ಮಂಗಳೂರು: ರಾಜ್ಯವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಅಡಿಕೆ ಕೃಷಿ ಮಿತಿ ಮೀರಿ ವಿಸ್ತರಣೆಯಾಗುತ್ತಿರುವುದನ್ನು ನೋಡಿದರೆ ಅಡಿಕೆಗೆ ಹೆಚ್ಚು ಕಾಲ ಭವಿಷ್ಯವಿಲ್ಲ .5-10 ವರ್ಷದಲ್ಲಿ ಅಡಿಕೆ ಬೆಲೆ ಕುಸಿದು ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಬಹುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಡಿ 28 ರಂದು ಹೇಳಿದ್ದಾರೆ. ಸದನದಲ್ಲಿ ಸಚಿವರು ಅಡಿಕೆ ಭೆಳೆಯ ಭವಿಷ್ಯದ ಬಗ್ಗೆ ಈ ರೀತಿ ನಕಾರತ್ಮಕವಾಗಿ ಮಾತನಾಡಿರುವುದು ಎರಡನೇ ಬಾರಿಯಾಗಿದೆ.
ಈ ವೇಳೆ ಸದನದಲ್ಲಿ ಶಾಸಕರೊಬ್ಬರು ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ನೀವು ಅಡಿಕೆ ಆಮದಾಗುವುದನ್ನು ನಿಲ್ಲಿಸಿ. ಆಗ ಇಲ್ಲಿನ ಬೆಳೆಗಾರರಿಗೆ ಸೂಕ್ತ ದರ ಸಿಗುತ್ತದೆ ಎಂದಾಗ ಸಚಿವರು ಮೌನಕ್ಕೆ ಜಾರಿದ್ದಾರೆ. ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೆ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಭೂತನ್ ನಿಂದ ಷರತ್ತು ರಹಿತವಾಗಿ ಆಡಿಕೆ ಆಮದಿಗೆ ಅನುಮತಿ ನೀಡಿರುವುದು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. ಈ ಹಿಂದೆ ವಿದೇಶದಿಂದ ಅಡಿಕೆ ಆಮದಾಗಬೇಕಾದರೆ ಕನಿಷ್ಟ ಆಮದು ದರ ನಿಗದಿ ಪಡಿಸಲಾಗಿತ್ತು . ಆದರೇ ಈ ಯಾವುದೇ ನಿರ್ಬಂಧಗಳಿಲ್ಲದೇ ಭೂತನ್ ನಿಂದ ಆಡಿಕೆ ಆಮದಿಗೆ ಈಗ ಕೇಂದ್ರ ಸರಕಾರ ಅನುಮತಿ ನೀಡಿದೆ.
ಅರಗ ಜ್ಞಾನೇಂದ್ರ ಹೇಳಿದ್ದೇನು ?
ಡಿ 28 ರಂದು ವಿಧಾನಸಭೆಯಲ್ಲಿ ಅಡಕೆ ಬೆಳೆ ಬಗ್ಗೆ ಚರ್ಚೆ ನಡೆಯುವ ಹೊತ್ತಿನಲ್ಲಿ ಮಧ್ಯಪ್ರವೇಶಿಸಿದ ಗೃಹ ಸಚಿವರು, ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳು ಮತ್ತು ಬಯಲು ಸೀಮೆಯ ಕೆಲ ಜಿಲ್ಲೆಗಳಿಗೆ ಸೀಮಿತವಾಗಿದ್ದ ಅಡಿಕೆ ಬೆಳೆ ಅನೇಕ ಜಿಲ್ಲೆಗಳಿಗೆ ವಿಸ್ತರಣೆಯಾಗುತ್ತಿದೆ. ಭತ್ತ, ರಾಗಿ, ಕಬ್ಬು ಮತ್ತಿತರ ಬೆಳೆ ಬೆಳೆಯುತ್ತಿದ್ದ ರೈತರೂ ಅಡಿಕೆ ತೋಟ ಮಾಡುತ್ತಿದ್ದಾರೆ. ಅಡಿಕೆಗೆ ಉತ್ತಮ ಬೆಲೆ ಇದೆ ಎಂದು ಎಲ್ಲ ರೈತರು ಅದನ್ನೇ ಬೆಳೆಯಲು ಮುಂದಾದರೆ 5 -10 ವರ್ಷದಲ್ಲಿ ಮಾರಕವಾಗಲಿದೆ ಎಂದರು.
