇಲಾಖಾ ಮಟ್ಟದ ಅಧಿಕಾರಿಗಳು, ವಿಜ್ಞಾನಿಗಳು, ಸರಕಾರದ ಪ್ರತಿನಿಧಿಗಳು, ಬೆಳೆಗಾರ ಸಂಸ್ಥೆಗಳ ಮುಖಂಡರು, ನಾನಾ ರೈತ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ರೈತರು ತಮ್ಮ ಅಹವಾಲು, ದುಗುಡ, ಬೇಡಿಕೆ, ಮುನ್ನೋಟಗಳನ್ನು ಮಂಡಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ, ಪರಿಹಾರ ಕ್ರಮಗಳು, ಪರ್ಯಾಯ ಮಾರ್ಗೋಪಾಯಗಳು, ಸರಕಾರದಿಂದ ಸಿಗುವ ಉತ್ತೇಜನಗಳು, ಸರಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಮಂಡಿಸಲಾಗುತ್ತದೆ. ವಿಜ್ಞಾನಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ರೈತ ಸಂಸ್ಥೆಗಳು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲು ಅವಕಾಶವಿದೆ.

Ad Widget

Ad Widget

ಸಮಾವೇಶದಲ್ಲಿ ಸಮಗ್ರವಾಗಿ ನಿರ್ಣಯ ಅಂಗೀಕರಿಸಿ ಅದನ್ನು ಸರಕಾರಕ್ಕೆ ತಲುಪಿಸಲಾಗುತ್ತದೆ. ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ 2019ರಲ್ಲಿ ಅಡಿಕೆ ಬೆಳೆಯುವ ಜಿಲ್ಲೆಗಳಲ್ಲಿ ಸರಣಿ ಸಮಾವೇಶ ನಡೆಸಿ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಿದ ಫಲವಾಗಿ ಅಡಿಕೆ ಕಾರ್ಯಪಡೆ ರಚನೆಯೂ ಸೇರಿದಂತೆ ಅನೇಕ ಉಪಕ್ರಮಗಳನ್ನು ಸರಕಾರ ಕೈಗೊಂಡಿತ್ತು. ಇದೀಗ ಮತ್ತೊಮ್ಮೆ ಅಡಿಕೆ ಬೆಳೆಗಾರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿಜಯ ಕರ್ನಾಟಕ ಬೆಳೆಗಾರರ ಪರ ನಿಂತಿದೆ.

ದ.ಕ. ಜಿಲ್ಲಾ ಮಟ್ಟದ  ಸಮಾವೇಶದಲ್ಲಿ ಜಿಲ್ಲೆಯ ಅಡಿಕೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಯ ಆರ್ಥಿಕ ಬೆನ್ನೆಲುಬಾದ ಅಡಿಕೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಸಂಸ್ಥೆಯೂ ಪ್ರಕಟನೆಯಲ್ಲಿ  ವಿನಂತಿಸಿದೆ.

Arecanut : ಅಡಕೆ ಬೆಳೆಗೆ ಇನ್ನು ಭವಿಷ್ಯವಿಲ್ಲ – ಅದಕ್ಕೆ ಸರಕಾರ ಪ್ರೋತ್ಸಾಹ ಕೊಡಬಾರದು – ಮುಂದಿನ 5 -10 ವರ್ಷಗಳಲ್ಲಿ ಬೆಳೆಗಾರ ಬೀದಿಗೆ ಬೀಳಲಿದ್ದಾನೆ : ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ – ಆಮದು ನಿಲ್ಲಿಸಿ ಎಂದಾಗ ಮೌನ..!

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: