ONGC MRPL Recruitment 2023: ONGC ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ONGC MRPL ನ ಅಧಿಕೃತ ವೆಬ್ಸೈಟ್ mrpl.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
• ಕೆಮಿಕಲ್ ವಿಭಾಗ- 28 ಹುದ್ದೆಗಳು
• ಮೆಕಾನಿಕಲ್ ವಿಭಾಗ- 24 ಹುದ್ದೆಗಳು
• ಸಿವಿಲ್ ವಿಭಾಗ- 2 ಹುದ್ದೆಗಳು
• ಎಲೆಕ್ಟ್ರಿಕಲ್ ವಿಭಾಗ- 7 ಹುದ್ದೆಗಳು
• ಇನ್ಸ್ಟ್ರುಮೆಂಟೇಶನ್- 11 ಹುದ್ದೆಗಳು
• ಕಂಪ್ಯೂಟರ್ ಸೈನ್ಸ್- 5 ಹುದ್ದೆಗಳು
• ಕೆಮಿಸ್ಟ್ರಿ ವಿಭಾಗ- 1 ಹುದ್ದೆ
• ಒಟ್ಟು ಹುದ್ದೆಗಳ ಸಂಖ್ಯೆ- 78
ಅರ್ಹತಾ ಮಾನದಂಡಗಳು:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ BE/BTech/MSc ತೇರ್ಗಡೆಯಾಗಿರಬೇಕು.
ವಯೋಮಿತಿ:
27 ವರ್ಷದವರೆಗಿನ ಕಾಯ್ದಿರಿಸದ (UR) ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ (EWS) ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹಾಗೆಯೇ OBC (NCL)/ SC/ ST ವರ್ಗಕ್ಕೆ 3 ರಿಂದ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನಾಗಿ 50 ಸಾವಿರದಿಂದ 1 ಲಕ್ಷ 60 ಸಾವಿರದವರೆಗೆ ಸಂಬಳ ನಿಗದಪಡಿಸಲಾಗುತ್ತದೆ.
ಅರ್ಜಿ ಶುಲ್ಕ:
• ಸಾಮಾನ್ಯ, EWS ಮತ್ತು OBC ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ- 118 ರೂ.
• SC/ ST/ PWBD/ ಮಾಜಿ ಸೈನಿಕ ವರ್ಗಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 15, 2023
ಅರ್ಜಿ ಸಲ್ಲಿಸುವುದು ಹೇಗೆ ?
ಈ ಹುದ್ದೆಗಳಿಗೆ https://www.mrpl.co.in/ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು https://mrpl.co.in/careers ಮಾಡಿ.