ಸದನದಲ್ಲಿ ನಡೆದ ಚರ್ಚೆಯ ವಿಡಿಯೋ ನೋಡಿ :
ಆಂಧ್ರಪ್ರದೇಶದಲ್ಲಿ 2 ಲಕ್ಷ ಹೆಕ್ಟೇರ್ ನಲ್ಲಿ ಅಡಕೆ ಹಾಕಲಾಗಿದೆ. ಬಯಲು ಸೀಮೆಯಲ್ಲಿ ಅಡಕೆ ಕೃಷಿ ವ್ಯಾಪಿಸಿಕೊಳ್ಳುತ್ತಿದೆ.ವರ್ಷದಲ್ಲಿ 1 ಕೋಟಿ ಅಡಕೆ ಸಸಿ ನರ್ಸರಿಗಳಲ್ಲಿ ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಇನ್ನು 5-10 ವರ್ಷದಲ್ಲಿ ಅಡಕೆ ಬೆಳೆಗಾರರು ಬೀದಿಗೆ ಬರುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಡಕೆಗೆ ಭಾರಿ ಬೆಲೆ ಬಂದಿದ್ದು ದೊಡ್ಡ ಸಮಸ್ಯೆಯಾಗಿದೆ. ಎಲ್ಲರೂ ಸಾಲಸೋಲ ಮಾಡಿಯಾದರೂ ಅಡಕೆ ಕೃಷಿಗೆ ಮುಂದಾಗುತ್ತಿದ್ದಾರೆ. ಆದರೆ, ಮುಂಬರುವ ದಿನಗಳಲ್ಲಿ ಅಡಕೆ ಕೃಷಿಕನ ಕೈ ಹಿಡಿಯದು. ಸರ್ಕಾರ ಈಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಿಯಮ 69 ಅಡಿಯಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಂಡ ಶಾಸಕ ಎಚ್.ಡಿ. ರೇವಣ್ಣ, ನಾನು ಕೂಡ 40 ಎಕರೆಯಲ್ಲಿ ಅಡಕೆ ಹಾಕಿದ್ದೇನೆ ಎಂದದ್ದು ಚರ್ಚೆ ಇನ್ನಷ್ಟು ಕಾವೇರಲು ಕಾರಣವಾಯಿತು.

ಇದಕ್ಕೆ ಧನಿಗೂಡಿಸಿದ ಸಭಾಧ್ಯಕ್ಷ ಕಾಗೇರಿ, ಟೊಮೆಟೊ ಬೆಳೆದು ರಸ್ತೆಗೆ ಎಸೆದಂತೆ ಆಗದಿದ್ದರೆ ಸಾಕು ಅಂದಿದ್ದಾರೆ. ಆಗ ಜೆಡಿಎಸ್ನ ಅನ್ನದಾನಿ. ಕೇಂದ್ರ ಸರ್ಕಾರ ಅಡಕೆ ಆಮದನ್ನು ನಿಲ್ಲಿಸಬೇಕು. ನೀವು ಆಮದು ನಿಲ್ಲಿಸಿದರೆ ಇಲ್ಲಿಯ ಕೃಷಿಕರಿಗೆ ಸಮಸ್ಯೆಯಿಲ್ಲ ಎಂದು ಆಗ್ರಹಿಸಿದರು.
