ಪುತ್ತೂರು: ಡಿ 29 : ಆಮದಾಗುವ ಅಡಿಕೆಯನ್ನು ನಿಲ್ಲಿಸಿ, ದೇಶದ ಅಡಿಕೆಯನ್ನೇ ಬಳಸಲು ಪ್ರೋತ್ಸಾಹ ನೀಡಬೇಕಿದ್ದ ಸರಕಾರದ ಪ್ರತಿನಿಧಿ ಗೃಹ ಸಚಿವ ಅರಗ ಜ್ಞಾನೇಂದ್ರರವರು ಅಡಿಕೆಗೆ ಸರಕಾರ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಎಂದು ಅಧಿವೇಶನದಲ್ಲಿ ಹೇಳಿಕೆ ನೀಡಿದ್ದು ಖಂಡನೀಯ ಎಂದು ಮಾಜಿ ಕಾಂಗ್ರೆಸ್ ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದ್ದಾರೆ. ಮುಂದುವರಿದು , ಈ ಹೇಳಿಕೆ ನೀಡುವ ಮೂಲಕ ಸಚಿವರು ಆಡಿಕೆ ಬೆಳೆಗಾರರನ್ನು ಅವಮಾನಿಸಿದ್ದಾರೆಂದು ತಿಳಿಸಿದ್ದಾರೆ.
ಇಂದು ಪುತ್ತೂರಿನ ಪಕ್ಷದ ಕಛೇರಿಯಲ್ಲಿ ಮಾತನಾಡಿದ ಅವರು “ ಪುತ್ತೂರು ಸೇರಿದಂತೆ ದ.ಕ ಜಿಲ್ಲೆಯ ಅಭಿವೃದ್ಧಿಗೆ, ಇಲ್ಲಿ ಅಗಾಧ ಸಂಖೆಯಲ್ಲಿ ವಿದ್ಯಾ ಸಂಸ್ಥೆಗಳು ಆರಂಭವಾಗಲು , ಒಟ್ಟಾರೆಯಾಗಿ ಜಿಲ್ಲೆಯ ಸಮಗ್ರ ಅಭಿವೃದ್ದಿಯಲ್ಲಿ ಆಡಿಕೆ ಬೆಳೆಯ ಪಾತ್ರ ಹಿರಿದಾಗಿದೆ. ಇಂತಹ ಅಡಿಕೆ ಬೆಳೆಗೆ ಸರಕಾರ ಪ್ರೋತ್ಸಾಹ ನೀಡಬಾರದು ಎಂದು ಸರಕಾರದ ಪ್ರತಿನಿಧಿಯಾಗಿರುವ ಸಚಿವರೇ ಹೇಳಿರುವುದು ದುರದೃಷ್ಟಕಾರ ಎಂದು ಅವರು ಹೆಳಿದರು.
ಅಡಿಕೆಯ ದರ ಕುಸಿತವಾಗುತ್ತಿರುದಕ್ಕೆ ಕಾರಣಗಳನ್ನು ಸರಕಾರ ಯೋಚಿಸಬೇಕು. ಬೆಳೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬಾರದು ಎನ್ನುವುದಕ್ಕಿಂತ ಅದಕ್ಕೆ ಪರಿಹಾರ ಯಾವುದು ಕಂಡು ಹಿಡಿಯಬೇಕು. ಶಿವಮೊಗ್ಗ, ದ.ಕ ಜಿಲ್ಲೆಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಅಡಿಕೆ ಈಗ ಇತರ ಜಿಲ್ಲೆಗಳಲ್ಲೂ ಪ್ರಾರಂಭವಾಗಿದೆ. ಆಮದಾಗುವ ಅಡಿಕೆಯನ್ನು ನಿಲ್ಲಿಸಿ, ದೇಶದ ಅಡಿಕೆಯನ್ನೇ ಬಳಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.
ಅಡಿಕೆ ಭಾರತದ ಇತಿಹಾಸ ಪುರಾಣಗಳಲ್ಲಿ ಗೌರದ ಸ್ಥಾನವಿದೆ. ಶುಭ ಸಮಾರಂಭಗಳಲ್ಲಿ ವೀಳ್ಯ, ಅಡಿಕೆಗೆ ಗೌರವದ ಸ್ಥಾನವಿದೆ. ಅಡಿಕೆಯಿಂದ ಎಲ್ಲಾ ಆಹಾರ ವಸ್ತುಗಳ ತಯಾರಿಕೆಯಾಗುತ್ತದೆ. ಇಂತಹ ಅಡಿಕೆಗೆ ಪ್ರೋತ್ಸಾಹ ಕೊಡುವುದಿಲ್ಲ ಎನ್ನುವುದನ್ನು ಬಿಟ್ಟು ಆಮದು ಮಾಡುವ ಅಡಿಕೆಗಳನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ರೈತರು, ಅಡಿಕೆ ಬೆಳೆಗಾರರೊಂದಿಗೆ ಪ್ರತಿಭಟನೆ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಎಚ್ಚರಿಸಿದರು.