ಆಗ ಗೃಹ ಸಚಿವರು ಉತ್ತರಿಸದೆ ಕುಳಿತುಕೊಂಡಿದ್ದಾರೆ. ಆ ಶಾಸಕರ ಮಾತಿಗೆ ಸಭಾಧ್ಯಕ್ಷರೇ ನೋಡುವ ನೋಡುವ ಅಂದು ಚರ್ಚೆ ನಿಲ್ಲಿಸಿದ್ದಾರೆ. ಆಗ ಮತ್ತೊಬ್ಬ ಶಾಸಕರು ಎದ್ದು ನಿಂತು ಅಡಿಕೆ ಬೆಳೆದಷ್ಟೇ ಪಾನ್ ಬೀಡ ತಿನ್ನುವವರು ಜಾಸ್ತಿಯಾಗಿದ್ದಾರೆ ಅಡಿಕೆಗೆ ಏನೂ ಸಮಸ್ಯೆಯಿಲ್ಲ ಎಂದಿದ್ದಾರೆ.
ಅರಗ ಜ್ಞಾನೇಂದ್ರ ಹೇಳಿದ್ದೇನು?- ವಿಡಿಯೋ ನೋಡಿ
ಹಿಂದೆಯೂ ಅಡಿಕೆ ಬೆಳೆಯ ವಿರುದ್ದ ನಾಲಿಗೆ ಹರಿಬಿಟ್ಟಿದ್ದ ಅರಗ
‘ಅಡಿಕೆ ಉತ್ಪನ್ನ ಕೇವಲ ಜಗಿದು ಉಗಿಯಲಿಕ್ಕಷ್ಟೆ ಉಪಯೋಗ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ರೈತರು ಅಡಿಕೆ ಬೆಳೆದು ಹೈರಾಣಾಗಿದ್ದಾರೆ.ಇದೀಗ ರಾಜ್ಯದ ಎಲ್ಲ ಕಡೆ ಹೊಸದಾಗಿ ಅಡಿಕೆ ಬೆಳೆಯಲು ಮುಂದಾಗುತ್ತಿದ್ದು, ಮುಂದೊಂದು ದಿನ ಅಡಿಕೆ ಬೆಲೆ ಮತ್ತಷ್ಟು ಕುಸಿತದಿಂದ ಅವರಿಗೆ ಮುಳುವಾಗಲಿದೆ’ ಎಂದು ಸಚಿವ ಆರಗ ಜ್ಞಾನೇಂದ್ರ ಇತ್ತಿಚೆಗೆಷ್ಟೇ ವಿಧಾನಸಭೆಯಲ್ಲಿ ಹೇಳಿದ್ದಾರೆ.
ದರ ಕುಸಿತದ ಭವಿಷ್ಯ ನುಡಿದಿದ್ದ ಕೇಂದ್ರ ಸಚಿವೆ :
ಗೃಹ ಸಚಿವರ ಹೇಳಿಕೆಗೆ ಕಾರ್ಪೊರೇಟ್ ಒತ್ತಡದ ಮತ್ತು ಆಮದು ಹೆಚ್ಚು ಮಾಡಲು ಈ ಮಾತುಗಳನ್ನು ಆಡುತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ, ಸಚಿವ ಆರಗ ಜ್ಞಾನೇಂದ್ರರು ಸ್ವತ: ಅಡಿಕೆ ಬೆಳೆಗಾರರು ಎನ್ನುವುದು ವಿಶೇಷ . ಅಡಿಕೆ ಬೆಳೆಗಾರರು ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಕಾನೀಯೂರಿನಲ್ಲಿ ಮಾತನಾಡಿ “ ಮುಂದಿನ ದಿನಗಳಲ್ಲಿ ಅಡಿಕೆ ದರ ಕುಸಿಯಬಹುದು ಎಂದು ಎಚ್ಚರಿಸಿದರು.
ಅಡಿಕೆಗೆ ಭವಿಷ್ಯವಿಲ್ಲ : ಅರಗ ಜ್ಞಾನೇಂದ್ರ ವಿಡಿಯೋ